ವೀರ ಮದಕರಿ ನಾಯಕ ಸಂಘದ ಅಭಿಮಾನಿ ಬಳಗ ಸುಣ್ಣದಕೇರಿ ನಾರಾಯಣ ಶಾಸ್ತ್ರಿ ರಸ್ತೆ ನಕ್ಷತ್ರ ಕಾಂಪ್ಲೆಕ್ಸ್
ನಲ್ಲಿ ಇಂದು ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ 11 ನೇ ವರ್ಷದ ಪುಣ್ಯಸ್ಮರಣೆ ಡಾ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹರೀಶ್ ಸಾಹಸಸಿಂಹ ವಿಷ್ಣುವರ್ಧನ್ ರವರು ಮೂಲತಃ ಮೈಸೂರಿನವರಾದರೂ ಕೂಡ ವಿಶ್ವದೆಲ್ಲಡೆ ಜನಪ್ರಿಯರಾಗಿದ್ದಾರೆ, ಅವರ ಪ್ರತಿಯೊಂದು ಚಿತ್ರಗಳು ಸಹ ಕೌಟುಂಬಿಕ ಪ್ರಧಾನವಾಗಿತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಜೊತೆಯಲ್ಲೆ ಚಿತ್ರರಂಗದಲ್ಲಿ ಹೊಸ ಆಯಾಮ ಸೃಷ್ಟಿಸುವಲ್ಲಿ ಕಲಾವಿದರಿಗೆ ಮಾದರಿಯಾಗಿತ್ತು,

ಕನ್ನಡ ನೆಲ ಜಲ ಭಾಷೆಯ ವಿಚಾರಕ್ಕೆ ಧಕ್ಕೆ ಬಂದಾಗ ಧ್ವನಿ ಎತ್ತುತ್ತಿದ್ದ ಮಹಾನ್ ವ್ಯಕ್ತಿ ಡಾ. ವಿಷ್ಣುವರ್ಧನ ರವರು, ಚಿತ್ರನಗರಿ ಮೈಸೂರಿನಲ್ಲಿ ಸ್ಥಾಪನೆಯ ಪರಿಕಲ್ಪನೆ ನೀಡಿದ್ದೇ ವಿಷ್ಣುವರ್ಧನ ರವರು ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ಗರಡಿಯ ಶಿಷ್ಯನಾಗಿ ಗುರುತಿಸೊಕೊಂಡ ವಿಷ್ಣುವರ್ಧನ ರವರು ಎಷ್ಟೇ ಉನ್ನತಸ್ಥಾನಕ್ಕೇರಿದರೂ ಚಾಮಯ್ಯ ಮೇಷ್ಟ್ರ ವಿಷಯವನ್ನು ಮನವರಿಸಿ ಸಾರ್ವಜನಿಕರಿಗೆ ಗುರು-ಗುರಿಯ ಸಂದೇಶವನ್ನು ನೀಡುತ್ತಿದ್ದ ಮಹಾನ್ ವ್ಯಕ್ತಿ, ಡಾ.ವಿಷ್ಣುವರ್ಧನ್ ರವರ ಸರಳಜೀವನ ಪ್ರತಿಯೊಬ್ಬರಿಗೂ ಮಾದರಿ, ಎಲ್ಲಾ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರತಿಯೊಂದು ಕ್ಷೇತ್ರದ ಜನವಿಶ್ವಾಸ ಗಳಿಸಿದ್ದಾರೆ, ಅವರು ನಟಿಸಿರುವ ಚಿತ್ರಗಳಲ್ಲಿ ಕೆಲ ಜಿಲ್ಲೆಯ ಸ್ಥಳಗಳು ಪ್ರವಾಸೋದ್ಯಮ ತಾಣವಾಗಿದೆ ಚಾಮುಂಡಿ ಬೆಟ್ಟದಿಂದ ಚಿತ್ರದುರ್ಗದ ಕೋಟೆಯವರೆಗೂ ಹೊಸಮುಖ ಕಲಾವಿದರಿಗೆ ಸ್ಪೂರ್ತಿ ಯಾಗಿದ್ದರು ಎಂದು ಮಾತನಾಡಿದರು, ಚಿತ್ರದಲ್ಲಿ ನಾಗರಾಜು ಚಂದ್ರು ನಂದೀಶ ಯಶ್ವಂತ್ ಇನ್ನಿತರರು ಹಾಜರಿದ್ದರು.

By admin