ಮೈಸೂರು 17.ಆದಿಗುರು ಶಂಕರಾಚಾರ್ಯರ ಜಯಂತಿಯ ಅಂಗವಾಗಿ ಮೈಸೂರು ಬ್ರಾಹ್ಮಣ ಯುವ ವೇದಿಕೆಯತಿಯಿಂದ ಚಾಮುಂಡಿಪುರಂನಲ್ಲಿರುವ ಅಪೂರ್ವ ಸಭಾಂಗಣದಲ್ಲಿ ಪಡಿತರ ಆಹಾರ ಕಿಟ್ ವಿತರಿಸುವ ಮೂಲಕ ಸಾಮಾಜಿಕ ಕಳಕಳಿಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು,
ಬ್ರಾಹ್ಮಣ ಯುವ ಮುಖಂಡ ಎನ್. ಎಮ್ ನವೀನ್ ಕುಮಾರ್ ರವರು 100ಮಂದಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಆಹಾರಕಿಟ್ ನೀಡುವ ಮೂಲಕ ಚಾಲನೆ ನೀಡಿದರು, ನಂತರ ಬ್ರಾಹ್ಮಣ ಯುವ ಮುಖಂಡ ಎನ್ ಎಮ್ ನವೀನ್ ಕುಮಾರ್ ರವರು ಮಾತನಾಡಿ ಭಾರತದಲ್ಲಿ ಹಿಂದೂ ಧರ್ಮ ಸಹಸ್ರಾರು ವರ್ಷಗಳಿಂದ ಪ್ರಚಲಿತವಾಗಿದೆ ಎಂದರೇ ಮಹಾ ತಾತ್ವಿಕರಾದ ಶ್ರೀಶಂಕರಾಚಾರ್ಯರ ಕೊಡುಗೆ ಅಪಾರ . ಶಂಕರಾಚಾರ್ಯರು ವೈದಿಕಧರ್ಮವನ್ನು ಪುನಶ್ಚೇತನಗೊಳಿಸಿ ಅದ್ವೈತಸಿದ್ಧಾಂತವನ್ನು ಪ್ರತಿಪಾದಿಸಿದರು. ಮೋಕ್ಷ ಮತ್ತು ಮುಕ್ತಿ ಸಾಧನೆಗೆ ಭಕ್ತಿ ಮತ್ತು ಜ್ಞಾನ ಮಾರ್ಗವನ್ನು ಅನುಸರಿಸಬೇಕೆಂದು ಜಗತ್ತಿಗೆ ಸಾರಿದರು ಎಂದರು
ಬ್ರಾಹ್ಮಣ ಸಂಘದ ಕಾರ್ಯದರ್ಶಿ ಅಪೂರ್ವ ಸುರೇಶ್,ಕೇಬಲ್ ಮಹೇಶ್ ,
ಬ್ರಾಹ್ಮಣ ಯುವ ವೇದಿಕೆಯ ಪ್ರಧಾನಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಟಿಎಸ್. ಅರುಣ್, ಚಕ್ರಪಾಣಿ, ಸುಚೀಂದ್ರ, ಶ್ರಿಕಾಂತ್, ವಿನಯ್ ಕಾಂಗ್ರೆಸ್ ಮುಖಂಡ ರಾಜೇಶ್ ಹಾಗೂ ಇನ್ನಿತರರು ಇದ್ದರು.