ಚಾಮರಾಜನಗರ: ವಿದ್ಯೆಗಿಂತ ಮಿಗಿಲಾದುದು ಪ್ರಪಂಚದಲ್ಲಿ ಬೇರಾವುದೂ ಇಲ್ಲ. ಹೀಗಾಗಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಅವರನ್ನು ಸಾಧಕರನ್ನಾಗಿ ಮಾಡಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ ಹೇಳಿದರು
ಚಾಮರಾಜನಗರದ ೧೫ನೇವಾರ್ಡ್ ಡಾ,ಬಾಬು ಜಗಜೀವನ ರಾಂ ಬಡಾವಣೆಯಲ್ಲಿ ಮಂಟೇಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಈಚೆಗೆ ನಡೆದ ೬ನೇವರ್ಷದ ಕುರುಬನಕಟ್ಟೆ ಕ್ಷೇತ್ರದ ಚನ್ನಯ್ಯ ಮತ್ತು ಶ್ರೀ ಲಿಂಗಯ್ಯ ಕಂಡಾಯಗಳ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜವು ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದಿದ್ದು, ಶಿಕ್ಷಣದಿಂದ ಮಾತ್ರ ಸಮಾಜವನ್ನು ಬದಲಿಸುವ ಶಕ್ತಿಯಿದೆ.
ಆದ್ದರಿಂದ ತಮ್ಮ ಮಕ್ಕಳಿಗೆ ಪೋಷಕರು ಶಿಕ್ಷಣ ಕೂಡಿಸುವ ಮೂಲಕ ಅವರನ್ನು ಸಾಧಕರನ್ನಾಗಿ ರೂಪಿಸಬೇಕು, ಮಂಟೇಸ್ವಾಮಿ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಸಂಘ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಕರ್ನಾಟಕ ಕನ್ನಡ ವೇದಿಕೆ ರಾಜ್ಯಾಧ್ಯಕ್ಷ ಚಾ.ಗು.ನಾಗರಾಜು ಮಾತನಾಡಿ, ಕುರುಬನಕಟ್ಟೆ ಕ್ಷೇತ್ರದ ಚನ್ನಯ್ಯ ಮತ್ತು ಶ್ರೀ ಲಿಂಗಯ್ಯ ಕಂಡಾಯಗಳ ಜಿಲ್ಲಾಮಟ್ಟದ ಧಾರ್ಮಿಕ ಮಹೋತ್ಸವ ರಾಜ್ಯಮಟ್ಟದಲ್ಲಿ ಜಾಗೃತಿ ಮೂಡಿಸುವಂತಾಗಬೇಕು, ಈ ಪರಂಪರೆ ಮುಂದಿನಪೀಳಿಗೆಗೂ ಉಳಿಯಬೇಕು ಎಂದರು.
ಝೀ ಟಿವಿಯ ಗಾಯಕ ಕಂಬದ ರಂಗಯ್ಯ, ಅನಿಲ್ ಬಾಬಿ, ಹರ್ಷ, Zಎದೆತುಂಬಿ ಹಾಡಿದೆನು ಖ್ಯಾತಿಯ ನಾಜೀರಾಭಾನು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.
ಗಾಯಕರಾದ ಮಳವಳ್ಳಿಮಹದೇವಸ್ವಾಮಿ, ನೀಲಗಾರರು ಜಾನಪದ ಗೀತೆ ಹಾಡಿರಂಜಿಸಿದರು.
ಡಾ,ಬಾಬುಜಗಜೀವನ ರಾಂ ಯುವಜಾಗೃತಿ ವೇದಿಕೆ ಅಧ್ಯಕ್ಷ ಎಂ.ಶಿವಮೂರ್ತಿ, ಮಾದಿಗಮೀಸಲು ಹೋರಾಟಸಮಿತಿ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ್, ಸಿವಿಲ್ ಗುತ್ತಿಗೆದಾರ ಎಚ್,ಎಸ್.ನಾಗರಾಜು, ನಿವೃತ್ತ ಕಿರಿಯ ಲೆಕ್ಕಪರಿಶೋಧಕ ಮೈಸೂರು ರೇವಣ್ಣ, ಶಶಿಕಲಾ, ಸಿದ್ದಪ್ಪಾಜಿ,ಲಿಂಗಣ್ಣ, ರಾಜೇಶ್, ಮಹೇಶ್, ನಿವೃತ್ತ ದೈಹಿಕಶಿಕ್ಷಣ ನಿರ್ದೇಶಕ ನಾಗಸುಂದರ್, ಯಜಮಾನರು, ಮುಖಂಡರು ಹಾಜರಿದ್ದರು.