
ಗಣಪತಿ ವೆಂಕಟರಮಣ ಅಯ್ಯರ್ ಹಳೇ ಮೈಸೂರು ರಾಜ್ಯದ ದಕ್ಷಿಣಕಾಶಿ ನಂಜನಗೂಡಲ್ಲಿ ಸಂಪ್ರದಾಯಸ್ಥ ವಿಪ್ರ ಕುಟುಂಬದಲ್ಲಿ ದಿ.೩.೯.೧೯೧೭ರಂದು ಜನಿಸಿದರು. ಶಾಲೆಯ ವಿದ್ಯಾಭ್ಯಾಸದಲ್ಲಿ, ಗುರುಕುಲದ ಸಂಸ್ಕೃತ-ಸಂಗೀತದಲ್ಲಿ ಜಾಣನಾಗಿದ್ದ ಜಿ.ವಿ.ಅಯ್ಯರ್ ಬಾಲ್ಯದಲ್ಲೆ ಸಂಗೀತ, ಸಂಸ್ಕೃತಭಾಷೆಯ ಪಾಂಡಿತ್ಯ ಗಳಿಸಿದ್ದರು. ಇವರು, ನಾಟಕ-ಸಿನಿಮ ರಂಗಕ್ಕೆ ಆಗಮಿಸಿದ್ದೆ ಅನಿರೀಕ್ಷಿತ, ಆಕಸ್ಮಿಕ? ಮೈಸೂರಿನಲ್ಲಿ ಮೊಕ್ಕಾಂ ಹೂಡುತ್ತಿದ್ದ ಕಂಪನಿ ನಾಟಕಗಳಿಂದ ಪ್ರಭಾವಿತರಾಗಿ ಬಣ್ಣ ಹಚ್ಚಿಕೊಂಡವರು. ಬಹುಶಃ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದಿದ್ದರೆ, ಓರ್ವ ಅತ್ಯುತ್ತಮ ಸಂಸ್ಕೃತ ಪ್ರಾಧ್ಯಾಪಕ/ಸಂಗೀತವಿದ್ವಾಂಸ ಆಗುತ್ತಿದ್ದರೆಂಬುದರಲ್ಲಿ ಸಂಶಯವಿಲ್ಲ. ೯ ವರ್ಷದ ಬಾಲಕನಿದ್ದಾಗಲೆ ಟೈಗರ್ ವರದಾಚಾರ್ಯರ/ಗುಬ್ಬಿವೀರಣ್ಣನವರ ನಾಟಕ ಕಂಪನಿಗಳಲ್ಲಿ ನಟಿಸಲು ಪ್ರಾರಂಭಿಸಿದರು!೧೯೪೩ರಲ್ಲಿ ತೆರೆಕಂಡ ?ರಾಧಾರಮಣ? ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಾಟಕ-ಸಿನಿಮಾ ಎರಡೂ ಕ್ಷೇತ್ರವನ್ನು ಬಲುಬೇಗ ಅರ್ಥೈಸಿಕೊಂಡು ಕಿರಿಯ ವಯಸ್ಸಲ್ಲೆ ಸ್ವತಂತ್ರ ಚಿತ್ರೋದ್ಯಮಿಯಾದರು. ಅನಂತಲಕ್ಷ್ಮಿ ಪಿಕ್ಚರ್ಸ್ ಬ್ಯಾನರ್‌ಅಡಿಯಲ್ಲಿ ಒಟ್ಟು ನಿರ್ಮಿಸಿದ ೨೩ ಫ಼ಿಲಂಸ್ ಪೈಕಿ ೧೮ ಕನ್ನಡ ಚಿತ್ರಗಳನ್ನು ತಯಾರಿಸಿ ಚಂದನವನಕ್ಕೆ ಅಮೂಲ್ಯ ಕೊಡುಗೆ ನೀಡಿದರು. ತಮ್ಮದೇ ಕಥೆ-ಚಿತ್ರಕಥೆ-ಸಂಭಾಷಣೆ-ಹಾಡು-ಸಂಗೀತನಿರ್ದೇಶನ ಜತೆಗೆ ನಟ-ನಿರ್ಮಾಪಕ-ನಿರ್ದೇಶಕನಾಗಿಯೂ ಅದ್ಭುತ ಸಾಧನೆ ಮಾಡಿದ್ದಾರೆ. ಇವರ ಗರಡಿಯ ಶಿಷ್ಯವೃಂದದಲ್ಲಿ ಅನೇಕರು ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಕೀರ್ತಿ-ಯಶಸ್ಸು ಗಳಿಸಿದ್ದಾರೆ.

ಭಾರತ ದೇಶದಲ್ಲೇ ಏಕೆ ಇಡೀ ಪ್ರಪಂಚದಲ್ಲೆ ಮೊಟ್ಟಮೊದಲ ಬಾರಿಗೆ ಸಂಸ್ಕೃತ ಭಾಷೆಯ ಫ಼ಿಲಂ ತಯಾರಿಸಿದ ಪ್ರಪ್ರಥಮ ನಟ-ನಿರ್ಮಾಪಕ-ನಿರ್ದೇಶಕ. ಪಾಶ್ಚಿಮಾತ್ಯರಾಷ್ಟ್ರ, ಯೂರೋಪ್-ಏಷ್ಯರಾಷ್ಟ್ರಗಳಲ್ಲಿ ಇವರ ಸಂಸ್ಕೃತ ಚಲನಚಿತ್ರಗಳು ರಿಲೀಸ್ ಆಗಿ ದಾಖಲೆ ನಿರ್ಮಿಸಿದವು. ಇವರ ಸಾಧನೆಯ ಬಗ್ಗೆ ಹಾಲಿವುಡ್ ಸೇರಿದಂತೆ ಪ್ರಪಂಚದ ಪ್ರಮುಖ ಚಿತ್ರೋದ್ಯಮಿಗಳು ಶ್ಲಾಘನೆ ವ್ಯಕ್ತಪಡಿಸಿ ಅನೇಕ ಪ್ರಶಸ್ತಿ, ಬಿರುದು ಬಹುಮಾನ ಪುರಸ್ಕಾರ ನೀಡಿದ್ದಾರೆ. ವಿಷ್ಣುವರ್ಧನ್, ಗಂಗಾಧರ್ ಮುಂತಾದ ಅನೇಕ ನಟನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಇಂಥ ಮಹಾನ್ ವ್ಯಕ್ತಿಯನ್ನು ಪಡೆದ ಕನ್ನಡಿಗರೇ ಮಾನ್ಯ, ಚಂದನವನವೇ ಧನ್ಯ!
ಆದಿಶಂಕರಾಚಾರ್ಯ[೧೯೮೩]; ಶ್ರೇಷ್ಠಚಲನಚಿತ್ರ, ಅತ್ತ್ಯುತ್ತಮ ಚಿತ್ರಕಥೆ, ಛಾಯಾಗ್ರಹಣ, ಶಬ್ಧಗ್ರಹಣಕ್ಕಾಗಿ ೪ರಾಷ್ಟ್ರಪ್ರಶಸ್ತಿ ಪಡೆವುದರ ಜತೆಗೆ ೨೦೧೨ರಲ್ಲಿ ?ಡೈರೆಕ್ಟೊರೇಟ್ ಆಫ಼್ ಫ಼ಿಲಂ ಫ಼ೆಸ್ಟಿವಲ್? ಪ್ರಶಂಸನಾಪತ್ರ, ೨೦೧೩ರ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ, ಕ್ಯಾನೆಯ ಅಂತಾರಾಷ್ಟ್ರ ಸಂಸ್ಕೃತಿ ಪರಂಪರಾ ಚಲನಚಿತ್ರೋತ್ಸವ ಪ್ರಶಸ್ತಿ ಹಾಗೂ ಜಪಾನ್ ಓವರ್ಸೀಸ್ ಫ಼ಿಲಂ ಫ಼ೆಸ್ಟಿವಿಟೀಸ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಇಂಡಿಯಾದ ಏಕೈಕ ಸಿನಿಮ! ೧೯೯೩ರಲ್ಲಿ ಮತ್ತೊಂದು ಸಂಸ್ಕೃತ ಭಾಷೆಯ ಸಿನಿಮ ?ಭಗವದ್ಗೀತಾ? ಅತ್ಯುತ್ತಮ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಗಳಿಸಿದ್ದಲ್ಲದೆ ಕೊಲಂಬಿಯಾದ ಬೊಗೋಟಾ ಫ಼ಿಲಂ ಫ಼ೆಸ್ಟಿವಲ್ನ ಅತ್ಯುತ್ತಮ ಚಿತ್ರವೆಂದು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆಯಿತು! ೧೯೯೮ರಲ್ಲಿ ಹಿಂದಿ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ನಿರ್ಮಾಣಗೊಂಡ ?ಸ್ವಾಮಿವಿವೇಕಾನಂದ? ಸಿನಿಮಾಗೆ ಕತೆ-ಚಿತ್ರಕಥೆ-ಸಾಹಿತ್ಯ-ನಿರ್ದೇಶನದ ಹೊಣೆ ಹೊತ್ತಿದ್ದು ಶಮ್ಮಿಕಪೂರ್, ಶಶಿಕಪೂರ್, ರಾಖಿ, ಹೇಮಮಾಲಿನಿ, ಜಯಪ್ರದ, ಮಿಥುನ್ಚಕ್ರವರ್ತಿ[ಅತ್ಯುತ್ತಮ ಪೋಷಕನಟ-ರಾಷ್ಟ್ರಪ್ರಶಸ್ತಿ]ನಟಿಸಿದ್ದರು. ಎಸ್ಸೆಲ್ ಭೈರಪ್ಪನವರ ಕಾದಂಬರಿ ಆಧಾರಿತ ಬಿ.ವಿ.ಕಾರಂತ-ಗಿರೀಶ್ಕಾರ್ನಾಡ್ ಜಂಟಿ ನಿರ್ದೇಶನದ ?ವಂಶವೃಕ್ಷ?[೧೯೭೨]ಚಿತ್ರದ ನಿರ್ಮಾಪಕರಾಗಿ ರಾಷ್ಟ್ರಪ್ರಶಸ್ತಿ ಗಳಿಸಿದರು. ತ.ರಾ.ಸು. ಕಾದಂಬರಿ ಆಧಾರಿತ ?ಹಂಸಗೀತೆ?[೧೯೭೫] ತಯಾರಿಸಿ ಮತ್ತೊಮ್ಮೆ ೨ ರಾಷ್ಟ್ರಪ್ರಶಸ್ತಿಗಳನ್ನು ಪಡೆದರು. ತಮಿಳಿನಲ್ಲಿ ?ರಾಮಾನುಜಾಚಾರ್ಯ? ಕನ್ನಡದಲ್ಲಿ ?ಮಧ್ವಾಚಾರ್ಯ? ತಯಾರಿಸಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಡಾ||ಬಾಲಮುರಳಿಕೃಷ್ಣರಿಗೆ ೩ ಬಾರಿ ರಾಷ್ಟ್ರಪ್ರಶಸ್ತಿ ದೊರಕಿಸಿಕೊಟ್ಟ ಭಾರತ ಚಿತ್ರರಂಗದ ದ್ರೋಣಾಚಾರ್ಯ! ಒಟ್ಟು ೪ಫ಼ಿಲಂಫ಼ೇರ್ ಪ್ರಶಸ್ತಿ ಪಡೆದಿದ್ದರು. ಸಂಜಯ್ದತ್ ರಾವಣನ ಪಾತ್ರದ ?ರಾಮಾಯಣ? ಫ಼ಿಲಂ ನಿರ್ಮಿಸುವ ಹೆಬ್ಬಯಕೆ ಈಡೇರುವ ಮುನ್ನ ೨೧.೧೨.೨೦೦೩ರಂದು ಇಹಲೋಕ ತ್ಯಜಿಸಿದ್ದು ದೊಡ್ಡ ದುರಂತವೆ ಹೌದು! ತುಂಬು ಜೀವನದ ೮೭ನೇ ವಯಸ್ಸಲ್ಲಿ ದಿಢೀರನೆ ಮುಂಬೈನಲ್ಲಿ ದೈವಾಧೀನರಾದ ನಂತರ ಬೆಂಗಳೂರಿನ ಕೆಂಗೇರಿ ದೊಡ್ಡ ಆಲದಮರ ಬಳಿ ಇರುವ ತಮ್ಮದೆ ಭಾರಧ್ವಾಜ ಆಶ್ರಮದಲ್ಲಿ ಅಂತ್ಯಕ್ರಿಯೆ ಜರುಗಿ ಪ್ರಕೃತಿಯಲ್ಲಿ ಲೀನವಾದರು.
ಜಿ.ವಿ.ಅಯ್ಯರ್ ನಟಿಸಿದ/ನಿರ್ಮಿಸಿದ/ನಿರ್ದೇಶಿಸಿದ ಚಿತ್ರಗಳು |
ಕ್ರ.ಸಂ. ಫ಼ಿಲಂ ಹೆಸರು ಕ್ರ.ಸಂ. ಫ಼ಿಲಂ ಹೆಸರು |
೧ ರಾಧಾರಮಣ/೧೯೪೩ ೧೪ ಲಾಯರ್‌ಮಗಳು/೧೯೬೩ |
೨ ಬೇಡರಕಣ್ಣಪ್ಪ/೧೯೫೪ ೧೫ ಪೋಸ್ಟ್‌ಮಾಸ್ಟರ್/೧೯೬೪ |
೩ ಸೋದರಿ/೧೯೫೫ ೧೬ ಕಿಲಾಡಿರಂಗ/೧೯೬೬ |
೪ ಭಕ್ತಮಲ್ಲಿಕಾರ್ಜುನ/೧೯೫೫ ೧೭ ರಾಜಶೇಖರ/೧೯೬೭ |
೫ ಸದಾರಮೆ/೧೯೫೬ ೧೮ ಗಂಗೆಗೌರಿ/೧೯೬೭ |
೬ ಜಗಜ್ಯೋತಿಬಸವೇಶ್ವರ/೧೯೫೯ ೧೯ ಮೈಸೂರುಟಾಂಗ/೧೯೬೮ |
೭ ರಣಧೀರಕಂಠೀರವ/೧೯೬೦ ೨೦ ನಾನೇಭಾಗ್ಯವತಿ/೧೯೬೮ |
೮ ಕಣ್ತೆರೆದುನೋಡು/೧೯೬೧ ೨೧ ಚೌಕದದೀಪ/೧೯೬೯ |
೯ ಭೂದಾನ/೧೯೬೨ ೨೨ ವಿಚಿತ್ರಸಂಸಾರ/೧೯೬೯ |
೧೦ ತಾಯಿಕರುಳು/೧೯೬೨ ೨೩ ನಾಳೆಗಳನ್ನು ಮಾಡುವವರು/೧೯೭೭ |
೧೧ ಗಾಳಿಗೋಪುರ/೧೯೬೨ ೨೪ ಕುದುರೆಮೊಟ್ಟೆ/೧೯೭೭ |
೧೨ ಬಂಗಾರಿ/೧೯೬೩ ೨೫ ಹೇಮಾವತಿ/೧೯೭೭ |
೧೩ ಸಾಕುಮಗಳು/೧೯೬೩ ೨೬ ವಾಲ್‌ಪೋಸ್ಟರ್/೧೯೮೯ |

ಕುಮಾರಕವಿ ಬಿ.ಎನ್.ನಟರಾಜ್(೯೦೩೬೯೭೬೪೭೧)
ಬೆಂಗಳೂರು-೫೬೦೦೭೨