ಚಾಮರಾಜನಗರ: ತಾಲೂಕಿನ ಕುದೇರು ಗ್ರಾಮದಲ್ಲಿ ಬಾ ನಲ್ಲೆ ಮದುವೆಗೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು ಗ್ರಾಮದ ಭುಜಂಗೇಶ್ವರ ದೇವಾಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮುಂಭಾಗ ಚಿತ್ರ ನಿರ್ಮಾಪಕ ಎಂ ಯೋಗೇಶ್ ಅವರ ತಾಯಿ ಕೆಂಪ್ಪಮ್ಮ ಮಹದೇವಯ್ಯ ಚಾಲನೆ ನೀಡಿದರು
ಕರ್ನಾಟಕ ರಕ್ಷಣಾ ಸೇನಾ ಅಧ್ಯಕ್ಷ ಮಿಂಚುನಾಗೇಂದ್ರ ಮಾತನಾಡಿ ಬಾನಲ್ಲೆ ಮದುವೆಗೆ ಚಿತ್ರದ ನಿರ್ಮಾಪಕರು ನಮ್ಮ ಜಿಲ್ಲೆಯವರೇ ಆಗಿದು ಚಿತ್ರದ ಚಿತ್ರೀಕರಣದ ಕಲಾವಿದರಿಗೆ ಯಶಸ್ವಿಯಾಗಲೇಂದು ಶುಭ ಹಾರೈಸಿದರು.
ಚಿತ್ರದ ನಿರ್ಮಾಪಕ ನಿದೇಶಕ ಎಂ.ಯೋಗೇಶ್ ಮಾತನಾಡಿ ಚಿತ್ರದ ಚಿತ್ರೀಕರಣ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಸೇರಿದಂತೆ ವಿವಿಧಡೆ ಚಿತ್ತೀಕರಣ ನಡೆಯಲಿದೆ ಎಂದರು.
ಚಿತ್ರ ನಟ ಅರ್ಜುನ್, ನಟಿ ಸುಭಾ, ಪ್ರೊಡಕ್ಷನ್ ಅಸಿಸ್ಸೆಂಟ್ ಕುಮಾರ್ ಈಶ್ವರ್, ಛಾಯಾಗ್ರಾಹಕ ಪ್ರಸನ್ನ ಕುಮಾರ್, ಸಹಾಯಕ ಪ್ರದೀಪ್, ಬೀಳಿಗಿರಿ ಕರ್ನಾಟಕ ರಕ್ಷಣಾ ಸೇನಾ ಪ್ರಧಾನ ಕಾರ್ಯದರ್ಶಿ ವೃದ್ರ ನಗರ ಘಟಕ ಪ್ರದಾನ ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಚಿತ್ರೀಕರಣದ ತಂಡದ ಕಲಾವಿದರು ಸೇರಿದಂತೆ ಇತರರು ಇದ್ದರು.