ಹಾರ್ಟ್ ಸಂಸ್ಥೆ ಮತ್ತು ಯುವರಾಜ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಪರೀಕ್ಷೆ ಸಂದರ್ಭದಲ್ಲಿ ಮನೋನಿಯಂತ್ರಣ ಮತ್ತು ಒತ್ತಡ ನಿರ್ವಹಣೆ? ಕುರಿತು ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ. ಬಾಬು ರಾಜೇಂದ್ರ ಪ್ರಸಾದ್‌ರವರು ಪರೀಕ್ಷೆ ಎಂಬುದು ಭಯವಲ್ಲ ಅದು ನೀವು ಮೌಲ್ಯಮಾಪಕರಿಗೆ ಪಾಠ ಮಾಡುವ ಒಂದು ಅವಕಾಶ ಎಂದು ಭಾವಿಸಿದರೆ ಅದು ನಿಮ್ಮನ್ನ ಕೇವಲ ಪಾಸು ಮಾಡುವುದಲ್ಲದೆ ನೀವು ಒಬ್ಬ ಉತ್ತಮ ಶಿಕ್ಷಕರಾಗಿಯು ಸಹ ಬೆಳೆಯುತ್ತೀರಿ ಎಂದರು.

ನಮ್ಮ ಆಲೋಚನೆಯನ್ನು ಸಕಾರಾತ್ಮಕವಾಗಿ ತಯಾರು ಮಾಡಿದರೆ ನಮ್ಮ ಎಲ್ಲಾ ಕೆಲಸಗಳ ಫಲಿತಾಂಶ ಸಕಾರಾತ್ಮಕವಾಗಿರುತ್ತದೆ. ದಿನದ ವೇಳಾಪಟ್ಟಿಯನ್ನು ತಯಾರು ಮಾಡಿಕೊಳ್ಳಿ, ಹಾಗೂ ಒದಿದ್ದನ್ನು ಬರೆಯುವ ಅಭ್ಯಾಸ ರೂಡಿಸಿಕೊಂಡರೆ ಉತ್ತಮ ಫಲಿತಾಂಶ ಲಭಿಸುತ್ತದೆ ಎಂದರು. ವಿಶೇಷವಾಗಿ ಪರೀಕ್ಷಾ ಸಂದರ್ಭದಲ್ಲಿ ದೂರ ಪ್ರಯಣ ನಿಯಂತ್ರಿಸಿ, ಇತರರ ಜೊತೆ ಮಾತುಗಳನ್ನು ನಿಯಂತ್ರಿಸಿ, ಶಾಂತವಾಗಿ ಏಕಾಗ್ರತೆಯನ್ನು ಕಾಪಾಡಿಕೊಳ್ಳುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಉಪಾಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾರ್ಟ್ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ನ್ಯೂ-ಡಯಾಕೇರ್‌ನ ವ್ಯವಸ್ಥಾಪಕ ನಿರ್ದೇಶಕರು ಆದ ಡಾ. ರೇಣುಕಾ ಪ್ರಸಾದ್ ಎ.ಆರ್. ಮಾತನಾಡಿ ಪರೀಕ್ಷಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ, ಹಾಗಾಗಿ ನಿಮ್ಮ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಕುರಿತು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ಹಾರ್ಟ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ?ನಿಜವಾದ ಶಿಕ್ಷಣವೆಂದರೆ ಸಂಸ್ಕಾರ ಮತ್ತು ಮಾನವಿಯತೆಯ ವಿಕಾಸ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಯುವರಾಜ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಬಿ.ಎನ್. ಯಶೋಧ, ಯುವರಾಜ ಕಾಲೇಜಿನ ಮ್ಯಾನೇಜ್‌ಮೆಂಟ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ರುಬಿ ಸಲೆಸ್ಟಿನ್, ಐ.ಕ್ಯೂ.ಎ.ಸಿ. ನ ಸಂಯೋಜಕರಾದ ಡಾ. ವಿದ್ಯಾ ಆರ್, ಡಾ. ಎಚ್. ಸೋಮಶೇಖರಪ್ಪ, ಡಾ. ಕೆ.ಬಿ. ಉಮೇಶ್, ಎನ್‌ಎಸ್‌ಎಸ್ ಘಟಕದ ಆಧಿಕಾರಿಗಳಾದ ಡಾ. ಗಿರೀಶ್ ಚಂದ್ರ, ಎನ್‌ಎಸ್, ಎನ್‌ಎಸ್ ವಿಭಾಗದ ಕೋ-ಆಫೀಸರ್ ಆದ ಶ್ರೀ ಪ್ರಮೋದ್ ಹಾಗೂ ಹಾರ್ಟ್ ಸಂಸ್ಥೆಯ ಸದಸ್ಯರಾದ ಡಾ. ಮಹೇಶ್ ಶರ್ಮ, ವಿ.ಜೆ. ಮಿಂಚು, ವರದನಾಯಕ ಹಾಗೂ ಯುವರಾಜ ಕಾಲೇಜಿನ ಸ್ವಯಂ ಸೇವಕರು ಹಾಜರಿದ್ದರು.