ಸರಗೂರು ತಾಲೂಕಿನ ಬೀದರಹಳ್ಳಿ ಗ್ರಾಮದಲ್ಲಿ ಶ್ರೀ ಬಣ್ಣಾರಿ ಮಾರಿಯಮ್ಮನ್ ದೇವತೆಯ ಹಬ್ಬ ವಿಜೃಂಭಣೆಯಿಂದ ನಡೆಯಿತು.


ಸರಗೂರು. ತಾಲೂಕಿನ ಬೀದರಹಳ್ಳಿ ಗ್ರಾಮದಲ್ಲಿ ಶ್ರೀ ಬಣ್ಣಾರಿ ಮಾರಿಯಮ್ಮನ್ ದೇವತೆ ಹಬ್ಬ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.


ಹಬ್ಬದ ಹಿನ್ನಲೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ದೀಪಾಲಂಕಾರ ಮಾಡಲಾಗಿತ್ತು. ಮೊದಲಿಗೆ ದೇವತೆಯನ್ನು ಕಪಿಲ ನದಿಗೆ ಕೊಂಡೋಯ್ಯದು ವಿವಿಧ ಬಗೆಯ ಹೋಮ, ಹವನ ಮಾಡಲಾಯಿತು.


ಮೂವತ್ತು ವರ್ಷಗಳಿಂದಲೂ ಹಬ್ಬವನ್ನು ಆಚರಿಸಿಕೊಂಡು ಬಂದಿರುವ ಗ್ರಾಮದಲ್ಲಿ ವಿಶೇಷವಾಗಿ ಹಬ್ಬವನ್ನು ನಡೆಸಲಾಯಿತು. ಮೂರು ಕರಗದಲ್ಲಿ ದೇವತೆಯನ್ನು ದೇವಸ್ಥಾನದ ಬಳಿಗೆಕರೆ ತರಲಾಯಿತು. ಅಗ್ನಿಚೆಟ್ಟಿ ತರಲಾಯಿತು. ದಾರಿಯುದ್ದಕ್ಕೂ ಭಕ್ತರು ದೇವರಿಗೆ ನಮಸ್ಕರಿಸಿ, ದೇವರ ಕೃಪೆಗೆ ಪಾತ್ರರಾದರು. ಅಮ್ಮನವರಿಗೆ ತಂಪಿನ ಸೇವೆ ನಡೆಯಿತು.


ಬಣ್ಣಾರಿ ಮಾರಿಯಮ್ಮನ್ ದೇವಸ್ಥಾನ ಕಮಿಟಿ ಅಧ್ಯಕ್ಷ ಎಂ.ಕೆ.ಕೃಷ್ಣ, ಕಾರ್ಯದರ್ಶಿ ರವಿಕುಮಾರ್, ಗೌರವಾಧ್ಯಕ್ಷ ಎನ್.ವಿ.ರಾಜು, ಖಜಾಂಚಿ ಮಂಜ, ಆರ್ಚಕ ಪ್ರಸನ್ನ, ಪುಟ್ಟು, ಪ್ರೇಮ, ಸ್ವಾಮಿನಾಥನ್, ಆನಂದ ಸೇರಿದಂತೆ ಬೀದರಹಳ್ಳಿ ಗ್ರಾಮಸ್ಥರು ಹಾಜರಿದ್ದರು.