ಚಾಮರಾಜನಗರ: ವಯೋನಿವೃತ್ತಿ ಹೊಂದಿದ ರಾಜಸ್ವ ನಿರೀಕ್ಷಕ ಲಿಂಗರಾಜ್ ಮೂರ್ತಿ ರವರಿಗೆ ಹರದನಹಳ್ಳಿ ನಾಡ ಕಚೇರಿಯಲ್ಲಿ ಕಚೇರಿ ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
ಇದೇವೇಳೆ ಸಿಬ್ಬಂದಿ ಮಾತನಾಡಿ, ಲಿಂಗರಾಜ್ ಮೂರ್ತಿ’ ಸಂತೇಮರಳ್ಳಿ ಚಂದಕವಾಡಿಯಲ್ಲಿ ಶಿರಸ್ತೇದಾರರಾಗಿ ಹರವೆ ನಾಡಕಚೇರಿಯಲ್ಲಿ ರಾಜಸ್ವ ನಿರೀಕ್ಷಕರಾಗಿ ಮತ್ತು ಹರದನಹಳ್ಳಿಯಲ್ಲಿ ಪ್ರಭಾರ ರಾಜನಿರಕ್ಷಕರಾಗಿ ಹಾಗೂ ಉಪ ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ತಿಳಿಸಿದರು.
ಉಪತಹಸೀಲ್ದಾರ್ ಮಹದೇವಪ್ಪ ರಾಜಸ್ವ ನಿರೀಕ್ಷಕ ಗುರುಸಿದ್ದಪ್ಪಚಾರ್ ಗ್ರಾಮ ಲೆಕ್ಕಿಗರಾದ ನಾಗರಾಜು, ಕೀರ್ತಿ ರಾಜು, ವೆಂಕಟೇಶ್, ಸ್ವಪ್ನ, ಕೇಸ್ ವರ್ಕರ್ ಮಂಜು, ಗ್ರಾಮಸಹಾಯಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಮಹದೇಸ್ವಾಮಿ, ಖಜಾಂಚಿ ಬಂಗಾರಸ್ವಾಮಿ, ನೀಲಯ್ಯ, ಶಶಿಕಲಾ, ಕಾಳಶೆಟ್ಟಿ, ಕಂಪ್ಯೂಟರ್ ಆಪರೇಟರ್ ಮಹೇಶ್, ವೀರಭದ್ರ, ಮುಖಂಡರಾದ ಶಿವಣ್ಣ, ಮಹೇಶ್, ಮತ್ತಿತರರು ಹಾಜರಿದ್ದರು.