ಚಾಮರಾಜನಗರ: ಚಾಮರಾಜನಗರದಲ್ಲಿ ಸ್ನೇಹಬಳಗದ ವತಿಯಿಂದ ಮೈಸೂರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಆಡಳಿತ ಮಂಡಳಿಯ ನೂತನ ನಾಮನಿರ್ದೇಶಕರಾಗಿ ನೇಮಕವಾಗಿರುವ ನಗರದ ಇಎನ್‌ಟಿ ವೈದ್ಯರಾದ ಡಾ. ಎ.ಆರ್. ಬಾಬು ಅವರಿಗೆ ವೈದ್ಯಭೂಷಣ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಸ್ನೇಹಬಳಗದ ಅಧ್ಯಕ್ಷ ಕೆ.ಮಹದೇವಸ್ವಾಮಿ ಮಾತನಾಡಿ, ಜಿಲ್ಲೆಯವರಾದ ಡಾ.ಎ.ಆರ್. ಬಾಬು ಅವರು ವೈದ್ಯವೃತ್ತಿಯಲ್ಲಿ ಸೇವೆಸಲ್ಲಿಸುತ್ತಿದ್ದು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಲವಾರು ಸಮಾಜಮುಖಿ ಸೇವೆಯಲ್ಲಿ ನಿರತರಾಗಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಮೈಸೂರು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಗೆ ನೂತನ ನಾಮನಿರ್ದೇಶಕರಾಗಿ ನೇಮಕವಾಗಿರುವುದು ಸಂತಸ ತಂದಿದೆ. ಅವರ ಸೇವೆ ಇನ್ನು ಹೆಚ್ಚಿನ ರೀತಿಯಲ್ಲಿ ನಮ್ಮ ಜಿಲ್ಲೆಗೆ ದೊರೆಯಲಿ.
ಅವರು ಮುಂದಿನ ಅವಧಿಯಲ್ಲಿ ಉನ್ನತಮಟ್ಟದ ಹುದ್ದೆ ಅಲಂಕರಿಸಿ ಸಮಾಜಕ್ಕೆ ಇನ್ನು ಹೆಚ್ಚಿನಸೇವೆ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು. ಹಣ್ಣಿನವ್ಯಾಪಾರಿಗಳಾದ ನಾಗೇಂದ್ರ, ಮಹದೇವಸ್ವಾಮಿ, ಜಯಕುಮಾರ್, ಸಿ.ಎಸ್.ನಾಗರಾಜು, ಸುಬ್ರಹ್ಮಣ್ಯ, ನಾಗಶೆಟ್ಟಿ, ಮಸಗಾಪುರ ರಾಜು, ಇತರರು ಇದ್ದರು.