ಚಾಮರಾಜನಗರ: ತಾಲ್ಲೂಕಿನ ಮಲೆಯೂರು ಗ್ರಾಮದ ಹೊರವಲಯದ ಪ್ರಸಿದ್ದ ಜೈನಕ್ಷೇತ್ರ ಕನಕಗಿರಿಯಲ್ಲಿ ಏ.೨೭ ರಿಂದ ಮೇ ೫ ರವರಗೆ ೯ ದಿನಗಳ ಅತಿಶಯ ಮಹೋತ್ಸವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಿರಸಿ ಸಮೀಪದ ಸೋಂದಾಮಠದ ಭಟ್ಟಾಳಂಕಸ್ವಾಮೀಜಿ, ಮುನಿಶ್ರೀಗಳಾದ ಅಮರಕೀರ್ತಿ, ಅಮೋಘಕೀರ್ತಿ ಮಹಾರಾಜರು ಭಾಗವಹಿಸಿದ್ದು, ಮೂವರು ಶ್ರೀಗಳ ಸಾನ್ನಿದ್ಯದಲ್ಲಿ ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕಸ್ವಾಮೀಜಿ ಧ್ವಜಸ್ತಂಭಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.
ಮುಂಜಾನೆಯಿಂದಲೇ ಮೂಲಮೂರ್ತಿಗೆ ಪಂಚಾಮೃತಾಭಿಷೇಕ, ನವಗ್ರಹಶಾಂತಿಹವನ ನಡೆದವು, ನಂತರ ಪೂಜ್ಯಪಾದರ ಯಜ್ಞಶಾಲಾಮಂಟಪ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಲಾಯಿತು.ಇದೇವೇಳೆ ನವಗ್ರಹ ವಿಧಾನ ಆರಾಧನೆ ಶ್ರೀಗಳ ನೇತೃತ್ವದಲ್ಲಿ ಜರುಗಿದವು.
ಕಾರ್ಯಕ್ರಮದಲ್ಲಿ ಕನಕಗಿರಿ ಅತಿಶಯ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಜೈನಮಠದ ಭಕ್ತರು ಪಾಲ್ಗೊಂಡಿದ್ದರು.
