ಗುಂಡ್ಲುಪೇಟೆ: ಪಟ್ಟಣದ ಸಾಕೇತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದೂರದರ್ಶನದ ವಿಶ್ರಾಂತ ನಿರ್ದೇಶಕರಾದ ನಾಡೋಜ ಪ್ರಶಸ್ತಿ ಪುರಸ್ಕøತ ಡಾ.ಮಹೇಶ್ ಜೋಶಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ಪರಿಷತ್ ಚುನಾವಣೆಯ ಅಧ್ಯಕ್ಷ ಅಭ್ಯರ್ಥಿಯಾಗುವ ಇಚ್ಛೆ ಹೊಂದಿದ್ದು, ಎಲ್ಲಾ ತಾಲೂಕುಗಳನ್ನು ಸಂದರ್ಶಿಸಲಾಗಿದೆ. ಪರಿಷತ್‍ನು ಹಳ್ಳಿಗಳಿಗೂ ವಿಸ್ತರಿಸುವ ಆಕಾಂಕ್ಷೆ ಹೊಂದಿದ್ದು ಕನ್ನಡಕ್ಕೆ ಸೇವೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಎನ್. ಕುಮಾರ್, ಆರ್.ಕೆ. ಮಧು ಸೇರಿದಂತೆ ಸಾಹಿತ್ಯ ಪರಿಷತ್ ಸದಸ್ಯರು ಭಾಗವಹಿಸಿದ್ದರು.
ವರದಿ: ಬಸವರಾಜು ಎಸ್ ಹಂಗಳ