ಗುಂಡ್ಲುಪೇಟೆ: ಈ ಬಾರಿ ಡಿ.22ಕ್ಕೆ ಮೊದಲ ಹಂತದಲ್ಲಿ ನಡೆಯುವ ಗ್ರಾಪಂ ಚುನಾವಣೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತ ಸಂಘದಿಂದ ಚುನಾವಣೆ ಕಣಕ್ಕೆ ಅಭ್ಯರ್ಥಿಗಳನ್ನು ನಿಲ್ಲಿಸಲು ರೈತ ಸಂಘ ನಿರ್ಧರಿಸಿದೆ.
ತಾಲ್ಲೂಕಿನ ಶಿವಪುರ ಗ್ರಾಪಂ-06 ಅಭ್ಯರ್ಥಿಗಳು ದೇವರಹಳ್ಳಿ- 01, ಹೊನ್ನೇಗೌಡನಹಳ್ಳಿ- 01, ಗೋಪಾಲಪುರ- 03, ತೆರಕಣಾಂಬಿ-02, ನಿಟ್ರೆ ಗ್ರಾಮದಲ್ಲಿ 01 ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ತಿಳಿಸಿದರು.
ಈಗಾಗಲೆ ಕಣ್ಣೇಗಾಲ ಶಿವಪುರ ಗ್ರಾಮ ಪಂಚಾಯಿತಿಯಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಗ್ರಾಮಗಳ ಅಭಿವೃದ್ಧಿಗೆ ರೈತಸಂಘ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದಾಗಿ ಅವರು ಹೇಳಿದರು.
ವರದಿ: ಬಸವರಾಜು ಎಸ್ ಹಂಗಳ