ಬಂತು ಬಂತು… ಬೆಳಕಿನ ಹಬ್ಬ ದೀಪದ ಹಬ್ಬ||
ಅಂದ ಚೆಂದದÀ ದೀಪಾವಳಿ||
ಸುಜ್ಞಾನ ಬೆಳಗಿಸೊ ದೀಪಾವಳಿ||
ಬನ್ನಿ ಬನ್ನಿ ಎಲ್ಲರೂ ದೀಪದಿಂದ ದೀಪ ಹಚ್ಚೋಣ||
ಪರಿಸರ ದೀಪಾವಳಿ ಆಚರಿಸೋಣ||
ಪರಿಸರ ಸ್ನೇಹಿ ಆಗೋಣ||
ಮೈಸೂರು, ನವೆಂಬರ್-ಎಲ್ಲೆಡೆ ದೀಪಾವಳಿ ಸಂಭ್ರಮ ಈಗಾಗಲೇ ಮನೆ ಮಾಡಿದೆ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ದೀಪಾವಳಿ ಹಬ್ಬದ ಆಚರಣೆಗಾಗಿ ನಾನಾ ತರಹದ ಸಾಮಾನುಗಳ ಖರೀದಿ ಭರಾಟರ ಜೋರಾಗಿಯೇ ನಡೆಯುತ್ತಿದೆ.
ಈ ಮಧ್ಯೆ ಮೈಸೂರು ಕುವೆಂಪು ನಗರದ ಸ್ಪಂದನ ಸಂಸ್ಥೆಯವರು “ಪರಿಸರಸ್ನೇಹಿ ದೀಪಾವಳಿ” ಆಚರಣೆ ಕುರಿತ ಬಗ್ಗೆ ಒಂದು ಸಣ್ಣ ಸ್ಪರ್ಧೆಯನ್ನು ಆಯೋಜಿಸಿದೆ. ಇದು ಕೇವಲ 2 ರಿಂದ 4 ನಿಮಿಷಗಳ ಸ್ಫರ್ಧೆಯಾಗಿದ್ದು ಭಾಷಣ ಮತ್ತು ವಿಡಿಯೋ ಸ್ಫರ್ಧೆಯಾಗಿದ್ದು, ಇದನ್ನು 2 ನಿಮಿಷಗಳ ತಮ್ಮ ಪರಿಚಯ ಮತ್ತು ಪರಿಸರ ಸ್ನೇಹಿ ದೀಪಾವಳಿ ಆಚರಣೆ ಬಗ್ಗೆ ತಮ್ಮ ಪುಟ್ಟ ಭಾಷಣವನ್ನು ಒಂದು ವಿಡಿಯೋ ಮಾಡಿ ಆನ್ ಲೈನ್ ಮುಖಾಂತರ ಅಪ್ ಲೋಡ್ ಮಾಡಬೇಕು.
ಇದರಲ್ಲಿ ಭಾಗವಹಿಸುವವರಿಗೆ ಯಾವುದೇ ವಯಸ್ಸಿನ ಅಂತರವಿಲ್ಲ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಆಯ್ಕೆಯಾದ 3 ಅತ್ಯುತ್ತಮ ಮತ್ತು 2 ಉತ್ತಮ ವಿಡಿಯೋ ಕ್ಲಿಪ್‍ಗಳಿಗೆ ಸ್ಫರ್ಧಿಗಳಿಗೆ ಬಹುಮಾನ ಮತ್ತು ಪ್ರಶಂಸನಾ ಪತ್ರದೊಂದಿದೆ, ಪ್ರಥಮ ಬಹುಮಾನ ರೂ.2000 ಮತ್ತು ಪುಸ್ತಕಗಳು, ದ್ವಿತೀಯ ಬಹುಮಾನವಾಗಿ ರೂ.1500 ಮತ್ತು ಪುಸ್ತಕಗಳು, ತೃತೀಯ ಬಹುಮಾನವಾಗಿ ರೂ. 1000 ಮತ್ತು ಪುಸ್ತಕಗಳು ಮತ್ತು ಸಮಾಧಾನಕರ ಬಹುಮಾನವಾಗಿ ರೂ.500 ಮತ್ತು ಪುಸ್ತಕಗಳನ್ನು ನೀಡಲಿದ್ದಾರೆ.
ನಿಯಮಗಳು :
ಪರಿಸರ ಸ್ನೇಹಿ ದೀಪಾವಳಿ ಆಚರಣೆ ಆಗಿರಬೇಕು.
ವಿಡೊಯೋ ರೆಕಾರ್ಡ್ ಪ್ರಾರಂಭದಲ್ಲಿ ತಪ್ಪದೇ ಪರಿಚಯ ಮಾಡಿಕೊಳ್ಳಬೇಕು.
ವಿಡಿಯಫ ಪರಿಚಯ ಸೇರಿ ಒಟ್ಟು 4 ನಿಮಿಷ ಮೀರಿರಬಾರದು.
ಭಾಷಣ ಮತ್ತು ಆಚರಣೆ ವಿಡಿಯೋ ಒಂದೇ ಸ್ಪರ್ಧೆಯ ಭಾಗಗಳಾಗಿದ್ದು, ಮೊದಲು 2 ನಿಮಿಷ ಭಾಷಣ ಮಾಡಿದ ನಂತರ 2 ನಿಮಿಷ ಆಚರಣೆಯ ಒಂದೇ ವಿಡಿಯೋ ಮಾಡಬೇಕು.
ಆನ್ ಲೈನ್ ಕ್ಲಿಪ್ ನೊಂದಣಿ ಮಾಡಿಕೊಂಡು ಭಾಷಣ ಆಚರಣೆಯ ವಿಡಿಯೋ ಕ್ಲಿಪ್ ಒಂದು ಸೆಲ್ಫಿ ಪೋಟೋ ವಿಳಾಸ ದೃಢೀಕರಣ ಪತ್ರಗಳನ್ನು ಲಿಂಕ್ hಣಣಠಿ//ರಿಛಿsಠಿಟಿಜಚಿಟಿಚಿ.ಛಿom/eveಟಿಣsಗೆ ಅಪ್‍ಲೋಡ್ ಮಾಡಬೇಕು. ವಿಡಿಯೋ ಕಳುಹಿಸಬೇಕಾದ ಕಡೆಯ ದಿನಾಂಕ:-25-11-2020 ಆಗಿರುತ್ತದೆ.
ಒಂದು ಮನೆಯಿಂದ 1 ವಿಡಿಯೋಗೆ ಮಾತ್ರ ಅವಕಾಶ ಮತ್ತು ಸ್ವಂತದ್ದಾಗಿರಬೇಕು. ಬರೆದು ಕೊಂಡು ಭಾಷಣ ಮಾಡುವಂತಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಯಾವುದೇ ನಿಯಮಗಳನ್ನು ಮೀರಿದ್ದಲ್ಲಿ ಸ್ಫರ್ಧೇಗೆ ಪರಿಗಣಿಸುವುದಿಲ್ಲ.
ತೀರ್ಪುಗಾರರು ಎಸ್. ತಿಪ್ಪೇಸ್ವಾಮಿ, ವಿಶ್ವಮಾನ್ಯ ಛಾಯಾಗ್ರಾಹಕರು, ಎಸ್. ಉಮೇಶ್, ಲೇಖಕರು ಮೈಸೂರು ಅರಸಿಕುಮಾರ್ ಛಾಯಾಗ್ರಾಹಕರು ಮೈಸೂರು, ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ:8073911725 ಮತ್ತು 9343123007ನ್ನು ಸಂಪರ್ಕಿಸಬಹುದು ಎಂದು ಸಂಘದ ಅಧ್ಯಕ್ಷರಾದ ಎಂ. ಜಯಶಂಕರ್ ತಿಳಿಸಿದ್ದಾರೆ.

By admin