ಚಾಮರಾಜನಗರ: ನಗರದ ರೋಟರಿಭವನದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಮಾಜಿ ಸಚಿವೆ, ಚಿತ್ರನಟಿ ಉಮಾಶ್ರೀ ಅವರ ಪುತ್ರಿ ದಂತವೈದ್ಯೆ ಡಾ.ಗಾಯತ್ರಿ ರಮೇಶ್ ಹಾಗೂ ನಗರದ ಜಿಲ್ಲಾಸ್ಪತ್ರೆ ಮೂಳೆ ತಜ್ಞ ಡಾ.ಶಿವಣ್ಣ ಅವರನ್ನು ಸನ್ಮಾನಿಸಲಾಯಿತು
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಗಾಯಿತ್ರಿ ರಮೇಶ್’ ನನ್ನ ತಾಯಿ ಉಮಾಶ್ರೀ ಅವರ ಮಾರ್ಗದರ್ಶನದಲ್ಲೇ ನಾನು ವೈದ್ಯವೃತ್ತಿಯಲ್ಲಿದ್ದೇನೆ. ಈ ವೈದ್ಯರತ್ನ ಪ್ರಶಸ್ತಿ ಅವರಿಗೆ ಸಲ್ಲಬೇಕು. ವೈದ್ಯ ವೃತ್ತಿ ಸಮಾಜ ಸೇವೆ ಮಾಡಲು ಒಂದು ಉತ್ತಮ ಮಾರ್ಗವಾಗಿದೆ. ಇಂತಹ ಪ್ರಶಸ್ತಿಗಳು ನಮ್ಮ ವೃತ್ತಿಯ ಗೌರವವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಮೂಳೆ ತಜ್ಞ ಡಾ.ಶಿವಣ್ಣ ಮಾತನಾಡಿ, ವೈದ್ಯ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದ್ದು, ವೈದ್ಯರು ಪ್ರತಿಫಲಾಪೇಕ್ಷೆಯಿಲ್ಲದೇ ಕರ್ತವ್ಯ ನಿರ್ವಹಿಸಬೇಕು.
ವೈದ್ಯರ ಬಳಿಗೆ ಬರುವವರೆಲ್ಲರೂ ಕ?ದ ಪರಿಸ್ಥಿತಿಯವರೇ ಆಗಿರುತ್ತಾರೆ ಅದನ್ನು ಸೂಕ್ಷ್ಮವಾಗಿ ಅರಿತುಕೊಳ್ಳುವುದು ವೈದ್ಯರ ಮೊದಲ ಕೆಲಸವಾಗಬೇಕು ಎಂದು ತಿಳಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಎಸ್.ಪಿ.ಬಿ ಕಲಾ ಸಾಂಸ್ಕೃತಿಕ ವೇದಿಕೆ ಗೌರವಾಧ್ಯಕ್ಷ ಎಸ್. ಸುರೇಶ್, ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷೆ ಮಂಗಳಮ್ಮ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ರೋಟರಿ ಅಧ್ಯಕ್ಷ ಶ್ರೀನಿವಾಸ್, ವೀರಭದ್ರಸ್ವಾಮಿ, ಕಲೆ ನಟರಾಜ್, ರಾಜಣ್ಣ, ಉಮ್ಮತ್ತೂರು ಚಂದ್ರು, ಶಿವಶಂಕರ್ ಹಾಜರಿದ್ದರು.