ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಎಸ್.ಸಿ.ಪಿ ಅನುದಾನದಲ್ಲಿ ಅಂಬೇಡ್ಕರ್ ಜ್ಞಾನಲೋಕ ಬಿ.ಎಂ.ಶ್ರೀನಗರದಲ್ಲಿ ರಸ್ತೆ ಅಭಿವೃದ್ದಿ & ಚರಂಡಿ ನಿರ್ಮಾಣ ಕಾಮಗಾರಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಮಾನ್ಯಶಾಸಕರಾದ ಎಲ್.ನಾಗೇಂದ್ರರವರು, ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ವಾರ್ಡ ಸಂ-7 ರ ಸದಸ್ಯರಾದ ರಮೇಶ್ ರವರ ಸಮ್ಮುಖದಲ್ಲಿ ಗುದ್ದಲಿಪೂಜೆಯನ್ನು ನೆರವೇರಿಸಿದರು.

ಈ ಸಮದಯದಲ್ಲಿ ಹಾಜರಿದ್ದ ಅಂಬೇಡ್ಕರ್ ಜ್ಞಾನ ಲೋಕದ ನರ್ಮ ಮನೆಗಳ ಸಂಕೀರ್ಣದ ನಿವಾಸಿಗಳಿಗೆ ತಿಳಿಸುತ್ತಾ ಈ ನರ್ಮ ಮನೆಗಳ ಸಂಕೀರ್ಣದಲ್ಲಿರುವ ಸಮಸ್ಯೆಗಳಾದ ತಾರಸಿ ಸೋರುವಿಕೆ, ಒಳಚರಂಡಿ ದುರಸ್ತಿ, ವಿದ್ಯುತ್ ಸಮಸ್ಯೆ, ರಸ್ತೆ ಅಭಿವೃದ್ದಿ, ತೆರೆದ ಚರಂಡಿ ಕಾಮಗಾರಿಗಳನ್ನು ಒಳಗೊಂಡಂತೆ ಸಂಪೂರ್ಣವಾಗಿ ಎಲ್ಲಾ ಅಭಿವೃದ್ದಿಗಳ ನಿರ್ವಹಣೆಗೆ ಅನುದಾನ ನೀಡಿದ್ದು ಶೀಘ್ರದಲ್ಲಿಯೇ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸುಸಜ್ಜಿತ ಬಡಾವಣೆ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು,

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಚಿಕ್ಕವೆಂಕಟು, ಮಾಜಿ ಸದಸ್ಯರಾದ ಶ್ರೀ ದೇವರಾಜು, ಚಾಮರಾಜ ಭಾ.ಜ.ಪ ಉಪಾಧ್ಯಕ್ಷರಾದ ಕುಮಾರಗೌಡ, ವಾರ್ಡ ಅಧ್ಯಕ್ಷರಾದ ನರಸಿಂಹಮೂರ್ತಿ, ಕಾರ್ಯದರ್ಶಿ ರವೀಂದ್ರ, ಬಿ.ಎಲ್.ಎ-1 ದಿನೇಶ್ ಗೌಡ, ಆರಾಧನಾ ಸಮಿತಿ ಸದಸ್ಯ ಪುಟ್ಟಬುದ್ದಿ, ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಮಹೇಶ್, ಎಸ್. ಸಿ. ಮೋರ್ಚಾದ ಧರ್ಮರಾಜು,  ಮುಖಂಡರುಗಳಾದ, ಮಧು, ರವಿ. ದಾಸಿ, ವಿನೋದ, ನರಸಿಂಹ, ಅರುಣ್ ಕುಮಾರ್, ಗುಂಡ, ಮಹೇಶ್ ಕುದೇರು, ಶ್ರೀಮತಿ ರುಕ್ಮಿಣಿ, ಶೋಭ, ಸಾವಿತ್ರಿ, ಲೋಕೋಪಯೋಗಿ ಇಂಜಿನಿಯರ್ ಹೊನ್ನೇಗೌಡ, ಗುತ್ತಿಗೆದಾರರಾದ ಭಾಸ್ಕರ್, ಮುಂತಾದವರು ಹಾಜರಿದ್ದರು.