೧೩ನೇ ಬೆಂಗಳೂರು ಅಂತಾರಾಷ್ಟಿಯ ಸಿನಿಮೋತ್ಸವಕ್ಕೆ ಕನ್ನಡ, ಭಾರತೀಯ ಮತ್ತು ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗಕ್ಕೆ ಚಲನಚಿತ್ರಗಳ ಆಹ್ವಾನ.ಬೆಂಗಳೂರು ಅಂತಾರಾಷ್ಟಿಯ ಸಿನಿಮೋತ್ಸವ ಕರ್ನಾಟಕ ಸರ್ಕಾರದ ಮಹತ್ವದ ಸಾಂಸ್ಕೃತಿಕ ಹಬ್ಬ. ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ೧೩ನೇ ಬೆಂಗಳೂರು ಅಂತಾರಾಷ್ಟಿಯ ಸಿನಿಮೋತ್ಸ್ಸವದ ಸಿದ್ಧತೆಗಳು ಆರಂಭವಾಗಿದೆ.

ಎಂದಿನoತೆ ಈ ಬಾರಿಯೂ ಕನ್ನಡ ಸಿನಿಮಾ ಸ್ಪರ್ಧೆ, ಭಾರತೀಯ ಚಿತ್ರಗಳನ್ನು ಪ್ರತಿನಿಧಿಸುವ “ಚಿತ್ರಭಾರತಿ” ಮತ್ತು ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗಕ್ಕೆ ಅರ್ಹ ಚಲನಚಿತ್ರಗಳನ್ನು ಆಹ್ವಾನಿಸಲಾಗಿದೆ.ಕನ್ನಡ ಸಿನಿಮಾ ಸ್ಪರ್ಧಾ ವಿಭಾಗಕ್ಕೆ ಸಲ್ಲಿಸಬೇಕಾದ ಕಥಾ ಚಿತ್ರಗಳು ಕನಿಷ್ಠ ೭೦ ನಿಮಿಷದ ಅವಧಿಯಾಗಿದ್ದು, ಜನವರಿ ೧, ೨೦೨೦ ರಿಂದ ಡಿಸೆಂಬರ್ ೩೧, ೨೦೨೦ರ ಅವಧಿಯಲ್ಲಿ ನಿರ್ಮಾಣಗೊಂಡಿರಬೇಕು. ಕನ್ನಡ ಮತ್ತು ಕರ್ನಾಟಕ ರಾಜ್ಯದ ಯಾವುದೇ ಉಪಭಾಷೆಯಲ್ಲಿ ನಿರ್ಮಾಣಗೊಂಡಿರುವ ಕಥಾಚಿತ್ರಗಳು ಸ್ಪರ್ಧಾತ್ಮಕ ವಿಭಾಗಕ್ಕೆ ಪ್ರವೇಶಿಸಲು ಅರ್ಹವಾಗುತ್ತವೆ.
ಹಾಗೆಯೇ, “ಚಿತ್ರ ಭಾರತಿ”-ಭಾರತೀಯ ಚಿತ್ರಗಳ ಮತ್ತು ಏಷಿಯನ್ ಸಿನಿಮಾ ಸ್ಪರ್ಧಾತ್ಮಕ ವಿಭಾಗಗಳಲ್ಲಿ ಸ್ಪರ್ಧಿಸಲಿರುವ ಚಿತ್ರಗಳು ಜನವರಿ ೧, ೨೦೨೦ ರಿಂದ ಡಿಸೆಂಬರ್ ೩೧, ೨೦೨೦ರ ಅವಧಿಯಲ್ಲಿ ನಿರ್ಮಾಣಗೊಂಡಿರಬೇಕು ಹಾಗೂ ಭಾರತದ ಯಾವುದೇ ಭಾಷೆಯ ಕಥಾಚಿತ್ರವಾಗಿದ್ದು, ಕನಿಷ್ಠ ೭೦ ನಿಮಿಷಗಳ ಅವಧಿಯ ಚಿತ್ರಗಳು ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರವೇಶ ಪಡೆಯಲು ಅರ್ಹವಾಗುತ್ತದೆ.
‘ಕನ್ನಡ ಸಿನಿಮಾ’, ‘ಚಿತ್ರ ಭಾರತಿ’ – ಭಾರತೀಯ ಮತ್ತು ಏಷಿಯನ್ ಸಿನಿಮಾ ಚಿತ್ರಗಳ ಸ್ಪ್ಪರ್ಧಾತ್ಮಕ ವಿಭಾಗಕ್ಕೆ ಪ್ರವೇಶ ಬಯಸುವ ಚಲನಚಿತ್ರಗಳಿಗೆ, ಕೇಂದ್ರೀಯ ಚಲನಚಿತ್ರ ಪ್ರಮಾಣೀಕೃತ ಮಂಡಳಿ ನೀಡುವ ಪ್ರಮಾಣ ಪತ್ರದಲ್ಲಿ ನಮೂದಾಗುವ ದಿನಾಂಕವೇ ನಿರ್ಮಾಣದ ಅವಧಿಯ ಮಾನದಂಡವಾಗುತ್ತದೆ.

೧೩ನೇ ಬೆಂಗಳೂರು ಅಂತಾರಾಷ್ಟಿಯ ಸಿನಿಮೋತ್ಸವದ ಸ್ಪರ್ಧಾ ವಿಭಾಗಗಳಿಗೆ ಚಲನಚಿತ್ರಗಳನ್ನು ಸಲ್ಲಿಸುವ ಪ್ರಕ್ರಿಯೆ ದಿನಾಂಕ : ೨೬.೦೧.೨೦೨೧ ರಿಂದ ಪ್ರಾರಂಭವಾಗಿದ್ದು, ಸ್ಪರ್ಧಾತ್ಮಕ ವಿಭಾಗಗಳಿಗೆ ಚಲನಚಿತ್ರಗಳ ಅರ್ಜಿ ಸಲ್ಲಿಸಲು biffesblr@gmail.co.in & ವೆಬ್ಸೈಟ್ಗೆ ಭೇಟಿ ನೀಡಿ. ಅರ್ಜಿಯೊಂದಿಗೆ ಸಿನಿಮಾಕ್ಕೆ ಸಂಬAಧಿಸಿದ ಎಲ್ಲಾ ವಿವರಗಳೂ ಇರಬೇಕು, ಕನ್ನಡ ಸಿನಿಮಾ ಮತ್ತು ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗಕ್ಕೆ ಅರ್ಜಿ ಸಲ್ಲಿಸಲು ಪ್ರತಿ ಚಿತ್ರಕ್ಕೂ ರೂ.೩,೦೦೦/- ಪ್ರವೇಶ ಶುಲ್ಕವಿರುತ್ತದೆ. ಇಂಗ್ಲಿಷ್ ಸಬ್ಟೈಟಲ್ಗಳನ್ನೊಳಗೊಂಡ ಚಲನಚಿತ್ರದ ಆನ್ಲೈನ್ ಸ್‌ಕ್ರೀರ‍್ನೊಂದಿಗೆ, ಆನ್ಲೈನ್ನಲ್ಲಿ ಪ್ರವೇಶ ಶುಲ್ಕವನ್ನು ಪಾವತಿಸಿ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ೦೮.೦೨.೨೦೨೧.
ಹೆಚ್ಚಿನ ಮಾಹಿತಿಗೆ+೯೧ ೮೦-೨೩೪೯೪೨೫೫, ೮೦-೨೩೪೯೩೪೧೦ ಅಥವಾ biffesblr@gmail.co.in & ಸಂಪರ್ಕಿಸಬಹುದು.

By admin