ಸರಗೂರು: ತಾಲೂಕಿನಾದ್ಯಂತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೧ನೇ ಜಯಂತಿಯನ್ನು ಸರಕಾರಿ, ಸರಕಾರೇತರ ಕಚೇರಿಗಳು, ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ ಸೇರಿದಂತೆ ಸಂಘ-ಸಂಸ್ಥೆಗಳು, ಗ್ರಾಮಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಆದರ್ಶ ಮೈಗೂಢಿಸಿಕೊಳ್ಳಲು ಮನವಿ: ತಾಲೂಕಿನ ಹಳೆಯೂರು ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ೧೩೧ನೇ ಜಯಂತಿ ಕಾರ್ಯಕ್ರಮವನ್ನು ಗ್ರಾಮಸ್ಥರು ವಿಶಿಷ್ಟವಾಗಿ ವಿಜೃಂಭಣೆಯಿಂದ ಆಚರಿಸಿದರು. ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಎಲ್.ರಾಜಣ್ಣ ಮಾತನಾಡಿ, ದಿನ ದಲಿತರ ಬಂಧು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಎಲ್ಲರೂ ಮೈಗೂಢಿಸಿಕೊಳ್ಳಬೇಕು. ವಿದ್ಯಾವಂತರಾಗಿ, ಹೆಚ್ಚು ಪುಸ್ತಕಗಳನ್ನು ಓದಬೇಕು. ಆ ಮೂಲಕ ಎಲ್ಲರೂ ಸಂಘಟನೆ-ಹೋರಾಟ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಂಚೀಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಜಯರಾಜು, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವಣ್ಣ, ಗ್ರಾಮ ವಿಕಾಸ ಫೌಂಡೇಶನ್‌ನ ಮಲ್ಲೇಶ್, ಚಿನ್ನಯ್ಯ ಹಳೆಯೂರು, ಗ್ರಾಪಂ ಸದಸ್ಯರಾದ ಶಿವಮ್ಮನಾಗಣ್ಣ, ಸತೀಶ್, ಪುಟ್ಟಣ್ಣ, ನಾಗರಾಜು, ಯಜಮಾನರಾದ ಶಿವಮಲ್ಲು, ಶಿವು, ಮೂರ್ತಿ, ಚಿನ್ನಯ್ಯ ಜಂಗಲ್‌ಲಾಡ್ಜ್, ಮುಖಂಡರಾದ ದೇವರಾಜಯ್ಯ, ತಿಮ್ಮಯ್ಯ, ಒಣಕಾರಯ್ಯ, ಪುಟ್ಟರಾಜಯ್ಯ, ಪುಟ್ಟರಂಗಯ್ಯ, ಕೆಂಪರಾಜಯ್ಯ, ಎಚ್.ಎಸ್.ಮಹೇಶ್ ಸೇರಿದಂತೆ
ಜಯಂತಿ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿದ್ದರು. ಅಂಬೇಡ್ಕರ್ ಅವರು ಭಾವಚಿತ್ರವನ್ನು ತೆರೆದ ವಾಹನದಲ್ಲಿ ಇರಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಸತ್ತಿಗೆ, ನಂದಿ ಕಂಬ ಸೇರಿದಂತೆ ವಾದ್ಯಗೋಷ್ಠಿಗಳು ಮೊಳಗಿದವು. ನಂತರ ಜಾನಪದ ಕಲಾವಿದ ಮರಿಸ್ವಾಮಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತಾಲೂಕು ಆಡಳಿತ: ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಮತ್ತು ಪಟ್ಟಣ ಪಂಚಾಯಿತಿಯ ಸಹಯೋಗದೊಂದಿಗೆ ನಡೆದ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೧ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಅಂಬೇಡ್ಕರ್ ರವರು ಶೋಷಿತ ಸಮುದಾಯಗಳ ಏಳಿಗೆಗಾಗಿ ನಿರಂತವಾಗಿ ಶ್ರಮಿಸಿ ಚಳುವಳಿಗಳನ್ನು ಮಾಡಿದವರು. ಜಾಗೃತಿ ಮತ್ತು ಜ್ಞಾನದ ದೀಪವಾಗಿ ಈ ದೇಶದ ಅಭಿವೃದ್ಧಿಗೆ ದಾರಿಯಾದವರು. ಅಂತಹ ಮಹನೀಯರು ಕೇವಲ ಒಂದು ವರ್ಗಕ್ಕೆ ಸೀಮಿತವಲ್ಲ ಅವರು ದೇಶದ ಆಸ್ತಿ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕವೀರನಾಯಕ ಮಾತನಾಡಿದರು. ರಾಜ್ಯಶಾಸ್ತ್ರದ ಉಪನ್ಯಾಸಕ ಮಹದೇವಸ್ವಾಮಿ ಅಂಬೇಡ್ಕರ್ ರವರ ಜೀವನ ಚರಿತ್ರೆ, ಎದುರಿಸಿದ ಸಂಕಷ್ಟಗಳು, ದಲಿತರ ಅಭಿವೃದ್ಧಿಗಾಗಿ ಪಟ್ಟ ಶ್ರಮ ಮತ್ತು ಹೋರಾಟಗಳು ಹಾಗೂ ಭಾರತಕ್ಕೆ ಅವರು ನೀಡಿದ ಕೊಡುಗೆಗಳ ಕುರಿತಂತೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸದಸ್ಯರಾದ ಚಲುವಕೃಷ್ಣ, ಶ್ರೀನಿವಾಸ್, ಎಸ್.ಎಲ್.ರಾಜಣ್ಣ, ಚೈತ್ರಸ್ವಾಮಿ, ಸಣ್ಣತಾಯಮ್ಮ, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಿವಣ್ಣ, ಮುಖ್ಯಾಧಿಕಾರಿ ಬಿ.ಜಿ.ಸತೀಶ್, ಮುಖಂಡರಾದ ಶಂಭುಲಿಂಗನಾಯಕ, ಇಟ್ನಾ ರಾಜಣ್ಣ, ಗ್ರಾಮೀಣಾ ಮಹೇಶ್, ಕೊತ್ತೇಗಾಲ ತಿಮ್ಮಯ್ಯ, ಕೂರ್ಣೇಗಾಲ ಬೆಟ್ಟಸ್ವಾಮಿ, ಭೋಗಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಗೋಪಾಲಸ್ವಾಮಿ, ವೃತ್ತ ನಿರೀಕ್ಷಕ ಆನಂದ್, ಪಿಎಸ್‌ಐ ಶ್ರವಣ್‌ದಾಸ್ ರೆಡ್ಡಿ, ಎಪಿಎಂಸಿ ಕಾರ್ಯದರ್ಶಿ ವಸಂತ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಮಸ್ವಾಮಿ ಮುಂತಾದವರು ಹಾಜರಿದ್ದರು.