ಸರಗೂರು: ತಾಲೂಕಿನ ಹಲಸೂರು ಗ್ರಾಮದಲ್ಲಿ ಭಾನುವಾರ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾದ ಟಿಮ್ಯಾಕ್ ಆಗ್ರೋ ಇಂಡಿಯಾ ಕಂಪನಿಯು ರೈತರಿಗೆ ಗೊಬ್ಬರ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ರೈತರ ಸಭೆ ಹಮ್ಮಿಕೊಂಡಿತ್ತು.


ಕಂಪನಿಯ ತಾಂತ್ರಿಕ ಉತ್ಪನ್ನ ವ್ಯವಸ್ಥಾಪಕ ಡಿ.ಉಮೇಶ ಮಾತನಾಡಿ, ತರಕಾರಿ, ಶುಂಠಿ ಬೆಳೆಯುವ ರೈತರು ಉತ್ತಮ ಇಳುವರಿಗಾಗಿ ಟಿಮ್ಯಾಕ್ ಆಗ್ರೋ ಇಂಡಿಯಾ ಕಂಪನಿಯ ಉತ್ಪನ್ನಗಳನ್ನು ಬಳಸಬೇಕು. ಸಸ್ಯ ಮತ್ತು ಪ್ರಾಣಿಗಳ ಪೋಷಣೆಯಲ್ಲಿ ಪರಿಣತಿ ಹೊಂದಿದ್ದು, ಭಾರತದಲ್ಲಿ ಮುಖ್ಯವಾಗಿ ಉತ್ತಮ ಗುಣಮಟ್ಟದ ನೀರಿನಲ್ಲಿ ಕರಗುವ ರಸಗೊಬ್ಬರಗಳ ಮೇಲೆ ಕೇಂದ್ರೀಕೃತವಾಗಿದೆ. ಕಡಿಮೆ ಉಪ್ಪು ಸೂಚ್ಯಂಕದೊAದಿಗೆ ನಿಖರ ಕೃಷಿಯ ಪ್ರಧಾನತೆಯಾಗಿದೆ ಎಂದು ತಿಳಿಸಿದರು.


ನೀರಿನಲ್ಲಿ ಕರಗುವ ರಸಗೊಬ್ಬರಗಳಲ್ಲಿ ಕೆಎಸ್‌ಸಿ ಮತ್ತು ಟಿಮಾ ಸ್ಪೆçà ಸರಣಿಗಳು ಪ್ರಾಥಮಿಕವಾಗಿವೆ. ಈ ಉತ್ಪನ್ನಗಳು ಹೆಚ್ಚಿನ ನೀರು ಮತ್ತು ಪೋಷಕಾಂಶಗಳ ದಕ್ಷತೆಯೊಂದಿಗೆ ಹೆಚ್ಚಿನ ತಾಪಮಾನದ ಪರಿಸ್ಥಿತಿಗಳಲ್ಲಿ ಬೆಳೆಗಳು ದ್ಯುತಿಸಂಶ್ಲೇಷಣೆ ಮಾಡಲು ಸಹಾಯ ಮಾಡುತ್ತದೆ. ಈ ಉತ್ಪನ್ನಗಳನ್ನು ಬಳಸುವುದರಿಂದ ರೈತರು ಮಣ್ಣು ಮತ್ತು ಜಲ ಸಂಪನ್ಮೂಲಗಳಿಗೆ ಯಾವುದೇ ಹಾನಿಯಾಗದಂತೆ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಈ ಉತ್ಪನ್ನಗಳು ನಿಮ್ಮ ಹತ್ತಿರದ ಕೃಷಿ ವ್ಯಾಪಾರಿ ಅಂಗಡಿಗಳಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು.
ತಾಂತ್ರಿಕ ಮಾರಾಟ ತಜ್ಞ ನವೀನ್ ಅವರು, ಟಿಮ್ಯಾಕ್ ಆಗ್ರೋ ಉತ್ಪನ್ನಗಳು, ನೀರು ಮತ್ತು ಪೋಷಕಾಂಶಗಳ ಬಳಕೆಯ ದಕ್ಷತೆಯ ಬಗ್ಗೆ ರೈತರಿಗೆ ವಿವರಿಸಿದರು. ಸಭೆಯಲ್ಲಿ ಮಣ್ಣಿನ ಫಲವತ್ತತೆ ಮತ್ತು ಬೆಳೆ ಪೋಷಣೆಯ ಬಗ್ಗೆ ಚರ್ಚಿಸಲಾಯಿತು. ಪ್ರಗತಿಪರ ರೈತ ಸುರೇಶ್ ಆಚಾರ್ ಮತ್ತು ನಿಂಗಪ್ಪ ನಾಯಕ ಸಾಂಪ್ರದಾಯಿಕ ವಿಧಾನಕ್ಕಿಂತ ಟಿಮ್ಯಾಕ್ ಉತ್ಪನ್ನಗಳನ್ನು ಬಳಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊAಡರು. ಸಭೆಯಲ್ಲಿ ಗ್ರಾಮದ ಮುಖಂಡರಾದ ಶಭುಲಿಂಗನಾಯಕ, ರಾಜಾನಾಯಕ, ಕಾಂತರಾಜ ಅರಸು, ಎಚ್.ಆರ್.ನಾಗರಾಜು, ರಾಜೇಶ್ ಮತ್ತು ಗ್ರಾಮದ ರೈತರು ಹಾಜರಿದ್ದರು.