ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ ಇಂದು ಮೈಸೂರು ನಗರದ ವಿವೇಕಾನಂದ ವೃತ್ತದಲ್ಲಿರುವ ಆದಿತ್ಯ ಮಕ್ಮಳ ಆಸ್ಪತ್ರೆಯ ವೈದ್ಯರಾದ ಡಾ! ಪ್ರಶಾಂತ್ ರವರಿಗೆ ಮಗುವಿಗೆ ವೈದ್ಯ ವೇಷ ಹಾಕಿಸಿ ಹೂ ಗುಚ್ಚ ನೀಡುವ ಮೂಲಕ ರಾಷ್ಟ್ರೀಯ ವೈದ್ಯ ದಿನಾಚರಣೆ ಪ್ರಯುಕ್ತ ವೈದ್ಯರಿಗೆ ಗೌರವ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ವೈದ್ಯರಾದ ಡಾ. ಪ್ರಶಾಂತ್ ರವರು “ವೈದ್ಯ ದಿನಾಚರಣೆ ಪ್ರಯುಕ್ತ ಮಗುವಿಗೆ ವೈದ್ಯರ ವೇಷ ಧರಿಸಿ ನಮ್ಮಂತಹ ವೈದ್ಯರಿಗೆ ಗೌರವ ಸಲ್ಲಿಸುತ್ತಿರುವು ಶ್ಲಾಘನೀಯ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸ ಮಾಡಲು ಸ್ಪೂರ್ತಿ ತುಂಬಲು ಪ್ರಯತ್ನ ಪಡುತ್ತಿರುವ ನಿಮ್ಮಂತ ಯುವ ಪೀಳಿಗೆಗೆ ಅಭಿನಂದನೆಗಳು” ಎಂದರು
ನಂತರ ಮಾತನಾಡಿದ ಯುವ ಮುಖಂಡ ವಿಕಾಸ್ ಶಾಸ್ತ್ರಿ “ವೈದ್ಯೋ ನಾರಾಯಣೊ ಹರಿ ಎಂದು ಹೇಳುತ್ತಾರೆ ಹಾಗೆ ಪ್ರತಿಯೊಬ್ಬ ಮನುಷ್ಯ ಕೂಡ ವೈದ್ಯರ ಮೇಲೆ ಆವಲಬಿತವಾಗಿದ್ದಾನೆ ನಾವೆಲ್ಲರೂ ವೈದ್ಯರಿಗೆ ಗೌರವ ಸಮರ್ಪಿಸುವ ಸರಿಯಾದ ಸಂಧರ್ಭ ಇದಾಗಿದೆ” ಎಂದರು
ಈ ಸಂಧರ್ಭದಲ್ಲಿ ವೈದ್ಯ ವೇಷಧಾರಿ ಪ್ರಥಮ್ ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ ನಗರ ಪಧಾದಿಕಾರಿಗಳಾದ ಪ್ರದೀಪ್ ತೇಜಸ್ ಗಗನ್ ವಿನಯ್ ಶಿವಣ್ಣ ಮನೋಜ್ ಹಾಗು ಇನ್ನಿತರರು ಉಪಸ್ಥಿತರಿದ್ದರು