ಮೈಸೂರು -ಜ 24 ,ವಾಲ್ಮೀಕಿ ಜಾತ್ರೆಗೆ ಸಂಬಂಧಿಸಿದ ಭಿತ್ತಿ ಪತ್ರಗಳನ್ನು ಮೈಸೂರು ನಗರ ನಾಯಕರ ಸಂಘದಿಂದ ಶಿವುಕುಮಾರ್,ಮಹೇಶ್ ಒಲಂಪಿಯ ಸೇರಿದಂತೆ ಸಮುದಾಯದ ಮುಖಂಡರು. ಅನಾವರಣಗೊಳಿಸಿದರು. ಮೈಸೂರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ 2023
ರ ಫೆ.8 ಮತ್ತು 9ರಂದು ನಡೆಯಲಿರುವ 5 ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಸಮುದಾಯದ ಬಂಧುಗಳು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮೈಸೂರು ನಗರ ನಾಯಕರ ಸಂಘ ಸೋಮವಾರ ಮನವಿ ಮಾಡಿದರು.ನಗರದ ಜಲದರ್ಶನಿ ನೆಡೆದ ನಾಯಕ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ‘ಜಾಗೃತಿಗಾಗಿ, ಸಂಘಟನೆಗಾಗಿ, ಒಗ್ಗಟ್ಟಿಗಾಗಿ ನಾಲ್ಕು ವರ್ಷಗಳಿಂದ ಮಠದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಈ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು’ ಎಂದರು.ಪೋಸ್ಟ್‌ರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡ ಯೋಗೇಶ್,ಪ್ರಕಾಶ್, ಜೂನಿಯರ್ ಮಹದೇವು,ರಂಗಸ್ವಾಮಿ, ವೀರನಗೆರೆ ಸೀನಣ್ಣ ನಾಯಕ ಸಮುದಾಯದ ಯಜಮಾನರು, ಮುಖಂಡರು ಇದ್ದರು.