ಚಾಮರಾಜನಗರ: ತಾಲೂಕಿನ ಚಿಕ್ಕಮೋಳೆ ಗ್ರಾಮದಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ೨೬ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು,
ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗೆ ಉತ್ತಮ ರಸ್ತೆ ಜತೆಗೆ ಚರಂಡಿಗಳು ಅಗತ್ಯವಾಗಿದ್ದು, ತಮ್ಮ ಕೇತ್ರವ್ಯಾಪ್ತಿಯಲ್ಲಿ ಜನತೆಯ ಆಶಯಕ್ಕೆ ಬದ್ದರಾಗಿ ಗ್ರಾಮಗಳಲ್ಲಿ ರಸ್ತೆ ಚರಂಡಿ, ಸಮುದಾಯ ಭವನ ನಿರ್ಮಾಣ, ಆಶ್ರಯಮನೆ ಗಂಗಾ ಕಲ್ಯಾಣ ಯೋಜನೆ ಗಳಿಗೆ ಒತ್ತು ನೀಡಲಾಗಿದೆ.
ಸರಕಾರದಿಂದ ದೊರೆಯುತ್ತಿರುವ ಅನುದಾನ ಹಾಗೂ ಸೌಲಭ್ಯಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡುತ್ತಿದ್ದೇನೆ, ಸಮುದಾಯದವರು ವಾಸಮಾಡುವ ಮೋಳೆಗಳ ಅಭಿವೃದ್ಧಿಗೂ ಗಮನಹರಿಸಲಾಗುತ್ತಿದೆ. ಕಾಮಗಾರಿ ನಿರ್ವಹಣೆ ಗುತ್ತಿಗೆದಾರರು, ನಿಗಧಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿಗೆ ಗಮನ ನೀಡಬೇಕು, ಗ್ರಾಮದ ಜನvಮುಂದೆ ನಿಂತು ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಗ್ರಾ.ಪಂ ಸದಸ್ಯ ದೊರೆಸ್ವಾಮಿ, ಮಹೇಶ್, ನಾಗರಾಜು ಚನ್ನಿಗಶೆಟ್ಟಿ, ಕೆಂಚಶೆಟ್ಟಿ, ಶಿವಣ್ಣ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ಮಹದೇವಸ್ವಾಮಿ ಸೇರಿದಂತೆ ಗ್ರಾಮಸ್ಥರು ಮುಖಂಡರು ಹಾಜರಿದ್ದರು.