ಕೊರೊನ ಮಹಾಮಾರಿ ಎರಡನೇ ಅಲೆಯಿಂದ ಉಂಟಾಗಿರುವ ಸಂಕಷ್ಟದ ಈ ಲಾಕ್ ಡೌನ್ ನ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರಿಂದ ಪ್ರೇರೇಪಿತಗೊಂಡ ಮೈಸೂರಿನ ಕೆಲವು ಯುವಕರು “ವೀ ಕೇರ್ ಫಾರ್ ಯು ಮೈಸೂರು”ಎಂಬ ತಂಡದ ಸ್ವಯಂಸೇವಕರು ಜೀವ ಸೇವೆಯೇ ಈಶ ಸೇವೆ ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ಶ್ರೀ ರಾಮಕೃಷ್ಣ ಆಶ್ರಮ ಮೈಸೂರು ನ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಮುಕ್ತಿದಾನಂದಜೀ ಮಹರಾಜ್ ಅವರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ ಸುಮಾರು 40 ಕ್ಕೂ ಹೆಚ್ಚು ಅಂಗವಿಕಲರಿಗೆ ದಿನಸಿ ಕಿಟ್ ಅನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯವಾಗಿ ಶ್ರೀಯುತ ಪುರುಷೋತ್ತಮ್ ಅಗ್ನಿ ಮತ್ತು ಶ್ರೀಯುತ ವೈಶಾಕ್ ಹಾಗೂ ಸುವರ್ಣ ಬೆಳಕು ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ನಾಯಕ್ , ಹೊಯ್ಸಳ ಕರ್ನಾಟಕ ಸಂಘದ ರಂಗನಾಥ್ ಮತ್ತು ಸಾಮಾಜಿಕ ಕಾರ್ಯಕರ್ತರಾದ ಅರುಣ್ ಅವರು ಇದ್ದರು.
ಕಾರ್ಯಕ್ರಮದಲ್ಲಿ ದಿನಸಿ ಕಿಟ್ ಪಡೆದ ಸ್ವಾಭಿಮಾನಿ ವಿಶೇಷ ಚೇತನ ಸಂಘದ ಸದಸ್ಯರಾದ ಶಕುಂತಲಾ ಅವರು ಸಂತಸವನ್ನು ಹಾಗೂ ಕೆಲವು ಅಭಿಪ್ರಾಯಗಳನ್ನು ಈ ರೀತಿಯಾಗಿ ಹಂಚಿಕೊಂಡರು. ಸರ್ಕಾರವೇ ಪ್ರಸ್ತುತ ಆಡಳಿತದ ಗೊಂದಲದಲ್ಲಿ ನಮ್ಮ ಕೈ ಬಿಟ್ಟಿದೆ ಜೊತೆಗೆ ನಾವು ಯಾವುದೇ ಮುಖ್ಯವಾಹಿನಿಯಲ್ಲೂ ಗುರುತಾಗಿಲ್ಲ. ಇದರ ಮಧ್ಯೆ ನಾವೆಲ್ಲರೂ ರಸ್ತೆ ಬದಿಯ ಸಣ್ಣ ಅಂಗಡಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು. ಈ ಕರೋನಾ ಸಂಕಷ್ಟದಲ್ಲಿ ಜೀವನೋಪಾಯಕ್ಕೆ ತೊಂದರೆ ಎದುರಿಸುವಂತಾಯಿತು. ಕರೋನದ ಪ್ರಥಮ ಅಲೆಯಿಂದ ಹಿಡಿದು ಎರಡನೆಯ ಈ ಅಲೆಯವರೆಗೆ ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿ ಅಂಗವಿಕಲ ವಿಶೇಷ ಚೇತನರಾದ ನಾವೆಲ್ಲರೂ ತುಂಬಾ ಸಮಸ್ಯೆಗೆ ಸಿಲುಕುವಂತಾಯಿತು ಜೊತೆಗೆ ನಮಗೆ ಅಂಗವಿಕಲ ಮಾಸಿಕ ಭತ್ಯೆಯೂ ಕೂಡ ಮೂರು ನಾಲ್ಕು ತಿಂಗಳು ನಿಲ್ಲಿಸಲಾಗಿತ್ತು. “ವಿ ಕೇರ್ ಫಾರ್ ಮೈಸೂರು” ಸ್ವಯಂಸೇವಕರ ತಂಡದಿಂದ ದಿನಸಿ ಕಿಟ್ಟನ್ನು ಸ್ವೀಕರಿಸಿದ್ದೇವೆ. ಈ ಯುವಕರ ತಂಡಕ್ಕೆ ಮತ್ತು ಶ್ರೀ ರಾಮಕೃಷ್ಣ ಆಶ್ರಮದ ಯತಿಗಳಿಗೆ ನಾನು ಚಿರರುಣಿ ಎಂದು ತಿಳಿಸಿದರು.
ಪ್ರತಿಯೊಬ್ಬರಿಗೂ ಯಾವುದೇ ತೊಂದರೆ ಇಲ್ಲದೆ ಸಾಮಾಜಿಕ ಅಂತರ ಪಡೆದುಕೊಂಡು ಕಾರ್ಯಕ್ರಮದ ಫಲಾನುಭಾವಿಗಳಾಗಿ ಸಂತೋಷ ಪಟ್ಟೆವು. ಸರ್ಕಾರಕ್ಕೆ ಮನವಿ ಈಗಿನ ಬಜೆಟ್ ನಲ್ಲಿ ಅಂಗವಿಕಲರಿಗೆ ಅನುಕೂಲ ಆಗುವ ಯಾವುದೇ ಯೋಜನೆ ಉತ್ತಮ ಮಟ್ಟದಲ್ಲಿ ತರದೇ ಕಡೆಗಣಿಸಿದ್ದೀರಾ.ಯಾವುದೋ ಸಣ್ಣ ಪುಟ್ಟ ಅನುದಾನಗಳಿದ್ದರೂ ಅದು ನಮ್ಮ ಕೈ ಸೇರುವ ಹೊತ್ತಿಗೆ ಬೆಕ್ಕು ಅಡ್ಡ ಬಂದಿತೆನ್ನುವ ಗಾದೆಯ ಹಾಗೆ ಬೇರೆಯವರ ಪಾಲಾಗುತ್ತಿದೆ.ಜಿಲ್ಲಾ ಪುನರ್ವಸತಿ ಕೇಂದ್ರದಲ್ಲಿ ನಮಗೆ ಯಾವುದೇ ರೀತಿಯ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರವು ವ್ಯಾಕ್ಸಿನೇಷನ್ ಆರೋಗ್ಯ ಸೌಕರ್ಯವನ್ನು ಒದಗಿಸಿದೆ ಆದರೆ ಅಂಗವಿಕಲರಾದ ನಮಗೆ ಖುದ್ದಾಗಿ ಒಂದು ನಿಶ್ಚಿತ ಸ್ಥಳಕ್ಕೆ ಸಾಮಾನ್ಯ ಜನರ ಸಾಲಿನಲ್ಲಿನಿಂತು ಪಡೆಯಲಾಗುತ್ತಿಲ್ಲ. ಹೀಗಾಗಿ ಯಾವುದೇ ಸರ್ಕಾದರ ಯೋಜನೆಗಳಿಗೆ ಪೂರ್ಣ ಫಲಾನುಭವಿಗಳಾಗದೇ ಜೀವ ಹೆದರಿಕೆಯಿಂದ ಮನೆಯಲ್ಲೇ ಕುಳಿತ್ತಿದ್ದೇವೆ.
ಈ ಸಂಧರ್ಭದಲ್ಲಿ “ವಿ ಕೇರ್ ಫಾರ್ ಮೈಸೂರು” ತಂಡದಿಂದ ಪಡೆದ ದಿನಸಿ ಕಿಟ್ ನಿಂದಾಗಿ ನೆಮ್ಮದಿಯಾಗಿ ಹತ್ತು ಹದಿನೈದು ದಿನ ಜೀವನ ಸಾಗಿಸುವ ಆಸರೆ ದೊರಕಿತು.ಅವರಿಗೆ ನಮ್ಮ ಸ್ವಾಭಿಮಾನಿ ವಿಶೇಷ ಚೇತನ ಸಂಘದಿಂದ ಅನಂತ ಧನ್ಯವಾದಗಳನ್ನು ತಿಳಿಸುತ್ತೇವೆ ಹಾಗೂ ಇನ್ನೂ ಹೆಚ್ಚಿನ ದಾನಿಗಳು ಈ ರೀತಿಯ ಸಾಮಾಜಿಕ ಸೇವೆಗಳನ್ನು ಕೈಗೊಳ್ಳಲ್ಲಿ ಬಡಜನರಿಗೆ, ಅಂಗವಿಕಲರಿಗೆ ನೆರವಾಗಲಿ ಎಂದು ಮನವಿ ಮಾಡಿಕೊಳ್ಳುತ್ತೇನೆಂದು. ನಮ್ಮ ವರದಿಗಾರರೊಂದಿಗೆ ಅಭಿಪ್ರಾಯ ಹಂಚಿಕೊಂಡರು.