ಸ್ಪಂದನ ಸಂಸ್ಥೆವತಿಯಿಂದ 2020 ರ ಸಾಲಿನ ನಾಲ್ಕನೇ ಸ್ಪರ್ಧೆಯಾಗಿ ಪರಿಸರಸ್ನೇಹಿ ದೀಪಾವಳಿ ಆಚರಣೆಯ ಕುರಿತಾಗಿ ಭಾಷಣ ಮತ್ತು ವಿಡಿಯೋ ಕ್ಲಿಪ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಭಾಗವಹಿಸಿದ್ದು , ಶಿವಮೊಗ್ಗದ ೬ನೇ ತರಗತಿಯ ವಿದ್ಯಾಥಿ,೯ನಿ ಕು.ಅಕ್ಷತಾ ಎಸ.ಎಸ್ ಪ್ರಥಮ ಬಹುಮಾನ , ನಂದಳಿಕೆಯ ಕು. ಶರಣ್ಯ ತಂತ್ರಿ ದ್ವಿತೀಯ ಬಹುಮಾನ, ಮಧುಗಿರಿಯ ನಾಗಸ್ಮಿತ ತೃತೀಯ ಬಹುಮಾನ ,
ಮೈಸೂರಿನ ಕಾರ್ತಿಕ್ ನಂಜುಂಡ ಎಂ. ಮತ್ತು ಆಕಾಶ್ ಕೆ.ಸಮಾಧಾನಕರ ಬಹುಮಾನ ಗಳಿಸಿಕೊಂಡಿದ್ದಾರೆ ಎಂದು ಸ್ಪಂದನ ಅಧ್ಯಕ್ಷರಾದ ಎಂ.ಜಯಶಂಕರ್ ಪ್ರಕಟಣೆಯಲ್ಲಿ ತಿಳಿಸಿ ಅಭಿನಂದಿಸಿದ್ದಾರೆ.