ಮೈಸೂರು: ವಿಜಯಪುರ ತಾಲ್ಲೂಕಿನ ಆಹೇರಿ ಗ್ರಾಮದ ‘ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕøತಿ ವೇದಿಕೆ’ಯ 16ನೇ ವಾರ್ಷಿಕೋತ್ಸವ ಅಂಗವಾಗಿ, ಸಾಮಾಜಿಕ ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ, ರಾಜ್ಯಮಟ್ಟದ ವಚನ ವಿಜಯೋತ್ಸವ ಹಾಗೂ 2020-21ನೇ ಸಾಲಿನ ಪ್ರತಿಷ್ಠಿತ ‘ಬಸವರತ್ನ’ ರಾಷ್ಟ್ರ ಪ್ರಶಸ್ತಿ, ‘ಬಸವಜ್ಯೋತಿ’ ರಾಜ್ಯ ಪ್ರಶಸ್ತಿಯನ್ನು ದಿ: 15.ರಂದು, ವಿಜಯಪುರ ಕೃಷಿ ಮಹಾವಿದ್ಯಾಲಯ ಸಭಾಂಗಣ(ಹಿಟ್ಟಿನಹಳ್ಳಿ ಫಾರ್ಮ)ದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರಸವಿಸಲಾಯಿತು.
ಈ ಸಮಾರಂಭದಲ್ಲಿ ಮೈಸೂರಿನ ಎಸ್‍ಜೆಸಿಇ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಡಾ. ಅನಸೂಯ ಎಸ್ ಕೆಂಪನಹಳ್ಳಿ ಮತ್ತು ಗುಂಡ್ಲುಪೇಟೆ ಜಿ.ಆರ್. ರಾಜೇಶ್ ನಾಯಕ್ ಇವರಿಗೆ ಪ್ರತಿಷ್ಠಿತ ‘ಬಸವರತ್ನ’ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

ಡಾ. ಅನಸೂಯ ಎಸ್ ಕೆಂಪನಹಳ್ಳಿ ಇವರು ಲೇಖಕಿಯಾಗಿ ಹಾಗೂ ಸಂಪಾದಕೀಯವಾಗಿ ಒಟ್ಟು 28 ಕೃತಿಗಳನ್ನು ಕನ್ನಡ ಸಾಹಿತ್ಯದ ಸಾರಸ್ವತಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. “ಅಮ್ಮ” ಕಿರುಚಿತ್ರಕ್ಕೆ ನಾಯಕಿಯಾಗಿ ಪಾತ್ರ ನಿರ್ವಹಿಸಿದ್ದಾರೆ. “ನಾಡಕಟ್ಟಿದ ನಾಯಕ ನಕ್ಷತ್ರಗಳು” (ಹೋರಾಟದ ಗೀತೆಗಳು) ಸಿಡಿಗೆ ಸಾಹಿತ್ಯ ರಚನೆ, “ಜಗಲೂರು ಅಜ್ಜಯ್ಯ ¨Àsಕ್ತಿಗೀತೆಗಳು” ಸಿಡಿಗೆ ಹಿನ್ನೆಲೆ ಗಾಯಕಿಯಾಗಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಡಿಯಲ್ಲಿ ಬರುವ ‘ಗಂಗಾ ಕಲ್ಯಾಣ’ ಮತ್ತು ‘ಭೂಒಡೆತನ’ ಯೋಜನೆಯ “ಸಾಕ್ಷ್ಯಚಿತ್ರ’ ನಿರ್ಮಾಣದಲ್ಲಿ ಸಂಭಾಷಣೆ, ಸಾಹಿತ್ಯ ಮತ್ತು ನಿರೂಪಣಾ ಕಲಾವಿದೆಯಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಸಂಘಸಂಸ್ಥೆಗಳಲ್ಲಿ, ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, ಧರ್ಮದರ್ಶಿಗಳಾಗಿ, ಕಾರ್ಯದರ್ಶಿಯಾಗಿ, ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯವೈಖರಿ ಸಾಗುತ್ತಿದೆ. ಹೀಗೆ ಸಾಹಿತ್ಯಿಕ, ಸಿನಿಮಾ, ಸಾಮಾಜಿಕ ಕ್ಷೇತ್ರದಲ್ಲಿ 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಸ್ವೀಕರಿಸಿದ ಎಎಸ್‍ಕೆ ಇವರಿಗೆ ಸಾಹಿತ್ಯ ಶೈಕ್ಷಣಿಕ ಸೇವೆಯಂದು ಪರಿಗಣಿಸಿ “ಬಸವರತ್ನ” ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

 

ಮತ್ತೊಬ್ಬ ಸಾಧಕ, ಗುಂಡ್ಲುಪೇಟೆ ಶ್ರೀಯುತ ಜಿ.ಆರ್. ರಾಜೇಶ್ ನಾಯಕ್ ಇವರು ಸಮಾಜಿಕ ಕಾರ್ಯಕರ್ತ ಮತ್ತು ಸಾಮಾಜಿಕ ಜಾಲತಾಣಗಳ ತಜ್ಞ 3000ಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿಯ ನಾಟ್ಯಶ್ರೀ ಬದರಿ ದಿವ್ಯ ಭೂಷಣ್ ರವರ ಸಾರಥ್ಯದಲ್ಲಿ ನಡೆಸಿಕೊಡುವ ರಾಮಾನುಜ ಧನುರ್ ದಾಸ ವೈಭವಂ ನೃತ್ಯ ರೂಪದದಲ್ಲಿ ರಾಮಾನುಜರ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದು, ಈ ನೃತ್ಯ ರೂಪಕವು ದೇಶದ ನಾನಾ ಬಾಗಗಳಲ್ಲಿ ಪ್ರದರ್ಶನಗೊಂಡಿದೆ. ಹಾಗೂ ತಿರುಪತಿಯ ಟಿಟಿಡಿ ಚಾನಲ್ ಮುಖಾಂತರ ಸುಮಾರು 150ಕ್ಕೂ ಹೆಚ್ಚು ದೇಶಗಳಲ್ಲಿ ನೇರ ಪ್ರಸಾರಗೊಂಡಿದೆ. ತಾಲ್ಲೂಕಿನಲ್ಲಿ ಮಹಿಳಾ ಸಬಲೀಕರಣ ಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ಪಾಲ್ಗೋಳ್ಳುವುದರೊಂದಿಗೆ ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಾಹಿತ್ಯ ಸಂಸ್ಕøತಿ ಪರಂಪರೆಗೆ ಶ್ರಮಿಸಿದ ಸೇವೆಯನ್ನು ಪರಿಗಣಿಸಿ, ಸಮಾಜ ಸೇವೆಯೆಂದು ಗುರುತಿಸಿ ಜಿಆರ್‍ಎನ್ ಇವರಿಗೆ “ಬಸವರತ್ನ” ರಾಷ್ಟ್ರೀಯ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

By admin