ಬೆಂಗಳೂರು: ಕೊರೊನಾ ಸೋಂಕಿತರಿಗೆ ನೆರವಾಗಲು ಏಳನೇ 12 ವರ್ಷದ ಬಾಲಕ ತಾನು ಉಳಿತಾಯ ಮಾಡಿದ 4,190 ರೂ ಗಳನ್ನು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ನೀಡುವ ಮೂಲಕ ಅಳಿಲು ಸೇವೆ ಮಾಡಿ ಇತರರಿಗೆ ಮಾದರಿಯಾಗಿದ್ದಾನೆ
ಮೂಲತಃ ದಾವಣಗೆರೆಯ ಅಭಿನಂದನ್ ಸ್ವಪ್ನ ಪುತ್ರ ಬೆಂಗಳೂರಿನ ಚಿಕ್ಕಬಾಣಾವರದ ಎಡಿಫೈಸ್ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಾಯಾಂಕ್ ಎಂಬಾತನೇ ಕೋವಿಡ್ ಪರಿಹಾರ ನಿಧಿಗೆ ಹಣ ನೀಡಿದ ವಿದ್ಯಾರ್ಥಿ. ಈತ ಪ್ರತಿ ದಿನವೂ ಮಾಧ್ಯಮಗಳಲ್ಲಿ ಬರುತ್ತಿದ್ದ ಬಡವರ ಸಂಕಷ್ಟಗಳ ಸುದ್ದಿಯನ್ನು ನೋಡಿ ತನ್ನ ಕೈಲಾದ ಸಹಾಯವನ್ನು ಮಾಡಬೇಕೆನ್ನುವ ಉದ್ದೇಶದಿಂದ ತಾನು 4 ವರ್ಷಗಳಿಂದ ಹುಂಡಿಯಲ್ಲಿ ಕೂಡಿಟ್ಟಿದ್ದ 4,190 ರೂ ಹಣವನ್ನು ಜಿಲ್ಲಾಧಿಕಾರಿ ಜೆ ಮಂಜುನಾಥ್ ಮೂಲಕ ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

By admin