ಚಾಮರಾಜನಗರ: ತಾಲೂಕಿನ ಸರಗೂರು ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋಡಿಮೋಳೆ ಭಗತ್‌ಸಿಂಗ್ ಯುವಸೇನೆ ವತಿಯಿಂದ ನಡೆದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಶಾಲಾಮುಖ್ಯಶಿಕ್ಷಕಿ ಗುಲ್ನಾಜ್ ಶಾಲಾವರಣದಲ್ಲಿ ಗಿಡನೆಟ್ಟು ನೀರೆರೆದರು.
ಇದೇವೇಳೆ ಅವರು ಮಾತನಾಡಿ, ಹೆಚ್ಚುತ್ತಿರುವ ಜಾಗತಿಕ ತಾಪಮಾನ ತಡೆಗೆ ಮರಗಿಡಗಳನ್ನು ನೆಟ್ಟು ಪೋಷಣೆ ಮಾಡುವುದರ ಮೂಲಕ ಪರಿಸರ ಸಂರಕ್ಷಣೆ ಮಾಡುವ ಮಹತ್ವದ ಜವಾಬ್ದಾರಿ ಎಲ್ಲರ ಮೇಲಿದೆ.
ಭಗತ್‌ಸಿಂಗ್ ಯುವಸೇನೆ ಇಂತಹ ಸಮಾಜಮುಖಿ ಕಾರ್ಯಕ್ಕೆ ಒತ್ತು ನೀಡಿರುವುದು ಪ್ರಶಂಸನೀಯ ಎಂದರು.
ಸಹಶಿಕ್ಷಕರಾದ ಪರ್ಹನ್, ಭಗತ್‌ಸಿಂಗ್ ಯುವಸೇನೆ ಅಧ್ಯಕ್ಷ ಕಾಂತರಾಜು, ಶಿವು, ಮಲ್ಲೇಶ್, ಹೇಮಂತ್ ಕುಮಾರ್, ಪವನ್, ಮಹೇಂದ್ರ ಹಾಜರಿದ್ದರು.