ಗುಂಡ್ಲುಪೇಟೆ: ಜಮೀನು ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಆಕಸ್ಮಿಕವಾಗಿ ತುಂಡಾಗಿ ಕಬ್ಬಿನ ಗದ್ದೆ ಮೇಲೆ ಬಿದ್ದ ಪರಿಣಾಮ ಸುಮಾರು ಅರ್ಧ ಎಕರೆ ಕಬ್ಬು ಬೆಳೆ ಹಾಗೂ 400 ಬಾಳೆ ಗಿಡ ಮತ್ತು ಸಿಪಿಯುಸಿ ಪೈಪ್‍ಗಳು ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕುಂದಕೆರೆ ಗ್ರಾಮದ ರಾಜೇಂದ್ರ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದ ಹಿನ್ನೆಲೆ ಸುಮಾರು ಅರ್ಧ ಎಕರೆಯಷ್ಟು ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ಸೇರಿದಂತೆ ಲಕ್ಷಾಂತರ ಮೌಲ್ಯದ ಸಿಪಿಯುಸಿ ಪೈಪ್ ಗಳು ಕೂಡ ಸುಟ್ಟು ಹೋಗಿದೆ. ಅಲ್ಲದೇ ಪಕ್ಕದ ನಾಗಮಲ್ಲಪ್ಪ ಎಂಬುವರಿಗೆ ಸೇರಿದ ಸುಮಾರು 400ಕ್ಕೂ ಹೆಚ್ಚು ಬಾಳೆಕಟ್ಟೆ ಬೆಂಕಿಗೆ ಆಹುತಿಯಾಗಿ ಎಂದು ತಿಳಿದು ಬಂದಿದೆ.
ಪರಿಹಾರಕ್ಕೆ ಒತ್ತಾಯ: ಚೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರೈತರಿಗೆ ಪರಿಹಾರ ದೊರಕಿಸಿ ಕೊಡಬೇಕೆಂದು ರೈತ ಮುಖಂಡ ವಡ್ಡಗೆರೆ ನಾಗಪ್ಪ ಒತ್ತಾಯಿಸಿದ್ದಾರೆ.
ವರದಿ: ಬಸವರಾಜು ಎಸ್.ಹಂಗಳ