ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯವು ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಎರಡು ದಿನಗಳ ಅಂತರಾಷ್ಟ್ರೀಯ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ದೊರೆಯಿತು.
ಕೇಂದ್ರಿಯ ಆಂಗ್ಲ ಮತ್ತು ಪಾಶ್ಚಿಮಾತ್ಯ ಬಾಷೆಗಳ ವಿವಿಯ ಪ್ರಾಧ್ಯಾಪಕ ಡಾ.ವಿ.ಬಿ.ತಾರಕೇಶ್ವರ ಚಾಲನೆ ನೀಡಿದರು. ರಂಗಕರ್ಮಿ ಎಸ್.ಆರ್.ರಮೇಶ್, ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ, ಕುಲಸಚಿವ ಡಾ.ಟಿ.ಎಸ್.ದೇವರಾಜ, ಹಣಕಾಸು ಅಧಿಕಾರಿ ರೇಣುಕಾಂಬ ಇನ್ನಿತರರು ಉಪಸ್ಥಿತರಿದ್ದರು.