ಕಪಿಗಳ ಹಾವಳಿಗೆ ಕಂಗಾಲಾದ ಹೆಚ್.ಡಿ.ಕೋಟೆಯ ಹೀರೇಹಳ್ಳಿ ನಿವಾಸಿಯಾದ ರೈತ ರಾಜೇಂದ್ರ ಅವರು ಪರಿಹಾರ ಕೇಳಲು ಬಾಯಿಮಾತು ಕದಿಯುತ್ತಿರುವ ಅಧಿಕಾರಿಗಳು”

ರೈತನ ಕೃಷಿ ಬೆಳೆಗೆ ಸಕಾಲದಲ್ಲಿ ಮಳೆಯಾಗದೆ ಕೈತುಂಬಾ ಸಾಲ ಮಾಡಿಕೊಂಡು ವ್ಯವಸಾಯ ಮಾಡಿ ಪಡೆದಂತಹ ಇಳುವರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯು ಸಿಗುವುದಿಲ್ಲ ಹಾಗೂ ಜೊತೆಗೆ ಇನ್ನಿತರ ಸಮಸ್ಯೆಗಳು ಆತನನ್ನು ಹಿಂಡಿ ಹಿಪ್ಪೆಮಾಡಿಟ್ಟಿರುತ್ತವೆ. ಹೀಗಾಗಿ ಕಂಗಾಲಾಗಿರುವಾಗ ರೈತನಿಗೆ ಸಮಸ್ಯೆಗಳು ಒಂದೇ ಎರಡೇ.ಹೆಚ್.ಡಿ.ಕೋಟೆಯ ಹಿರೇಹಳ್ಳಿ ಗ್ರಾಮದ ನಿವಾಸಿಯಾಗಿರುವ ರಾಜೇಂದ್ರ ಹೆಚ್.ಸಿ ಅವರ ತೆಂಗು ಮತ್ತು ಅಡಿಕೆ ತೋಟಕ್ಕೆ ಎರಡು ವರ್ಷದ ಹಿಂದೆಯೇ ನೂರಾರು ಮಂಗಗಳು ಗುಂಪು ಗುಂಪಾಗಿ ಬಂದು ಸೇರಿವೆ.ಇವುಗಳು ದಿನನಿತ್ಯ ತೆಂಗು ಮತ್ತು ಅಡಿಕೆ ಇಳುವರಿಯನ್ನು ನಾಶಮಾಡುತ್ತಿವೆ.ಜೊತೆಗೆ ಜಮೀನಿನ ಇನ್ನಿತರ ಬೆಳೆಗಳಾದ ಜೋಳ,ಬಾಳೆ,ತೊಗರಿ ಏನೇ ದವಸ ಧಾನ್ಯ ಬೆಳೆದರೂ. ಬೆಳೆದ ಬೆಳೆಯನ್ನೆಲ್ಲಾ ಅರ್ಧ ತಿಂದು ಇನ್ನರ್ಧ ಉಗಿದು ನಾಶಮಾಡಿ ರಾಜೇಂದ್ರ ಅವರನ್ನು ತುಂಬಾ ನಷ್ಟಕ್ಕೆ ದೂಡುತ್ತಿವೆ ಸಂಕಷ್ಟಕ್ಕೆ ಎಡೆಮಾಡಿವೆ. ಮಂಗಗಳನ್ನು ಓಡಿಸಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಧಿಕಾರಿಗಳಿಗೆ ದೂರುಸಲ್ಲಿಸಿದರೆ ತಾಲ್ಲೂಕು ಅರಣ್ಯ ಇಲಾಖೆಗೆ ಹೋಗಿ ನಮ್ಮ ಕೆಲಸ ಇದಲ್ಲ ಎಂದಿದ್ದಾರೆ.

ಅರಣ್ಯ ಇಲಾಖೆಯವ ಬಳಿ ಹೋದರೆ ಗ್ರಾಮಪಂಚಾಯಿತಿ ಅವರ ವ್ಯಾಪ್ತಿಗೆ ಈ ಕೆಲಸ ಬರುವುದು ಎಂದು ಹೇಳುತ್ತಿದ್ದಾರೆ.ಈ ಬಗ್ಗೆ ನಾವುಗಳು ಮೈಸೂರಿನ ವ್ಯಾಪ್ತಿಗೆ ಬರುವ ಅರಣ್ಯ ಅಧಿಕಾರಿ ಒಬ್ಬರನ್ನು ವಿಚಾರಿಸಿದಾಗ ಅವರು ಹೇಳಿದ್ದು ಈ ರೀತಿ.ಅರಣ್ಯ ಇಲಾಖೆಯ ವ್ಯಾಪ್ತಿಗೆ ಕೋತಿಗಳನ್ನು ಓಡಿಸುವ ಕೆಲಸ ಬರುವುದಿಲ್ಲ ಆದರೆ ನಾವು ಅನುಮತಿಯನ್ನು ನೀಡುತ್ತೇವೆ ಪ್ರಾಣಿಗಳಿಗೆ ತೊಂದರೆ ಆಗದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜಮೀನಿನ ವಾರಸುದಾರರು ಪಾತ್ರನಿರ್ವಹಿಸಬೇಕೆಂದು.ಹಾಗೂ ಮಂಗಗಳನ್ನು ಓಡಿಸಲು ನಮ್ಮಿಂದ ಯಾವುದೇ ಅನುದಾನಗಳು ಬರುವುದಿಲ್ಲ ಎಂದರು ಮಾಹಿತಿ ಕೊಟ್ಟರು.ಈ ಮಾಹಿತಿಯ ಆಧಾರದ ಮೇಲೆ ಹಿರೇಹಳ್ಳಿ ಗ್ರಾಮಪಂಚಾಯಿತಿಯ ಪಿ.ಡಿ.ಓ ಅವರನ್ನು ವಿಚಾರಿಸಿದಾಗ ಈ ಸಮಸ್ಯೆಯ ಬಗ್ಗೆ ಹತ್ತಿರದ ದಿನಗಳಲ್ಲಿ ಸಭೆ ಸೇರಿ ತೀರ್ಮಾನ ತಿಳಿಸುತ್ತೇವೆ ಎಂದಿದ್ದಾರೆ

 

ಮತ್ತು ಹಿಂದೆ ಆಗಿರುವುದರ ಬಗ್ಗೆ ಯಾವುದೇ ವಿಷಯವನ್ನು ಮಾತನಾಡದೇ ಮೌನವಹಿಸಿದ್ದಾರೆ ಇಲ್ಲಿ ಅವರ ಇತರ ಕಾರ್ಯದಕ್ಷತೆ ಬಗ್ಗೆ ಗೌರವವಿದೆ ಆದರೆ ಸೂಕ್ತ ಸಮಯಕ್ಕೆ ರಾಜೇಂದ್ರ ಅವರ ಕಷ್ಟಕ್ಕೆ ಬಹುಬೇಗ ಸಹಕಾರ ನೀಡಲಿ ಎನ್ನುವುದಷ್ಟೇ ನಮ್ಮ ಅಭಿಪ್ರಾಯ.ಆದರೆ ಇವರ ಸಹವಾಸವೇ ಸಾಕು ಎಂದು ಸ್ವತಃ ರಾಜೇಂದ್ರ ಅವರೇ ಯೂಟ್ಯೂಬ್ ನಲ್ಲಿ ಮಂಗಗಳನ್ನು ಓಡಿಸುವ ವೀಡಿಯೋ ನೋಡಿ ನೀರುಗನ್ನು ಬಳಸಿ ಓಡಿಸಲು ಪ್ರಯತ್ನಿಸಿದ್ದಾರೆ ಅದು ಕೂಡ ವಿಫಲವಾಗಿದೆ.ಈಗ ಇತ್ತ ಕಪಿಗಳ ಉಪಟಳಕ್ಕೆ ಮತ್ತು ಅತ್ತ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರಾಜೇಂದ್ರ ಅವರ ಪರಿಸ್ಥಿತಿ ಕಂಗಾಲಾಗಿದೆ. ರಾಜೇಂದ್ರ ಅವರ ದೂರವಾಣಿ ಸಂಖ್ಯೆ೯೫೯೧೫ ೭೧೯೯೬ ಇದಾಗಿದ್ದು ಸೂಕ್ತ ಅಧಿಕಾರಿಗಳು ಹಾಗೂ ಯಾರೇ ಇದರ ಬಗ್ಗೆ ಮಾಹಿತಿ ತಿಳಿದಿದಲ್ಲಿ ಇವರಿಗೆ ಮಾಹಿತಿ ಮತ್ತು ಸಲಹೆಗಳನ್ನು ನೀಡಬೇಕೆಂದು ಮೈಸೂರುಮಿರರ್. ಮಾಧ್ಯಮ ಮುಖಾಂತರ ತಮ್ಮ ಅಳಲು ತೋಡಿಕೊಂಡರು ಮೂಲಕ ನಾವುಗಳು ಕೇಳಿಕೊಳ್ಳುತ್ತಿದ್ದೇವೆ.ನನಗೆ ಇರುವ ಸಮಸ್ಯೆಗಳಂತೆಯೇ ಹಲವಾರು ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಸೂಕ್ತ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕೆಂದು ೆ ವಿಷಯ ಮುಟ್ಟಿಸಿ ಈ ಮೂಲಕ ರಾಜೇಂದ್ರ ಅವರು ತಿಳಿಸಿದರು.

ಮಂಜುನಾಥ್ ಚಿ.ಮ.ಬಿ.ಆರ್

 

 

 

By admin