ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸುವರ್ಣ ಬೆಳಕು ಫೌಂಡೇಶನ್ ಮತ್ತು ಹಿಮಾಲಯ ಪೌಂಢೇಶನ್ ಸಹಯೋಗದಲ್ಲಿ ಮೈಸೂರಿನ ಆಯ್ದ ನಗರಗಳ ಸ್ಥಳೀಯರ ಮನೆ ಮನೆಗೆ ಭೇಟಿ ನೀಡಿ ಔಷದೀಯ ಸಸ್ಯಗಳಾದ ಬ್ರಾಹ್ಮೀ,ಒಂದೆಲಗ,ಅಮೃತಬಳ್ಳಿ ಸಸಿಗಳನ್ನು ನೀಡುವುದರ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಮತ್ತು ಪ್ರಸ್ತುತ ತಲೆನೋವಾಗಿರುವ ಕರೋನಾ ಹಾಗು ಇನ್ನಿತರ ದೈಹಿಕ ಮಾನಸಿಕ ಖಾಯಿಲೆಗಳನ್ನು ಹೋಗಾಲಿಡಸಲು ಮನೆಯಲ್ಲೇ ಔಷಧೀಯ ಸಸಿಗಳನ್ನು ನೆಟ್ಟು ಆರೋಗ್ಯದಾಯಕವಾಗಿ ಬಳಸಿಕೊಳ್ಳಲು ಜಾಗೃತಿಯನ್ನು ಮೂಢಿಸುವ ಉದ್ದೇಶದಿಂದ ಕಾರ್ಯಕ್ರಮ ಜರುಗಲಿದೆ.
ಈ ಜಾಗೃತಿ ಕಾರ್ಯಕ್ರಮವನ್ನು ಹಿರಿಯ ಸಮಾಜ ಸೇವಕ ರಘು ರಾಮ್ ವಾಜಪೇಯಿ ಮತ್ತು ಕಾಂಗ್ರೆಸ್ ಯುವ ಮುಖಂಡರು ಎಂ ಎನ್ ನವೀನ್ ಕುಮಾರ್. ಅವರು ಉದ್ಘಾಟಿಸಿ ಕಾರ್ಯಕ್ರಮದ ಕುರಿತು ಮಾತನಾಡಲಿದ್ದಾರೆ.ಇದೇ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಪ್ರಸನ್ನಮೂರ್ತಿ ಲೇಖಕ ಹಾಗೂ ಸುಯೋಗ ಆಸ್ಪತ್ರೆ
ಮಾಲೀಕರು ಅದ್ಯಕ್ಷರು ಡಾ. ಯೋಗಣ್ಣ ಅವರಿಗೇ ಗೌರವ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.ಪ್ರಸನ್ನಮೂರ್ತಿ ಅವರು ಎಂ.ಕಾಂ ಮತ್ತು ಸಮುದಾಯಾಧಾರಿತ ಅಭಿವ್ಯಕ್ತಿ ವಿಷಯವಾಗಿ ಡಿಪ್ಲೊಮಾ ಪದವಿಗಳನ್ನು ಪಡೆದುಕೊಂಡಿದ್ದಾರೆ.
ಇವರು ಕ್ಯಾತನಹಳ್ಳಿ ಹೆಚ್.ಡಿ ಕೋಟೆ ನಿವಾಸಿಗಳಾಗಿದ್ದು 1990 ರಿಂದ ಗ್ರಾಮೀಣ ಭಾಗದ ಶೋಷಿತ ವರ್ಗಗಳ ಅಭಿವೃದ್ಧಿ ಕಾರ್ಯಕ್ರಮ,ದಕ್ಷಿಣ ತಾಲ್ಲೂಕಿನಲ್ಲಿ ಅಂಗವಿಕಲರ ಪುನಶ್ಚೇತನ,ಮೈಸೂರಿನ ಸುತ್ತಮುತ್ತ 50 ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳು,ಮಂಡ್ಯ,ಕೆ.ಆರ್ ಪೇಟೆ,ಹಾಸನ,ಹೊಳೆನರಸೀಪುರ ಇನ್ನೂ ಮುಂತಾದೆಡೆ 10 ಲಕ್ಷ ಸಸಿ ನೆಟ್ಟು ಪರಿಸರ ಸಂರಕ್ಷಣಾ ಕಾಳಜಿಯನ್ನು ತೋರಿದ್ದಾರೆ.ಮತ್ತಷ್ಟು ಸಮಾಜ ಸೇವೆಯಲ್ಲಿ ನಿರತರಾಗಿರುವ ಇವರಿಗೇ ಸುವರ್ಣ ಬೆಳಕು ಫೌಂಡೇಶನ್ ಹಾಗೂ ಹಿಮಾಲಯ ಫೌಂಡೇಶನ್. ಸನ್ಮಾನ ನೀಡಿ ಗೌರವಿಸಲಾಗುವುದು.