ಮೈಸೂರು .ನಗರ ಹೃದಯ ಭಾಗದಲ್ಲಿರುವ ಸುಣ್ಣದಕೇರಿ ೫೦ನೇ ವಾರ್ಡ್‌ನಲ್ಲಿ ಇಂದು ಧಾರಕಾರ ಮಳೆಯಿಂದ ಇಂದು ಸುಮಾರು ೪೦ ಕ್ಕೂ ಹೆಚ್ಚು ಮನೆಗಳಿಗೆ ಡೈನೇಜ್, ನೀರು ನುಗ್ಗಿ ಮನೆಯಲ್ಲಿ ವಾಸ ಮಾಡುತ್ತಿರುವ ನಿವಾಸಿಗಳಿಗೆ ತೊಂದರೆ ಉಂಟಾಗಿದೆ. ಇದರಿಂದ್ದ ಮನೆಯಲ್ಲಿರುವ ವಾಸ ಮಾಡುತ್ತಿರುವ ನಿವಾಸಿಗಳು ಮೂಗು ಮುಚ್ಚಿಕೊಂಡು ಜೀವನ ಸಾಗಿಸುವ ಕಷ್ಟವಾಗಿದ್ದು.ಮನೆಯಲ್ಲಿ ಹೊಕ್ಕ ಡ್ರೈನೇಜ್ ನೀರು ಬುಟ್ಟಿಗಳ ಸಹಾಯದಿಂದ ಹೊರ ಹಾಕುವ ಪ್ರಯತ್ನ ಮಾಡಿದರು. ಅದು ಕೂಡ ವ್ಯರ್ಥವಾಗಿದೆ.

ಸರಿ ಸಮಯ ಸಂಜೆ ೫ ಗಂಟೆಗೆ ಪ್ರಾರಂಭವಾದ ಡ್ರೈನೇಜ್ ನೀರು ರಸ್ತೆಯಗಲಕ್ಕೂ ನೀರು ಚಿಮ್ಮತ್ತಿದ್ದು ಜನರು ರಸ್ತೆಯಲ್ಲು ಹಾಗೂ ಮನೆಗಳಿಗೆ ಹೋಗಲು ಜನರು ಹರಸಾಹಸ ಪಡಬೇಕಾಗಿದೆ.ಇಲ್ಲಿನ ಕಿರಿದಾದ ರಸ್ತೆಯಲ್ಲಿ ಸರಿಯಾದ ಡೃನೇಜ್ ಪೈಪ್ ಲೈನ್ ಸರಿಯಾಗಿ ಹಾಕದೆ ಈ ರೀತಿ ಗೊಂದಲಕ್ಕೆ ಸೃಷ್ಟಿಯಾಗಿದೆ. ಎಂದು ಆಮ್ ಆದ್ಮೀ ಪಾರ್ಟಿಯ ೫೦ ನೇ ವಾರ್ಡ್ ಹೇಮಂತ್ ಕುಮಾರ್,ಹಾಗೂ ಜಿಲ್ಲಾಧ್ಯಕ್ಷರಾದ ರಂಗಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಯಾವುದೆ ಪ್ರತಿಕ್ರಿಯೆ ನೀಡದೆ. ಬೇಜವಾಬ್ದಾರಿ ಮರೆತಿದ್ದಾರೆ.ಅದ್ದರಿಂದ ಸ್ಥಳೀಯರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಮತ್ತು ಅಲ್ಲಿನ ಸ್ಥಳೀಯರು,ಕೆಲವರು ಮೊದಲ ಮಹಡಿಯಲ್ಲರಿವ ಮನೆಗಳ ಆಶ್ರಯ ಪಡೆದರೆ, ಮತ್ತೆ ಕೆಲವರು ಮನೆಯನ್ನು ಬಿಟ್ಟು ಸ್ನೇಹಿತರ ಮನೆಗೆ ತೆರಳಿ ಆಶ್ರಯ ಪಡೆದಿದ್ದಾರೆ.ಸುಮಾರು ೪೦ ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಡ್ರೈನೇಜ್ ನೀರು ಕ್ಷಣ ಮಾತ್ರದಲ್ಲಿ ಮನೆಯೊಳಗೆ ಹರಿದು ಬಂದುಕೋಣೆಗಳಿಗೆ ನುಗ್ಗಿದೆ ಆಗಷ್ಟೆ ಕೆಲವರು ಮನೆಗೆ ತಂದಿದ್ದು ಹಾಸಿಗೆ ಬಟ್ಟೆಗಳು ಹಾಳಗಿವೆ.ಇದರಿಂದ್ದ ನಿವಾಸಿಗಳಿ ನಗರ ಪಾಲಿಕೆ ವಿರುದ್ದ ಹಿಡಿ ಶಾಪ ಹಾಕುತ್ತಿದ್ದಾರೆ.