
ಅಂದಿನ ಮೈಸೂರು ಸಂಸ್ಥಾನದ[ಬ್ರಿಟಿಷ್ ಮದ್ರಾಸ್ ಪ್ರಾಂತ್ಯದ ಈರೋಡ್ ಜಿಲ್ಲೆ ತಾಳವಾಡಿ ತಾಲೂಕ್]ದೊಡ್ಡಗಾಜನೂರಿನಲ್ಲಿ ಸಿಂಗಾನಲ್ಲೂರುಪುಟ್ಟಸ್ವಾಮಯ್ಯ-ಲಕ್ಷ್ಮಮ್ಮ ದಂಪತಿಗೆ ದಿ.೨೪.೪.೧೯೨೯ರಂದು ಜನಿಸಿದ ಮುತ್ತುರಾಜ, ೩ನೇ ತರಗತಿ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇತ್ತು, ಖ್ಯಾತ ರಂಗಭೂಮಿ ನಟರಾಗಿದ್ದ ತಂದೆಯೊಡನೆ ಗುಬ್ಬಿವೀರಣ್ಣ ಮತ್ತು ಇನ್ನಿತರರ ನಾಟಕ ಕಂಪನಿ ಸೇರಿ, ಬಾಲಕಲಾವಿದನಾಗಿ ಹಲವಾರು ನಾಟಕದಲ್ಲಿ ನಟಿಸಿದರು! ಸಾವಕಾಶವಾಗಿ ಅಭಿನಯದ ಮೇರು ಪರ್ವತವಾಗಿ ಬೆಳೆದು 'ಅಭಿಮಾನಿ ದೇವರು'ಗಳಿಂದಲೆ 'ದೇವಾಲಯ' ಕಟ್ಟಿಸಿಕೊಂಡು ಪೂಜನೀಯರಾದರು. ವರನಟ ಕೇವಲ ಒಂದು ವ್ಯಕ್ತಿಯಲ್ಲ ಅಗಾಧಶಕ್ತಿ. ಇವರ ಬಗ್ಗೆ ಇಬ್ಬರು ಸಂಶೋಧಕರು ಪ್ರೌಢಪ್ರಬಂಧ ಮಂಡಿಸಿ ಪಿ.ಎಚ್‌ಡಿ. ಪದವಿ ಗಳಿಸಿದ್ದಾರೆ! ಇನ್ನೂ ನಾಲ್ಕೈದು ಪಿ.ಹೆಚ್‌ಡಿ. ಗಳಿಸುವಷ್ಟು ಮಾಹಿತಿಯು ಲೇಖಕನ ಬಳಿ ಇದೆ. ಡಜ಼ನ್‌ಗಟ್ಟಲೆ ಪ್ರಪಂಚದಾಖಲೆ ಮಾಡಿರುವ ಏಕೈಕ ಸಿನಿಕಲಾವಿದ ಮ್ಯಾಟ್ನಿಐಡಲ್ ರಾಜ್ ಬಗ್ಗೆ ಅದೆಷ್ಟು ಬರೆದರೂ ಅಪೂರ್ಣ ಎನಿಸುವುದು ಸಹಜ? ಅನಿವಾರ್ಯತೆಯಿಂದ ಇಲ್ಲಿ ಸಂಕ್ಷಿಪ್ತವಾಗಿ ಬರೆಯಲಾಗಿದೆ!
ಮುತ್ತುರಾಜ್ 'ಭಕ್ತಪ್ರಹ್ಲಾದ'[೧೯೪೨] ಚಿತ್ರದ ಮೂಲಕ ಪಾದಾರ್ಪಣೆ ಮಾಡಿ ಬಾಲನಟನಾಗಿ ಒಟ್ಟು ೪ ಚಿತ್ರಗಳಲ್ಲಿ ನಟಿಸಿದ್ದರು! 'ರಾಜ್'ಕಪೂರ್-ದಿಲೀಪ್'ಕುಮಾರ್'ಹೆಸರುಗಳ ಪ್ರೇರಣೆಯಿಂದ ಗುಬ್ಬಿವೀರಣ್ಣ ಮತ್ತು ಹೆಚ್‌ಎಲ್‌ಎನ್.ಸಿಂಹ 'ರಾಜ್‌ಕುಮಾರ್'ಎಂದು 'ಬೇಡರಕಣ್ಣಪ್ಪ'[೧೯೫೪]ಚಿತ್ರದಲ್ಲಿ ಪುನರ್‌ನಾಮಕರಣ ಮಾಡಿದರು. ಹೀರೊಆಗಿ ನಟಿಸಿದ ಚೊಚ್ಚಲಚಿತ್ರವೆ ರಾಷ್ಟ್ರಪ್ರಶಸ್ತಿ ಪಡೆದು ಗೋಲ್ಡನ್ ಜ್ಯುಬ್ಲಿ ಆಚರಿಸಿತು! ಕನ್ನಡಕಂಠೀರವ ನಟಿಸಿದ ಏಕೈಕ ಪರಭಾಷೆ ಫ಼ಿಲಂ'ಕಾಳಹಸ್ತಿ ಮಹಾತ್ಯಮು'[ತೆ]. ಮೊದಲ ೧೦ವರ್ಷ ೫೦ಚಿತ್ರದಲ್ಲಿ [ಚಂದವಳ್ಳಿಯತೋಟ-೧೯೬೪]ನಟಿಸಿದ ರಾಜಣ್ಣ; ನಂತರ ನಾಲ್ಕೆ ವರ್ಷದಲ್ಲಿ ಮತ್ತೆ ೫೦ ಚಿತ್ರದಲ್ಲಿ ನಟಿಸಿ[೧೦೦ನೇ ಚಿತ್ರ ಭಾಗ್ಯದಬಾಗಿಲು-೧೯೬೮] ಚಲನಚಿತ್ರ ಇತಿಹಾಸದಲ್ಲಿ ನೂತನ ದಾಖಲೆ ನಿರ್ಮಿಸಿದರು.
'ಸತ್ಯಹರಿಶ್ಚಂದ್ರ[೧೯೬೫]' ಚಿತ್ರವು ಕನ್ನಡ, ತೆಲುಗು, ತಮಿಳ್ ಭಾಷೆ ಗಳಲ್ಲಿ ೩ ಬೇರೆಬೇರೆ ಹೀರೊಗಳು[ರಾಜ್-ಎನ್‌ಟಿಆರ್-ಶಿವಾಜಿಗಣೇಶ್]ನಟಿಸಿ ಏಕಕಾಲಕ್ಕೆ ಬಿಡುಗಡೆಯಾಯ್ತು ಆಪೈಕಿ ಕನ್ನಡದ ರಾಜ್ ಅಭಿನಯವನ್ನು ಅಂದಿನ ಸುಪ್ರಸಿದ್ಧ ಸಿನಿಮ ಸಾಪ್ತಾಹಿಕ SCREEN ಪತ್ರಿಕೆ ಮಾತ್ರವಲ್ಲದೆ ಎಲ್ಲ ಪತ್ರಿಕೆಗಳೂ ಕೊಂಡಾಡಿದ್ದವು! ಅಣ್ಣಾವ್ರು ೩ ಭಾಷೆಗಳನ್ನು ಚೆನ್ನಾಗಿ ಬಲ್ಲರು! ಕಾಲಕ್ರಮೇಣ ಸ್ವಸಾಮರ್ಥ್ಯದಿಂದ ಇಂಗ್ಲಿಷ್-ಹಿಂದಿ ಕಲಿತರು. ಹಿನ್ನೆಲೆಗಾಯನ, ಯೋಗಾಭ್ಯಾಸವನ್ನೂ ಚೆನ್ನಾಗಿ ಕಲಿತರು. ಗಾನಗಂಧರ್ವ ಮೊಟ್ಟಮೊದಲು ಹಾಡಿದ್ದು ಓಹಿಲೇಶ್ವರ, ಮಹಿಷಾಸುರಮರ್ಧಿನಿ ಚಿತ್ರಗಳಲ್ಲಿ! ವಿಷ್ಣುವರ್ಧನ್, ಅಂಬರೀಷ್ ಅನಂತನಾಗ್ ಶಂಕರನಾಗ್ ಎಸ್.ಪಿ.ಬಾಲಸುಬ್ರಮಣ್ಯಂ ಕುಮಾರ್‌ಬಂಗಾರಪ್ಪ ರಾಮ್‌ಕುಮಾರ್ ಶಿವು-ರಾಘು-ಅಪ್ಪು ಮುಂತಾದವರ ಚಿತ್ರಗಳಿಗೂ ಹಿನ್ನೆಲೆ ಗಾಯಕರಾದರು! ನೂರಾರು ರಸಮಂಜರಿ[ಮ್ಯುಸಿಕಲ್‌ನೈಟ್] ಕಾರ್ಯಕ್ರಮಗಳ ಜತೆಗೆ ಸಿಡಿ-ಕ್ಯಾಸೆಟ್‌ಗಳಲ್ಲಿ ಸಾವಿರಾರು ಭಕ್ತಿಗೀತೆ ಭಾವಗೀತೆ ಜಾನಪದಗೀತೆ ಹಾಡುವ ಮೂಲಕ ವಿಶ್ವ ದಾಖಲೆ ಮಾಡಿ, ಭಾರತ ಚಿತ್ರರಂಗದ ನಾಯಕನಟ-ಕಂ-ಹಿನ್ನೆಲೆಗಾಯಕರಲ್ಲಿ ವಿಶಿಷ್ಟಸ್ಥಾನ ಪಡೆದರು!
ನಟಸಾರ್ವಭೌಮ ಸಾಕ್ಷ್ಯಚಿತ್ರವು ಅಖಿಲ ಭಾರತ ದಾಖಲೆ ಮಾಡಿದರೆ, ಬಂಗಾರದಮನುಷ್ಯ ಚಿತ್ರವು ಪ್ರಪಂಚ ದಾಖಲೆ ಮಾಡಿತು! ರಸಿಕರರಾಜ ಒಟ್ಟು ೫೨ ಹೀರೊಯಿನ್ ಜತೆ ನಟಿಸಿದ್ದಾರೆ! ಅವರ ಪೈಕಿ [೧]ಜಯಂತಿ [೨]ಲೀಲಾವತಿ [೩]ಭಾರತಿ ಜತೆಯಲ್ಲಿ ಅತಿಹೆಚ್ಚು ಅಭಿನಯಿಸಿರುವುದು ಸಹ ಒಂದು ನೂತನ ದಾಖಲೆ! ಚಂದನವನದ ಇತಿಹಾಸದಲ್ಲಿ 'ರಾಜ್' ಎಂದು ಸಂಬೋಧಿಸುತ್ತಿದ್ದ ಏಕೈಕ ನಟಿ ಜಯಂತಿ! ವರನಟನಿಗೆ ವಧುನಟಿಯಾಗಿದ್ದವರು ಲೀಲಾವತಿ? ರಾಜ್‌ಕುಮಾರ್-ಭಾರತಿ ಜೋಡಿಯಂತೂ ನಂಬರ್-೧ ಎನಿಸಿತ್ತು!
ಅಮೆರಿಕದ ಕೆಂಟಕಿಕರ್ನಲ್ [ಎಲ್ಲಾ ತರಹದ ಪಾತ್ರ ಮಾಡುವ ಸಾಮರ್ಥ್ಯವಿರುವ ಕಲಾವಿದನನ್ನು ಪತ್ತೆಹಚ್ಚಲು ಸಂಶೋಧನೆ ನಡೆಸಿದಾಗ ಆಯ್ಕೆಯಾದ ಪ್ರಪಂಚದ ಏಕೈಕನಟ!] ಅಂತರ್ರಾಷ್ಟ್ರ, ರಾಷ್ಟ್ರ, ಫ಼ಿಲಂಫ಼ೇರ್, ರಾಜ್ಯ, ಪ್ರಶಸ್ತಿಗಳನ್ನು ಹಲವುಸಲ ಪಡೆದಿದ್ದ ದಾದಾಸಾಹೇಬ್‌ಫ಼ಾಲ್ಕೆ ಪುರಸ್ಕೃತ ಪದ್ಮಭೂಷಣನಿಗೆ 'ಅಖಿಲ ಭಾರತ ಶ್ರೇಷ್ಠ ನಟ' ಪ್ರಶಸ್ತಿ ಒಮ್ಮೆಯೂ ದೊರಕಲಿಲ್ಲ [ಆಯುಷ್ಮಾನ್‌ಖುರಾನ-ಧನುಶ್-ವಾಸುದೇವರಾವ್-ಚಾರುಹಾಸನ್-ಸಂಚಾರಿವಿಜಯ್ ಅಂಥವರಿಗೆ ದೊರಕಿದೆ?] ಎಂಬುದು ಜಗತ್ತಿನ ೮ನೇ ಅದ್ಭುತ! ಇಂಥ ದುರಂತ ಚಂದನವನಕ್ಕೆ ಮಾತ್ರವಲ್ಲ ಇಡೀ ಕನ್ನಡ ಕುಲಕೋಟಿಗೆ ಸಹಿಸಲಾರದ ನೋವು-ಸಂಕಟ ತಂದಿದೆ, ಇವತ್ತಿಗೂ ಇದೆ! ಗೋಕಾಕ್ ಚಳುವಳಿ ಸಂದರ್ಭದಲ್ಲಿ ಕನ್ನಡ ನೆಲದಲ್ಲಿ ಕನ್ನಡಕ್ಕೇ ಅಗ್ರಸ್ಥಾನ ಪಡೆಯಲು ಕನ್ನಡಿಗರೇ ಇಷ್ಟೊಂದು ಹೋರಾಡಬೇಕಲ್ಲ ಎಂದು ಕರ್ನಾಟಕರತ್ನ ಬಿಕ್ಕಿಬಿಕ್ಕಿ ಅಳುತ್ತ ಗಳಗಳನೆ ಕಣ್ಣೀರು ಸುರಿಸಿದರು!
ಒಂದು ಕ್ಯಾಲೆಂಡರ್ ವರ್ಷದಲ್ಲಿ ಎರಡು ಬಾರಿ ಅತ್ಯಂತ ಹೆಚ್ಚು ಚಿತ್ರಗಳಲ್ಲಿ:- (೧)೧೯೬೩ರಲ್ಲಿ ತೆರೆಕಂಡ ಒಟ್ಟು ೨೧ ಕನ್ನಡ ಚಿತ್ರಗಳ ಪೈಕಿ ಭಕ್ತಿಕಲಾರತ್ನ ರಾಜ್‌ಕುಮಾರ್ ನಟಿಸಿದ್ದು ೧೫ ಚಿತ್ರಗಳಲ್ಲಿ ಮತ್ತು (೨)೧೯೬೮ರಲ್ಲಿ ಬಿಡುಗಡೆಯಾದ ಒಟ್ಟು ೩೧ ಕನ್ನಡ ಸಿನಿಮಾಗಳ ಪೈಕಿ ಕನ್ನಡಕಣ್ಮಣಿ ರಾಜ್ ನಟಿಸಿದ್ದು ೧೫ ಚಿತ್ರಗಳಲ್ಲಿ! ಮತ್ತು ೧ ವರ್ಷದಲ್ಲಿ ಎರಡು ಬಾರಿ ಅತಿ ಕಡಿಮೆ ಚಿತ್ರಗಳಲ್ಲಿ:- (೧)೧೯೭೫ರಲ್ಲಿ ತೆರೆಕಂಡ ಒಟ್ಟು ೩೧ ಕನ್ನಡ ಫ಼ಿಲಮ್ಸ್ ಪೈಕಿ ರಾಜ್‌ಕುಮಾರ್ ಅಭಿನಯಿಸಿದ್ದು ಕೇವಲ ೨ ಫ಼ಿಲಮ್ಸ್ ಮಾತ್ರ! ನಂತರ (೨)೧೯೭೯ರಲ್ಲಿ ರಿಲೀಸ್ ಆದ ಒಟ್ಟು ೪೩ ಚಲನಚಿತ್ರಗಳ ಪೈಕಿ ೨ ಸಿನಿಮಾದಲ್ಲಿ ಮಾತ್ರ ರಾಜಕುಮಾರ್ ನಟಿಸಿದ್ದರು! ಕಾಕತಾಳೀಯವೆಂಬಂತೆ ಗರಿಷ್ಠ ಸಂಖ್ಯೆ-ಕನಿಷ್ಠ ಸಂಖ್ಯೆ ಕೂಡ ಸಮ-ಸಮವಾಗೇ ಇದೆ! ಈ ಎರಡೂ ರೀತಿಯಲ್ಲಿ ದಾಖಲೆ ಮಾಡಿದ ಪ್ರಪಂಚದ ಏಕೈಕ ಸಿನಿಮಾನಟ! ತಾವು ನಟಿಸಿದ ಒಟ್ಟು ೨೧೩ಚಿತ್ರಗಳ ಪೈಕಿ ಒಂದು ಚಿತ್ರಕ್ಕೂ 'ವಯಸ್ಕರಿಗೆಮಾತ್ರ'Adults only]‘ಸರ್ಟಿಫ಼ಿಕೇಟ್ ಇಲ್ಲದಿರುವುದು ವಿಶ್ವದಾಖಲೆ! ೨೦೦ಚಿತ್ರಗಳು ಮುಗಿಯುತ್ತಿದ್ದಂತೆ ವೈರಾಗ್ಯದೆಡೆಗೆ ಒಲವು ತೋರಿದ ರಾಜ್‌ಕುಮಾರ್ ಹುಬ್ಬಳ್ಳಿ ಮಠದ ಶ್ರೀಶ್ರೀಶ್ರೀ ಸ್ವಾಮೀಜಿಯವರಿಂದ ಇಷ್ಠಲಿಂಗಧಾರಣೆ ಕೈಂಕರ್ಯ ಕೈಗೊಂಡ ಕನ್ನಡದ ಏಕೈಕ ನಾಯಕನಟ!
ಡಾಕ್ಟರ್ ರಾಜ್‌ಕುಮಾರ್ ನಟಿಸಿದ ಒಟ್ಟು[೨೦೭+೪+೧+೧=]೨೧೩ ಸಿನಿಮಾಗಳ ವಿವರ ಮತ್ತು ಸಾಟಿಯಿಲ್ಲದ, ಹುಟ್ಟುಕಲಾವಿದನ, ಸಕಲಕಲಾವಲ್ಲಭನ, ಕಲಾಭೂಷಣ ಬಗ್ಗೆ ಇನ್ನಷ್ಟು ರೋಚಕ ಮಾಹಿತಿಯು ಚಂದನವನ ಚರಿತ್ರೆಯ ಮುಂದಿನವಾರದ ಭಾಗ-೨, ೩, ೪, ೫ರಲ್ಲಿ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ..!

ಕುಮಾರಕವಿ ನಟರಾಜ್[೯೦೩೬೯೭೬೪೭೧]
ಬೆಂಗಳೂರು-೫೬೦೦೭೨