ಮೈಸೂರು, 17 ಫೆಬ್ರವರಿ : 52 ವರ್ಷ ವಯಸ್ಸಿನ ಯಶವಂತಕುಮಾರ್‌ ಅವರಿಗೆ ಇತ್ತೀಚೆಗೆ ಇದ್ದಕ್ಕಿದ್ದಂತೆ ಎಡಗಣ್ಣು ಕಾಣದಂತಾಗಿ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಅವರು ಮೋನೋಕ್ಯುಲರ್‌ ವ್ಯಕ್ತಿಯಾಗಿದ್ದು, ಈಗಾಗಲೇ ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ಹೊರ ಜಗತ್ತನ್ನು ನೋಡಲು ಇದ್ದದ್ದು ಎಡಗಣ್ಣು ಮಾತ್ರ. ಅದೃಷ್ಟವಶಾತ್ ಸಕಾಲದಲ್ಲಿ ಮೈಸೂರಿನ ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆ ತೋರಿಸಿದ್ದ ಹಿನ್ನೆಲೆಯಲ್ಲಿ ವೈದ್ಯರು ಎರಡು ತುರ್ತು ಶಸ್ತ್ರಚಿಕಿತ್ಸೆಗಳು ಮತ್ತು ಕಾಸ್ಮೆಟಿಕ್ ಚಿಕತ್ಸೆ.ನೀಡಲಾಯಿತು. ರೋಗಿಯು ಕಳೆದುಕೊಂಡಿದ್ದ ದೃಷ್ಟಿಯನ್ನು ಬಹುತೇಕ ಮರಳಿ ಪಡೆದಿದ್ದಷ್ಟೇ ಅಲ್ಲ, ತನ್ನ ಕುರುಡು ಕಣ್ಣನ್ನು ಸಹಜವಾಗಿ ಕಾಣುವ ದೃಷ್ಟಿಯನ್ನು ನೀಡುವ ಮೂಲಕ ಅವರ ವ್ಯಕ್ತಿತ್ವಕ್ಕೆ ಒಂದು ಫೇಸ್ ಲಿಫ್ಟ್ ನೀಡಿದರು.


ಯಶವಂತ್ ಅವರ ಎಡಗಣ್ಣಿನ ಹಠಾತ್ ದೃಷ್ಟಿ ನಷ್ಟಕ್ಕೆ ಕಾರಣವೇನೆಂದರೆ ರೆಟಿನಾ ಬೇರ್ಪಡುವಿಕೆ (ಕಣ್ಣಿನ ನರ), ದೃಷ್ಟಿಗೆ ರೆಟಿನಾ ಮುಖ್ಯವಾಗಿರುತ್ತದೆ. ಇದು ಕಣ್ಣಿನೊಳಗೆ ಪ್ರವೇಶಿಸುವ ಬೆಳಕನ್ನು ಪಡೆಯುತ್ತದೆ. ಇದನ್ನು ನರ ಸಂಕೇತಗಳಾಗಿ ಪರಿವರ್ತನೆ ಮಾಡುತ್ತದೆ ಮತ್ತು ದೃಶ್ಯ ಗುರುತಿಸುವಿಕೆಗಾಗಿ ಮೆದುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ರೆಟಿನಾ ಬೇರ್ಪಡುವಿಕೆ ತುರ್ತು ಸ್ಥಿತಿಯಾಗಿದೆ. ಏಕೆಂದರೆ, ಬೇರ್ಪಟ್ಟ ರೆಟಿನಾವು ರಕ್ತ ಪೂರೈಕೆ, ಆಮ್ಲಜನಕ ಹಾಗೂ ಪೋಷಣೆ ಇಲ್ಲದೇ ನಿಷ್ಕ್ರಿಯವಾಗಲು ಆರಂಭವಾಗುತ್ತದೆ. ಇದು ರೆಟಿನಾ ಬೇರ್ಪಡುವಿಕೆಯಿಂದಾಗಿ ಯಶವಂತ್ ಅವರ ಬಲಗಣ್ಣಿನ ದೃಷ್ಟಿ ಕಳೆದುಕೊಂಡಿತು. ಇದನ್ನು ಸರಿಪಡಿಸಿಕೊಳ್ಳಲೆಂದು ಅವರು 2008 ರಲ್ಲಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
 ಮೈಸೂರಿನ ಡಾ.ಅಗರ್‌ವಾಲ್ಸ್ ಕಣ್ಣಿನ ಹಾಸ್ಪಿಟಲ್‌ನ ಕ್ಲಿನಿಕಲ್ ಸರ್ವೀಸಸ್ ಮುಖ್ಯಸ್ಥ ಡಾ.ಪ್ರವೀಣ್ ಎಸ್ ಅಳವಂಡಿ ನೇತೃತ್ವದ ನೇತ್ರ ತಜ್ಞರ ತಂಡವು ತಕ್ಷಣವೇ ವಿಟೆಕ್ಟಮಿ ಚಿಕಿತ್ಸೆಯನ್ನು ನಡೆಸಿತು. ಇದು ರೆಟಿನಾದ ಬೇರ್ಪಡುವಿಕೆಗೆ ಒಂದು ರೀತಿಯ ಕಣ್ಣಿನ ಶಸ್ತ್ರಚಿಕಿತ್ಸೆಯಾಗಿದೆ. ಯಶವಂತ್ ಎಡಗಣ್ಣಿನಲ್ಲಿ ಪೊರೆ ಬೆಳೆದುಕೊಂಡಿದ್ದ ಕಾರಣ ವೈದ್ಯರ ತಂಡವು ಫೇಕೋ (ಫೋಲೇಬಲ್ ಐಒಎಲ್ ಇಂಪ್ಲಾಂಟ್‌ನೊಂದಿಗೆ) ಒಂದು ರೀತಿಯ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಯಿತು
. ಕಳೆದ ವರ್ಷ ಜುಲೈನಲ್ಲಿ ವಿಟೆಕ್ಷಮಿ ಮತ್ತು ಫೇಕೊ ಎರಡನ್ನೂ ಒಂದೇ ಬಾರಿ ನೆರವೇರಿಸಲಾಗಿತ್ತು ಎಂಬುದನ್ನು ಗಮನಿಸಬೇಕು. ಅವರ ಕುರುಡು ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ನಿಯಲ್ ಟ್ಯಾಟೂಯಿಂಗ್, ಕಾರ್ನಿಯಾದ ಮೇಲೆ ಹಚ್ಚೆ ಹಾಕುವ ಪದ್ಧತಿಯನ್ನು ಒಂದು ತಿಂಗಳ ನಂತರ ನಡೆಸಲಾಯಿತು. ಈ ವಿಧಾನವನ್ನು ಸೌಂದರ್ಯ ಮತ್ತು ಕ್ರಿಯಾತ್ಮಕ ಉದ್ದೇಶಗಳಿಗೆ ಆಯ್ದ ಕೆಲವು ಸಂದರ್ಭಗಳಲ್ಲಿ ನಡೆಸಲಾಗುತ್ತದೆ ಹಾಗೂ ಇದನ್ನು ನಿಖರವಾಗಿ ನಿರ್ವಹಣೆ ಮಾಡುವುದು ತುಂಬಾ ಕಷ್ಟವಾಗುತ್ತದೆ.


ರೋಗಿಯ ಸ್ಥಿತಿಗತಿ ಬಗ್ಗೆ ಮಾತನಾಡಿ ಡಾ.ಪ್ರವೀಣ್‌ ಅವರು, “ಎಡಗಣ್ಣಿನ ದೃಷ್ಟಿ ಹಠಾತ್ ಆಗಿ ಹೋಗಿದ್ದ ದೂರನ್ನು ಹೊತ್ತು ಯಶವಂತ್ ಅವರು 13 ಜುಲೈ 2021 ರಂದು ನಮ್ಮ ಆಸ್ಪತ್ರೆಗೆ ಬಂದಿದ್ದರು. 1/2 ಮೀಟರ್ ದೃಷ್ಟಿಯೊಂದಿಗೆ ರೆಟಿನಾ ಬೇರ್ಪಟ್ಟಿರುವುದನ್ನು ಗಮನಿಸಿದೆವು. ಈ ಹಿನ್ನೆಲೆಯಲ್ಲಿ ಮರುದಿನ ನಾವು ಅವರಿಗೆ ವಿಟೆಕ್ಟಮಿ ಶಸಚಿಕಿತ್ಸೆಯನ್ನು ಮಾಡಿದೆವು. ಶಸ್ತ್ರಚಿಕಿತ್ಸೆ ನಂತರದ ಒಂದು ವಾರದಲ್ಲಿ ಅವರ ದೃಷ್ಟಿ 3/60 ರಷ್ಟಕ್ಕೆ ಸುಧಾರಣೆಯಾಯಿತು. ಇದೀಗ ಅವರ ದೃಷ್ಟಿ ಪ್ರಮಾಣ 6/9 ರಷ್ಟಿದೆ. ನಾವು ಸೆಪ್ಟೆಂಬರ್‌ನಲ್ಲಿ ಇನ್ನೊಂದು ಕಣ್ಣಿಗೆ ಕಾಸೆಟಿಕ್ ಸರ್ಜರಿ ಮಾಡಿದ್ದೇವೆ. ಇದು ಇತರ ಕಣ್ಣಿನ ಸೌಂದರ್ಯದ ನೋಟವನ್ನು ಸುಧಾರಣೆ ಮಾಡಿದೆ. ಇದರ ಮೂಲಕ ಯಶವಂತ್ ಅವರು ಯಾವುದೇ ಚ್ಯುತಿ ಇಲ್ಲದ ರೀತಿಯಲ್ಲಿ ತಮ್ಮ ದೈನಂದಿನ ಜೀವನ ನಡೆಸಲು ಸಾಧ್ಯವಾಗಿದೆ’ ಎಂದರು.


“ರೆಟಿನಾ ಬೇರ್ಪಡುವಿಕೆ ಯಾವುದೇ ವಯಸ್ಸಿನ ಜನರಲ್ಲಿ ಸಂಭವಿಸಬಹುದು. ಆದರೆ, ಅದಕ್ಕೆ ಒಳಗಾಗುವವರಲ್ಲಿ ಹೆಚ್ಚಿನ ರೋಗಶಾಸ್ತ್ರೀಯ ಸಮೀಪದೃಷ್ಟಿ ಇರುವವರು ಸೇರಿದ್ದಾರೆ ಎಂದು ಅವರು ತಿಳಿಸಿದರು.
ಯಶವಂತ್‌ ಬಾಲ್ಯದಿಂದಲೂ ಸಮೀಪದೃಷ್ಟಿಯನ್ನು ಹೊಂದಿದ್ದರು ಮತ್ತು ದಶಕಗಳಿಂದ ಕನ್ನಡಕವನ್ನು ಧರಿಸುತ್ತಿದ್ದಾರೆ. ಇದು ಕಣ್ಣು ಗಾಯ, ವೃದ್ಧಾಪ್ಯ ಮತ್ತು ಮಧುಮೇಹಕ್ಕೆ ಕಾರಣವಾಗಬಲ್ಲದು. ಅತಿಯಾದ ಭಾರ ಎತ್ತುವುದು, ಬೊಜ್ಜು ಮತ್ತು ಧೂಮಪಾನ ಇನ್ನಿತರೆ ಅಪಾಯಕಾರಿ ಅಂಶಗಳೂ ಈ ವರ್ಗದಲ್ಲಿ ಸೇರಿವೆ.
ರೆಟಿನಾ ಬೇರ್ಪಡುವಿಕೆಗೆ ಕಾರಣಗಳೇನೆಂಬುದರ ಬಗ್ಗೆ ಮಾತನಾಡಿದ ಡಾ.ಪ್ರವೀಣ್ ಅವರು, “ವೃದ್ಧಾಪ್ಯ ಮತ್ತು ಕಣ್ಣು ಗಾಯಗಳು ಸಾಮಾನ್ಯ ಅಂಶಗಳಾಗಿವೆ. ರೆಟಿನಾ ಬೇರ್ಪಡುವಿಕೆ ಸಂಭವಿಸಿದಾಗ ವ್ಯಕ್ತಿಗಳು ಕೆಲವೇ ನಿಮಿಷಗಳಿಂದ ಕೆಲವೇ ಗಂಟೆಗಳಲ್ಲಿ ಹಠಾತ್ ದೃಷ್ಟಿಯನ್ನು ಕಳೆದುಕೊಳ್ಳುತ್ತಾರೆ. ಸಣ್ಣ ಚುಕ್ಕೆಗಳು ದೃಷ್ಟಿ ಕ್ಷೇತ್ರದ ಮೂಲಕ ತೇಲುತ್ತವೆ. ಒಂದು ಅಥವಾ ಎರಡೂ ಕಣ್ಣುಗಳಲ್ಲಿ ಬೆಳಕಿನ ಮಿಂಚುಗಳು ಅಥವಾ ಮಸುಕಾದ ದೃಷ್ಟಿ ಮತ್ತು ದೃಷ್ಟಿ ಕ್ರಮೇಣ ಕುಂಠಿತವಾಗುವುದು ಅಥವಾ ದೃಷ್ಟಿಗೋಚರ ಕ್ಷೇತ್ರದ ಮೇಲೆ ಪರದೆಯಂತಹ ನೆರಳು ಇರಬಹುದು’ ಎಂದು ತಿಳಿಸಿದರು.


ರೆಟಿನಾ ಬೇರ್ಪಡುವಿಕೆಯನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾತನಾಡಿದ ಡಾ.ಪ್ರವೀಣ್ ಅವರು, “ಅಪಾಯಕ್ಕೆ ಸಿಲುಕಿದ ವ್ಯಕ್ತಿಗಳು ರೆಟಿನಾ ಪರೀಕ್ಷೆ ನಡೆಸಬೇಕು ಮತ್ತು ನಿಯಮಿತವಾಗಿ ತಪಾಸಣೆ ನಡೆಸಿಕೊಳ್ಳಬೇಕು. ಅಂತಹ ವ್ಯಕ್ತಿಗಳು ಅತಿಯಾದ ಭಾರವನ್ನು ಎತ್ತಬಾರದು ಮತ್ತು ಒತ್ತಡಯುಕ್ತ ಕೆಮ್ಮು ಅಥವಾ ಸೀನಬಾರದು’ ಎಂದು ಸಲಹೆ ನೀಡಿದರು.


“ವಿಟೆಕ್ಟಮಿ ಒಂದು ಸಂಕೀರ್ಣವಾದ ಚಿಕಿತ್ಸೆಯಾಗಿದೆ. ರೆಟಿನಾವನ್ನು ಪುನಃ ಜೋಡಿಸಲು ಇದು ಸಮರ್ಪಕವಾದ ಚಿಕಿತ್ಸಾ ಪದ್ಧತಿಯಾಗಿದೆ. ಕಣ್ಣಿನ ಗೋಡೆಯ ವಿರುದ್ಧ ರೆಟಿನಾವನ್ನು ಅದರ ಸ್ಥಳಕ್ಕೆ ಸುಗಮಗೊಳಿಸಲು ದ್ರವಗಳನ್ನು ಹಾಕುವ ಮೂಲಕ ಮರುಜೋಡಿಸಲಾದ ರೆಟಿನಾಕ್ಕೆ ಬೆಂಬಲವನ್ನು ರಚಿಸುವುದನ್ನು ಇದು ಒಳಗೊಂಡಿರುತ್ತದೆ. ರೆಟಿನಾವನ್ನು ಸರಿಪಡಿಸಲು ಮತ್ತು ಅದರ ಶಾರೀರಿಕ ಕಾರ್ಯಗಳನ್ನು ಪುನರಾರಂಭಿಸುವವರೆಗೆ ಗ್ಯಾಸ್ ಅಥವಾ ಸಿಲಿಕಾನ್ ಎಣ್ಣೆಯನ್ನು ಬಳಸಲಾಗುತ್ತದೆ’ ಎಂದರು.Attachments area