ಪ್ರತಿ ಅನ್ನದ ಅಗುಳು ಸಹ ಅಮೃತಕ್ಕೆ ಸಮಾನ.. ಬಲ್ಲ ಜಾಣರು ಮಾತ್ರ ಇದನ್ನು ವ್ಯರ್ಥ ಮಾಡೊಲ್ಲ..!! ಅಹಂಕಾರ ತೋರಿಸಲ್ಲ.

ರೈತ ಇಡೀ ಪ್ರಪಂಚದ ಅನ್ನದಾತ !! ಆತನ ರೀತಿ ನಾವು ನೀವು ಬಿಸಿಲಿನಲ್ಲಿ ಬೆವರಿಳಿಸುವಂತ ತಾಕತ್ತು ನಮ್ಮಲ್ಲಿಲ್ಲ.. ಯಾಕೆಂದರೆ DIGNITY MATTERS ಅಲ್ಲವೇ!!?

*ಧಾನೇ ಧಾನೆ ಪರ್ ಖಾನೆವಾಲಾ ಕಾ ನಾಮ್ ಹೈ ಕಬೀರ॥* ಅಂತ ಕಬೀರರು ತಮ್ಮ ದೋಹೆಯಲ್ಲಿ ಹೇಳುತ್ತಾರೆ. ಒಂದೊಂದು ಅಗಳಿನಲ್ಲೂ ತಿನ್ನುವವರ ಹೆಸರು ಬರೆದಿರುತ್ತದೆ. ಆದ್ರೆ ತಿನ್ನುವವನು ಆ ಒಂದೊಂದು ಅಗಳನ್ನು ಕೂಡ ಬಿಸಾಡಿದರೆ ತಿನ್ನುವವನಿಗೂ ಇಲ್ಲ ಹಸಿದವನಿಗೂ ಇಲ್ಲ. ನಮ್ಮ ದಕ್ಷಿಣ ಭಾರತದಲ್ಲಿ ಪ್ರತಿನಿತ್ಯ ನಲವತ್ತು 40 ಲಕ್ಷ ಜನ ಹಸಿವಿನಿಂದ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ.

ಹಾಗಾಗಿ
ಅನ್ನದಲ್ಲಿ ಭೇದ ಭಾವ ಮಾಡಬೇಡಿ. FIVE STAR ಹೋಟೆಲಿಗೂ ಹೋಗೋದು FOOTPATH FASTFOOD ಗೂ ಬರೋದು ಇದೇ ರೈತನ ಧಾನ್ಯ. ನೀವು fivestarಲ್ಲಿ ಸಾವಿರಾರು ರೂಪಾಯಿ ಕೊಟ್ಟು ತಿಂದರೂ ಏನು ಬದಲಾಗೊಲ್ಲ .. FASTFOOD ಅಲ್ಲಿ ತಿಂದರೂ ಬದಲಾಗೊಲ್ಲ.

ಬದಲಾಗಬೇಕಿರೋದು ನಮ್ಮ ಮನಸ್ಥಿತಿ. ಧವಸ ಧಾನ್ಯಗಳನ್ನು ರೈತನಿಂದ ಖರೀದಿಸಿ ಮನೆಗೆ ತನ್ನಿ. ಮನೆಯಲ್ಲಿ ನಿಮ್ಮ ಕೈಯಾರೆ ಒಟ್ಟಾಗಿ ಸೇರಿ ಅಡುಗೆ ಮಾಡಿ.. ಆರೋಗ್ಯವಾಗಿ ಬಗೆ ಬಗೆಯ ತಿನಿಸುಗಳನ್ನು ಮಾಡಿ ENJOY ಮಾಡಿ.. ರೈತರಿಗೂ JOYNESS ಕೊಡಿ. ರೈತರಿದ್ದರೆ ಮಂದಹಾಸ ಅವರು ಇಲ್ಲದಿದ್ದರೆ ಹಸಿವಿನಿಂದ ಸತ್ತ ಇತಿಹಾಸ ನಮ್ಮದಾಗುತ್ತದೆ ಅದಕ್ಕೆ ಆಸ್ಪದ ಕೊಡುವುದು ಬೇಡ.

ಹೊರಗಡೆ ಊಟದಲ್ಲಿ ಶರೀರಕ್ಕೆ ಬೇಕಾದ ಪೌಷ್ಟಿಕತೆ ಸಿಗಲ್ಲ. ಮನೆಯಲ್ಲಿ ಮಾಡಿಕೊಂಡ ಊಟದಲ್ಲಿ ಪ್ರೀತಿ, ಸಹಬಾಳ್ವೆ, ಶಕ್ತಿ ಪೌಷ್ಟಿಕತೆ ಸಿಗುತ್ತದೆ. ಆಲೋಚಿಸಿ. ಬದಲಾವಣೆ ನಮ್ಮಿಂದ ಶುರುವಾಗಲಿ.

ರೈತರ ದಿನಾಚರಣೆಯನ್ನು ಆಚರಿಸುವುದು ಅದರಲ್ಲಿ ನಿಲ್ಲುವುದು ಬೇಡ. ಆ ರೈತರಿಗೂ ನಾವು ಧನ್ಯವಾದವನ್ನು ತಿಳಿಸುವ ಸಲುವಾಗಿ ನಾವು ಒಂದು ದಿನ ಅವರಿಗಾಗಿ ಮೀಸಲಿಟ್ಟು ಅವರೊಂದಿಗೂ ನಾವು ಊಟೋಪಚಾರವನ್ನು ಮಾಡಬಹುದು ಹಾಗೆ ನಾವು ಕೂಡ ಒಂದು ಆಲೋಚನೆ ಮುಂದೆ ಇಟ್ಟು ಅವರ ಜೊತೆ ನಾವಿದ್ದೇವೆ ಎಂಬ ಭರವಸೆಯನ್ನು ಮತ್ತೆ ಅವರಿಗೆ ನೈತಿಕ ಶಕ್ತಿಯನ್ನು ಕೊಡುವ ಮೂಲಕ ನಾವು ನಮ್ಮ ಬಂಧು ಬಾಂಧವರಾಗಿ ಅವರನ್ನು ನಾವು ನೋಡಿಕೊಳ್ಳೋಣ ಈ ದೇಶದ ಬೆನ್ನೆಲುಬು ರೈತರು.

#ಆತ್ಮನಿರ್ಭರ ಭಾರತ
#ಪುರುಷೋತ್ತಮ್ ಅಗ್ನಿ ✍🏻

By admin