
ಮೈಸೂರು: ಇದೇ ಫೆ. 27 ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2022-2025 ನೆ ಸಾಲಿನ ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಮಂಡಳಿಗೆ ಚುನಾವಣೆ ನಡೆಯಲಿದ್ದು ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿ ಬನ್ನೂರು ಕೆ. ರಾಜು ಅವರು ಚುನಾವಣಾ ವೇಳಾಪಟ್ಟಿ ಮತ್ತು ನಿಬಂಧನೆಗಳು ಸೇರಿದಂತೆ ಮತದಾರರ ಪೂರ್ವಭಾವಿ ಪಟ್ಟಿಯನ್ನು ಜಿಲ್ಲಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ಪ್ರಕಟಿಸಿದರು.
ಅದರಂತೆ ಮತದಾರರ ಪಟ್ಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ದಿನಾಂಕ 9 – 2 – 2022 ರ ಬುಧವಾರದವರೆಗೆ ಅವಕಾಶ ಕಲ್ಪಿಸಲಾಗಿದೆ. ದಿನಾಂಕ 11-2- 2022 ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದ್ದು ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಾರಂಭಗೊಳ್ಳಲಿದೆ.

ದಿನಾಂಕ 14 -2 -2022ರ ಸೋಮವಾರ 3:00 ಗಂಟೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದು ದಿನಾಂಕ 16 -2- 2022 ಬುಧವಾರ ಮಧ್ಯಾಹ್ನ 1 ಗಂಟೆಯ ನಂತರ ನಾಮಪತ್ರಗಳ ಪರಿಶೀಲನೆ ನಡೆಸಿ ಆ ದಿನವೇ ಕ್ರಮಬದ್ಧಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು. ದಿನಾಂಕ 19 – 2 – 2022 ಶನಿವಾರ ಮಧ್ಯಾಹ್ನ ಒಂದು ಗಂಟೆಯೊಳಗೆ ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿರುತ್ತದೆ.
ಅದೇ ದಿನ ಅಂದರೆ ದಿನಾಂಕ 19-2-2022ರ ಶನಿವಾರ ಮಧ್ಯಾಹ್ನ 2 ಗಂಟೆಯ ನಂತರ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ಮಾಡಲಾಗುವುದು. ಅಗತ್ಯಬಿದ್ದಲ್ಲಿ ದಿನಾಂಕ 27 -2 -2022ರ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3:00 ಗಂಟೆಯ ವರೆಗೆ ಚುನಾವಣೆ ನಡೆಯಲಿದೆ.ಅಂದೇ ದಿನಾಂಕ 27-2-2022 ರ ಭಾನುವಾರ 03: 30 ರ ನಂತರ ಮತಗಳ ಎಣಿಕೆ. ಆನಂತರ ಫಲಿತಾಂಶ ಘೋಷಣೆ. ದಿನಾಂಕ 28- 2 -2022 ರ ಸೋಮವಾರ ಚುನಾವಣೆ ಪ್ರಕ್ರಿಯೆ ಪೂರ್ಣವಾಗುತ್ತದೆಂದೂ, ಈ ಚುನಾವಣೆಯಲ್ಲಿ ಸಂಘದ ಗೌರವ ಸದಸ್ಯರಿಗೆ ಮತ್ತು ಸಹ ಸದಸ್ಯರಿಗೆ ಮತದಾನದ ಹಕ್ಕು ಮತ್ತು ಸ್ಪರ್ಧಿಸುವ ಹಕ್ಕು ಇರುವುದಿಲ್ಲವೆಂದು ಜಿಲ್ಲಾ ಚುನಾವಣಾಧಿಕಾರಿ ಬನ್ನೂರು ಕೆ. ರಾಜು ತಿಳಿಸಿದ್ದಾರೆ.