ಲೇಖನ ಅಭಿವ್ಯಕ್ತಿ: ಮಹೇಶ್ ನಾಯಕ್,

ಮೈಸೂರು -೨೨ ಇತ್ತೀಚಿಗೆ ಮಧುಮೇಹದ ತೊಂದರೆಯಿಂದ ಬಳಲುತಿದ್ದ ನಮ್ಮ ಸ್ನೇಹಿತನ ತಂದೆಯವರು. ಕಾಲಿನಲ್ಲಿ ಸಣ್ಣಗಾಯ ಕಾಣಿಸಿಕೊಂಡಿದ್ದು ಅದರಿಂದ ಹತ್ತಿರದ ಕ್ಲಿನಿಕ್ ನಲ್ಲಿ ತಮ್ಮ ಅಪ್ತ ವೈದ್ಯರೊಂದಿಗೆ ಸಮಾಲೋಚನೆ ಮಾಡಿದರು. ಇವರಿಗೆ ಗ್ಯಾಂಗ್ರಿನ್, ಆಗಿದೆ ಈಗ ಇದು ವಾಸಿಯಾಗದೆ ಇದ್ದಲ್ಲಿ, ಮುಂದೆ ಕಾಲು ತೆಗೆಯುವ ಪರಿಸ್ಥಿತಿ ಬರಬಹುದು ಎಂದು ವೈದ್ಯರು ಕಿವಿಮಾತು ಹೇಳಿದರು.
ನಂತರ ಎರಡು ಮೂರು ದಿನ ಬಿಟ್ಟು ತಮ್ಮ ಅಪ್ತ ವೈದ್ಯರು ಹೇಳಿದ ಹಾಗೆ ಆಸ್ಪತ್ರೆಗೆ ನನ್ನ ಸ್ನೇಹಿತನ ತಂದೆಯವರನ್ನು ಸೇರಿಸಲಾಯಿತು.

ತದನಂತರದ ದಿನಗಳಲ್ಲಿ ಅವರ ಕಾಲಿನ ಹೆಬ್ಬೆರಳಲ್ಲಿ ಗಾಯದ ಪರಿಣಾಮವಾಗಿ ಬಲಗಾಲಿನ ಹೆಬ್ಬೆರಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲಾಯಿತು. ಅನಂತರ ೪ ದಿನ ನಂತರ ಆಸ್ಪತ್ರೆಯಲ್ಲಿ ವಾರ್ಡ್‌ಗೆ ಬದಲಾಯಿಸಿದರು. ಅಗ ಕುಟಂಬದವರೊಂದಿಗೆ ಕುಳಿತುಕೊಂಡು ಮಾತಾಡಿಕೊಂಡು ಚೆನ್ನಾಗಿಯೇ ಇದ್ದರು. ನಂತರ ಕಾಲಿನ ಗಾಯ ವಾಸಿಯಾಗಲು ಪ್ರಾರಂಬಿಸಿತು. ಕಾಲಿನ ರಕ್ತಪರಿಚಲನಯು ಕೂಡ ನಿಯಂತ್ರಣಕ್ಕೆ ಬಂದಿತು. ಅಗ ವೈದ್ಯರು ನಿಮ್ಮ ತಂದೆಯವರು ಗುಣಮುಖರಾಗುತ್ತಿದ್ದಾರೆ ಎಂದರು. ಜೊತೆಗೆ ಈಗ ಮನೆಗೆ ಹೋಗಬಹುದು ಎಂದು ಕುಟಂಬದವರಿಗೆ ತಿಳಿಸಿದರು.

ಮನೆಗೆ ಬಂದ ಸಂತೋಷದಲ್ಲಿ ಇದ್ದ ಕುಟಂಬ ಆರೋಗ್ಯದಲ್ಲಿ ಚೇತರಿಕೆ ಕಂಡುಬಂತಲ್ಲ ಎಂದು ಮನೆ ಮಂದಿ ಸಂತೋಷದಿಂದ ಇದ್ದರು
ಆಸ್ಪತ್ರೆ ಇಂದ ಬಂದ ಮೂರು ದಿನ ಆದಮೇಲೆ ಮತ್ತೆ ಆರೋಗ್ಯದಲ್ಲಿ ಏರು ಪೇರು ಕಾಣಿಸಿತು.ಸುಸ್ತು ತಲೆ ನೋವು ಮಲಗಲು ಸಾಧ್ಯ ಆಗುತ್ತಿಲ್ಲ ಎಂದು ಬೆಳಗಿನ ಜಾವ ೪ ಕ್ಕೆ ಮತ್ತೆ ಆಸ್ಪತ್ರೆಗೆ ಸೇರಿಸಿದರು. ಕುಟಂಬದವರಲ್ಲಿ ಏನೋ ಒಂಥರ ಆತಂಕ ಭಯ ಏನಪ್ಪಾ ಇದು ಈಗ ತಾನೆ ಅಪರೇಷನ್ ಮಾಡಿಸಿ ಮನೆಗೆ ಕರೆದುಕೊಂಡು ಬಂದಿದ್ದೀವಿ. ಏನಾಪ್ಪಾ ಮಾಡುವುದು ಮಕ್ಕಳು ಸಂಬಂಧಿಕರು ಆತಂಕ ಕಳವಳ ಕೈ ಕಾಲು ನಡುಕನೆ ಹಾಗಿ ಹೋದಂತೆ ಆಯಿತು. ಮತ್ತೆ ವ್ಯದ್ಯರನ್ನು ಭೇಟಿ ಆದರು ಅವರು ಏನು ಆಗಿಲ್ಲ ಡಿಸ್ಚಾರ್ಜ್ ಆಗಿದ್ದಾಗ ಮಾತ್ರೆಗಳ ವ್ಯತ್ಯಾಸಗಳಿಂದ ಪರೀಶಿಲನೆ ಮಾಡಿದಾಗ ದೇಹದಲ್ಲಿ ಸ್ವಲ್ಪ ಪ್ರಮಾಣ ವ್ಯತ್ಯಾಸ ಆಗಿದೆ ಎಂದು ಹೇಳಿದರು.

ಡಾಕ್ಟರ್ ಆಸ್ಪತ್ರೆಯ ರೌಂಡ್ಸಗೆ ಬಂದಾಗ ರೋಗಿಯ ಸಂಬಂದಿಕರನ್ನು ಕರೆದು ಇವರಿಗೆ ಹೃದಯದ ತೊಂದರೆ ಇದೆ ಶ್ವಾಸ ಕೋಶವು ಕೂಡ ತೊಂದರೆ ಇದೆ ಎಂದು ಹೇಳಿದರು. ಮನೆ ಮಂದಿಗಳು ಏನಾಪ್ಪಾ ಇದು ಮಧುಮೇಹ ಅಂತ ಬಂದಿದ್ದು. ಇನ್ನೂ ಏನೇನೋ ಹೇಳುತ್ತಾ ಇದ್ದಾರೆ ಇವರು. ಆಯಿತು ಸರಿ ಎಂದು ಮಕ್ಕಳು ವೈದ್ಯರ ಅನುಮತಿಯಂತೆ ಮತ್ತೆ ಐ.ಸಿ.ಯು ಗೆ. ಸೇರಿಸಿದರು

ಐ.ಸಿ.ಯು ಕಥೆ ಕೇಳಬೇಕಾ! ರೋಗಿಯ ಪಾಡು ಅಯ್ಯೋ. ಮಾತ್ರೆ ಔಷದ ಕೊಟ್ಟಿರುವ ದೇಹದ ಸ್ಥಿತಿ ಹೇಳತೀರದ ಸ್ಥಿತಿಯಲ್ಲಿದ್ದು ಜೊತೆಗೆ ಒಂದು ಕಡೆ ಬಿಲ್‌ಗಳ ದರ ಹೆಚ್ಚಾಗುತ್ತಲೇ ಇತ್ತು. ಇದನ್ನು ಕಂಡ ಮಕ್ಕಳು ಭಯಭೀತರಾದರು. ಸುಮಾರು ೨೦ ದಿನಗಳು ಐ.ಸಿ.ಯು ಗೆ ಹಾಕಿದರು. ನಂತರ ವಾರ್ಡ್‌ಗೆ ಕಳುಹಿಸಲು ಸೂಚನೆ ನೀಡಿದರು. ಮರುದಿನ ಬೆಳಿಗ್ಗೆ ಮತ್ತೆ ಅದೆ ಐ.ಸಿ.ಯು ಟ್ರೀಟಮೆಂಟ್ ಕೊಡಬೇಕೆಂದರು ಆದೇಶಿಸಿದರು. ಮತ್ತೆ ರೋಗಿಯ ಸಂಬಂದಿಕರು ಆಸ್ಪತ್ರೆ ಸಿಬ್ಬಂದಿ ಮೇಲೆ ಬಿಲ್ ಮೇಲೆ ಬಿಲ್ ಜಾಸ್ತಿ ಆಗುತ್ತಿದೆ. ಇಲ್ಲ ಅಂದರೆ ನಾವು ಬೇರೆ ಆಸ್ಪತ್ರೆ ಕರೆದುಕೊಂಡು ಹೋಗುತ್ತೀವಿ ಎಂದು ರೋಗಿಯ ಸಂಬಂದಿಕರು ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆ ಸಿಬಂದ್ದಿಯವರು ಈ ಪರಿಸ್ಥಿತಿಯಲ್ಲಿ ಕರೆದುಕೊಂಡು ಹೋಗುವುದು ಬಹಳ ಕಷ್ಟ ಆಗುತ್ತೆ ಎಂದು ಹೇಳಿ ನಿಮ್ಮಿಷ್ಟ ಇದ್ದರೆ ಕರೆದುಕೊಂಡುಹೋಗಿ ಇಲ್ಲವೇ ಇಲ್ಲೆ ಇರಿಸಿಕೊಳ್ಳಿ ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ ಮಾತನಾಡಿದರು. .ಅಲ್ಲಿನ ದಾದಿಯರು ಇವರಿಗೆ ಅಂಜಿಯಾಗ್ರಾಂ ಮಾಡಬೇಕಾಗುತ್ತದೆ ಎಂದು ತಿಳಿಸಿದರು. ಸರಿ ಅಂದುಕೊಂಡು ನಾವು ಹೊರ ನೆಡೆದೆವು ಯಾಕೋ ಇದು ಬ್ಲೇಡ್ ಆಸ್ಪತ್ರೆ ಇರಬೇಕು ಅಂದುಕೊಂಡೆವು.

ನಾವು ಸ್ವಲ್ಪ ಸಮಯ ಯೋಚನೆ ಮಾಡಿ ಅಲ್ಲೆ ಇದ್ದ ಐ.ಸಿ.ಯು ವಾರ್ಡ್‌ನ ಮೇಲ್ವಿಚಾರಕರನ್ನು ಬೇಟಿ ಮಾಡಿದ್ವಿ ಅವರನ್ನು
ಅಂಜಿಯೋಗ್ರಾಂ ಮಾಡಿಸುವುದಕ್ಕೆ ಖರ್ಚು ಎಷ್ಟಾಗುತ್ತೆ ಅಂತ ರೋಗಿಯ ಸಂಬಂಧಿಕರು ಕೇಳಿದರು. ೮೦,೦೦೦ ರೂ ಆಗುತ್ತೆ ಅಂದರು. ಏನಾಪ್ಪಾ ಇದು ಇಷ್ಟು ಹಣ ಎಲ್ಲಿಂದ ತರಬೇಕು ಎಂದು ಯೋಚನೆ ಮಾಡಿದ್ವಿ. ಅಗ ನಾನು ಗೆಳಯನಿಗೆ ಒಂದು ಸರ್ಕಾರಿ ಆಸ್ಪತ್ರೆ ಯಲ್ಲಿ ಎಷ್ಟಾಗುತ್ತೆ ಅಂದು ಕೊಂಡು ಕೇಳಿಕೊಂಡು ಬರೋಣ ಎಂದು ಹೇಳಿದೆ. ಆಗೆ ರೋಗಿ ಕಂಡಿಷನ್ ಕಾರ್ಡ್ ತೆಗೆದುಕೊಂಡು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾಗ ಅಷ್ಟು ಹಣ ಆಗುವುದಿಲ್ಲ ಎಂದರು.

ಸರಿಯಾದ ಮಾಹಿತಿ ನೀಡದೆ ಸುಪರ್ ವೈಸರ್ ಮಾತು ಕೇಳಿ ಬೇಸರ ಉಂಟಾಗಿತ್ತು. ಅಲ್ಲಿನ ಬಿಲ್ ವಿಭಾಗದಲ್ಲಿ ತಿಳಿದುಕೊಳ್ಳಣ ಎಂದು ಹೋದಾಗ ಅವರು ನಮಗೆ ಸರಿಯಾದ ಮಾಹಿತಿ ನೀಡಿದರು. ನಂತರ ಅ ಚಿಕೆತ್ಸೆ ಕೂಡ ಅಲ್ಲಿಯೇ ಮಾಡಿಸಲಾಯಿತು. ೨೦ ದಿನಗಳ ನಂತರ ರೋಗಿಗೆ ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ವಾರ್ಡ್‌ನಲ್ಲೆ ಒಂದು ದಿನ ಇದ್ದರು ಮಾರನೇಯ ದಿನ ಅಲ್ಲೇ ಕೊನೆ ಉಸಿರೆಳೆದರು. ಕರುಣೆ ಇಲ್ಲದ ವೈದ್ಯರು ದುಡ್ಡಿಗಾಗಿ ನಿಂತ ಸೈತಾನರು ಅಂಥ ಹೇಳುವುದು ತಪ್ಪೇನಿಲ್ಲ.

ಲೇಖನ ಅಭಿವ್ಯಕ್ತಿ: ಮಹೇಶ್ ನಾಯಕ್,

944898-0010