ಈ ಬಾರಿಯ ಬಜೆÉಟ್‍ನಲ್ಲಿ ಪ್ರತ್ಯೇಕವಾಗಿ ಮೈಸೂರು ಜಿಲ್ಲೆಗೆ ಸಂಬಂಧಿಸಿದ ನಿರೀಕ್ಷೆಗಳು:
1. ದಿನೇ ದಿನೇ ಮೈಸೂರು ಜಿಲ್ಲೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ವ್ಯಾಪಕವಾಗಿ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ಇಳಿಸಲು ಅಥವಾ ಕಡಿಮೆಮಾಡಲು ಹೆಚ್ಚಿನ ಪ್ರಮಾಣದಲ್ಲಿ ಮೇಲ್ಸೇತುವೆಗಳು ((flyovers)) ಬೆಂಗಳೂರು ಹಾಗೂ ಮೈಸೂರು ಮಾರ್ಗದಲ್ಲಿ ನಿರ್ಮಾಣಗೊಳ್ಳಬೇಕಿದೆ.


2. ಮೈಸೂರಿನಲ್ಲೂ ಕೂಡ ಬಿಬಿಎಂಪಿ ಮಾದರಿಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನ ಒದಗಿಸಬೇಕು. ಏಕೆಂದರೆ, ಮೈಸೂರಿನಲ್ಲಿ ನಗರೀಕರಣ (urbanization) ಬೆಳೆಯುತ್ತಿದೆ ಹಾಗಾಗಿ ಮೂಲ ಭೂತಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ. ಉದಾ: ಕುಡಿಯುವ ನೀರಿನ ಸೌಲಭ್ಯ – ಕೆಲವು ನದಿಗಳಾದ ಕಬಿನಿ ಹಾಗೂ ಕಾವೇರಿಯ ಯೋಜನೆಗಳನ್ನು ವಿಸ್ತಾರಗೊಳಿಸುವುದು.
3. ನಗರೀಕರಣ ಬೆಳೆಯುತ್ತಿರುವುದರಿಂದು, ಹೊರ ವರ್ತುಲ ರಸ್ತೆಗಳನ್ನು ಮತ್ತಷ್ಟು ಹೆಚ್ಚುಸುವುದು.
4. ಅನಗತ್ಯವಾದಂತಹ ಸರ್ಕಾರದ ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗಿದೆ ಹಾಗೂ ಅಭಿವೃದ್ಧಿಯ ಕಡೆ ಹೆಚ್ಚು ಗಮನ ಹರಿಸಬೇಕಾಗಿದೆ.
5. ಕೋವಿಡ್‍ನಿಂದ ಬಳಲಿರುವ ಹಲವಾರು MSME ಗಳಿಗೆ, ಬೆಳವಣಿಗೆ ರೂಪಿಸಲು ಹಾಗೂ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನ ಗೊಳಿಸಲು ಹೆಚ್ಚು ಹಣವನ್ನು ಮೀಸಲಿಡಬೇಕಿದೆ.
6. ಉತ್ತರ ಕರ್ನಾಟಕದ ಪ್ರಗತಿಗೆ, ಆಂತರಿಕ ಉತ್ಪಾದನೆಗಳನ್ನು ಹೆಚ್ಚಿಸಿ, ಉದ್ಯೋಗಾವಕಾಶಗಳನ್ನು ಹೆಚ್ಚಿಸಲು Start-ups ಗಳಿಗೆ ಆದಾಯವನ್ನು ನಿಗದಿ ಪಡಿಸಬೇಕಾಗಿದೆ.
7. MSME ಗಳು ಸಂಕಷ್ಟದಲ್ಲಿ ಸಿಲುಕಿದ್ದು, ಕಳೆದ ಬಜೆಟ್ನಲ್ಲಿ ಘೋಷಿಸಿದ್ದ ರಿಯಾಯಿತಿಗಳನ್ನು ಮುಂದುವರಿಸಬೇಕಾಗಿದೆ ಹಾಗೂ ಹಲವು ವರ್ಷಗಳಿಂದ ಉಳಿಸಿ ಕೊಂಡಿರುವ ಬಡ್ಡಯನ್ನು ಕೂಡ ಮನ್ನ ಮಾಡಬೇಕಾಗುತ್ತದೆ.
8. ರೈತರ ನಿರೀಕ್ಷೆಗಳು – ರಾಜ್ಯದ ಮೂಲ ಬೆಳೆಗಳಾದ ರಾಗಿ, ಬತ್ತ, ಜೋಳ, ತೊಗರಿಬೇಳೆ ಹಾಗೂ ಕೊಬ್ಬರಿಯ ಮೇಲೆ ಬೆಂಬಲ ಬೆಲೆ ಹೆಚ್ಚಿಸುವಂತಹದ್ದು. ಕೃಷಿ ಉತ್ಪನ್ನಗಳ ಮೇಲಿನ ರಿಯಾಯಿತಿಗಳ ನಿರೀಕ್ಷೆ.
9. ಕಳೆದ ಬಜೆಟ್‍ನ ಗಾತ್ರ 2.46 ಲಕ್ಷ ಕೋಟಿಯಾಗಿತ್ತು. ಹಾಗೂ ಈ ಬಾರಿಯ ಬಜೆಟ್‍ನ ಗಾತ್ರ 3 ಲಕ್ಷ ಕೋಟಿಯಾಗಬಹುದು ಎಂಬ ನಿರೀಕ್ಷೆ ಇದೆ, ಏಕೆಂದರೆ ಕೋವಿಡ್‍ನ ಸಮಯದಲ್ಲಿ ಬಜೆಟ್‍ನ ಗಾತ್ರ ಕಡಿಮೆಯಾಗಿರಲಿಲ್ಲ. ಹಾಗೂ ಈಗ ಕೋವಿಡ್‍ನಿಂದ ಹಾಗೂ ಆರ್ಥಿಕತೆಯಲ್ಲಿ ಚೇತರಿಸಿಕೊಂಡಿದ್ದು ಹೆಚ್ಚಿನ ಗಾತ್ರದ ಬಜೆಟ್ ಅನ್ನು ನಿರೀಕ್ಷಿಸಬಹುದು.
