ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ಬೀಟ್ನ ಐರನ್ ಬ್ರಿಡ್ಜ್ ಗಸ್ತಿ ನಲ್ಲಿನ ಹೆಬ್ಬಳ್ಳ ಕಾಲ್ದಾರೀ ಬಳಿ ಸುಮಾರು 15 ರಿಂದ 20 ವರ್ಷದ ಹೆಣ್ಣಾನೆ ಮೃತಪಟ್ಟಿದ್ದು ಅದರ ಕಳೇಬರ ತುಂಬಾ ದಿನಗಳ ಪತ್ತೆಯಾಗಿದೆ.
ಅರಣ್ಯ ಸಿಬ್ಬಂದಿಗಳು ಗಸ್ತು ತಿರುಗುವಾಗ ಕಳೆಬರ ಕಂಡು ಬಂದಿದೆ ಎನ್ನಲಾಗಿದ್ದು, ಪಶು ವೈದ್ಯರ ಪ್ರಕಾರ ಆನೆ ಮೃತ ಪಟ್ಟು ತಿಂಗಳಿಗೂ ಹೆಚ್ಚಾಗಿದೆ. ಸಹಜ ಸಾವು ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿಗಳು ಹಾಗೂ ಪಶುವೈದ್ಯಾಧಿಕಾರಿಗಳು ಭೇಟಿ ಕಳೇಬರವನ್ನು ಸುಟ್ಟು ಹಾಕಿದ್ದಾರೆ.

ವರದಿ: ಬಸವರಾಜು ಎಸ್ ಹಂಗಳ

By admin