ಮೈಸೂರು :ಪಿರಿಯಾಪಟ್ಟಣ ಬ್ರಾಹ್ಮಣರ ಬೀದಿಯ ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್, ಅವರಣದಲ್ಲಿ ರೋಟರಿ ಮೆಡ್ ಟೌನ್ , ಜೆಎಸ್ಎಸ್ ಆಸ್ಪತ್ರೆ ಮೈಸೂರು , ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್ ಸಹಯೋಗದಲ್ಲಿ ಉಚಿತ ಆರೋಗ್ಯ ನೇತೃ ತಪಾಷಣೆ ,ಹಾಗೂ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಾಲೂಕು ರೋಟರಿ ಮೆಡ್ ಟೌನ್ ಅಧ್ಯಕ್ಷ ತಿರುಮಲಪುರ ರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮಗೆಲ್ಲರಿಗೂ ಕಣ್ಣಿನ ದೃಷ್ಟಿ ಅಮೂಲ್ಯವಾದದ್ದು ಕಣ್ಣುಗಳು ಜೀವನವಿಡಿ ದೃಷ್ಟಿ ನೀಡಿ ನಮ್ಮ ಸುತ್ತಮುತ್ತಲಿನ ಆಗುಹೋಗುಗಳು ದೈನಂದಿನ ಚಟುವಟಿಕೆ ಹಾಗೂ ಜೀವನ ನಡೆಸಲು ಸಹಕಾರಿಯಾಗಿದೆ .ಪ್ರತಿಯೊಬ್ಬರೂ ಕಣ್ಣಿನ ದೃಷ್ಟಿ ಪರಿಕ್ಷಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು .
ನಮ್ಮ ದೇಶದಲ್ಲಿ ಶಾಲೆಯ ಮಕ್ಕಳಲ್ಲಿ ಐ ಫ್ಳು ಸಮಸ್ಯೆ ಹೆಚ್ಚಾಗುತ್ತಿದೆ ಮತ್ತೊಬ್ಬರಿಗೆ ಹರಡುವುದರಿಂದ ಪೋಷಕರು ಜಾಗೃತಿ ವಹಿಸಬೇಕು ಎಂದರು.ಜೆಎಸ್ಎಸ್ ಆಸ್ಪತ್ರೆಯ ಡಾಕ್ಟರ್ ಪೂಜಿತ ಮಾತನಾಡಿ, ನೇತ್ರ ತಪಾಷಣೆಗೆ ಒಳಗಾಗುವಂತ ರೋಗಿಗಳು ಮೊದಲು ಮಧುಮೇಹ ಮತ್ತು ಬಿಪಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. 50 ವರ್ಷ ಮೇಲ್ಪಟ್ಟ ಜನರಿಗೆ ಕಣ್ಣಿನಲ್ಲಿ ಪೊರೆ ಬೆಳೆಯುವುದರಿಂದ ಕಣ್ಣಿನ ದೃಷ್ಟಿ ಕಡಿಮೆಯಾಗುತ್ತದೆ ಸಕಾಲದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು . ಎಂದರು .
ಶಿಬಿರದಲ್ಲಿ 150ಕ್ಕೂ ಹೆಚ್ಚು ಜನರಿಗೆ ನೇತ್ರ ತಪಾಸಣೆ ನಡೆಸಲಾಯಿತು .ಈ ಸಂದರ್ಭದಲ್ಲಿ ತಾಲೂಕು ರೋಟರಿ ಮೆಡ್ ಟೌನ್ ಕಾರ್ಯದರ್ಶಿ ಕೆ.ಪಿ .ಹೆಗಡೆ , ಎ. ಜಿ . ಸತ್ಯನಾರಾಯಣ, ಖಜಾಂಜಿ ಎಚ್. ಪಿ . ಶ್ರೀಕಾಂತ್ , ಮೈಸೂರು ಜೆಎಸ್ಎಸ್ ಕಣ್ಣಿನ ಆಸ್ಪತ್ರೆಯ ನೇತೃತಜ್ಞರಾದ ಡಾಕ್ಟರ್ ಪೂಜಿತ ,ಡಾಕ್ಟರ್ ಕಲ್ಯಾಣಿ ,ಡಾ. ನಿಖಿತ , ಡಾಕ್ಟರ್ ರೋಸಿನ , ಲಕ್ಷ್ಮಿ ಕ್ಲಿನಿಕ್ ನ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ವಿಜಯ್, ಗಿರೀಶ್ ಹಾಜರಿದ್ದರು.