ಮೈಸೂರು. 1 ಇಂದಿನ ವೈದ್ಯರಿಗೆ ಡಾ. ಬಿ ಸಿ ರಾಯ್ ಆದರ್ಶಪ್ರಾಯರೆಂದು ಖ್ಯಾತ ಮಧುಮೇಹ ತಜ್ಞ ಡಾ. ಎ. ಆರ್. ಪ್ರಸಾದ್ ಅಭಿಪ್ರಾಯಪಟ್ಟರು.ಅವರು ಸುವರ್ಣ ಬೆಳಕು ಫೌಂಡೇಶನ್ ಹಾಗೂ ಯೂತ್ ಹಾಸ್ಟೆಲ್ ಸಂಯುಕ್ತಾಶ್ರಯದಲ್ಲಿ ಜುಲೈ ಒಂದರ ಗುರುವಾರ ಸಂಜೆ ಗಂಗೋತ್ರಿ ಲೇಔಟ್ ನ ಯೂತ್ ಹಾಸ್ಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ಕೊರೋನಾ ದಿಂದಾಗಿ ಸಾಕಷ್ಟು ವೈದ್ಯರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತಾಗಿದೆ. ವೈದ್ಯರ ಸೇವೆ ಎಲ್ಲಾ ಸೇವೆಗಿಂತ ಮಿಗಿಲು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯೂತ್ ಹಾಸ್ಟೆಲ್ ವ್ಯವಸ್ಥಾಪಕರಾದ ಡಾ.ಪ್ರಸಾದ್ ಅವರು ಮಾತನಾಡಿ, ವೈದ್ಯರ ಮೇಲೆ ಕೆಲವರು ಅಜ್ಞಾನದಿಂದ ಹಲ್ಲೆಯನ್ನು ನಡೆಸುತ್ತಿದ್ದು, ಅಂಥವರು ವೈದ್ಯರ ನಿಸ್ವಾರ್ಥ ಸೇವೆಯನ್ನು ನೆನಪಿಸಿಕೊಳ್ಳುವ ಮೂಲಕ ಇಂತಹ ಕೃತಿಗಳಿಗೆ ಕಡಿವಾಣ ಹಾಕಬೇಕೆಂದರು.
ವೈದ್ಯರಿಗೆ ಒಂದು ದಿನ ಸನ್ಮಾನ ಮಾಡಿ ನಮ್ಮ ನಿಮ್ಮೆಲ್ಲರ ಪ್ರೀತಿ ತೋರಿಸುವ ಬದಲು ಅವರನ್ನು ಗೌರವಿಸಿ ವರ್ಷದ 365 ದಿನಗಳು ಪ್ರೀತಿಯಿಂದ ಕಾಣಬೇಕು ಅದು ನಮ್ಮೆಲ್ಲರ ಕರ್ತವ್ಯ ಜವಾಬ್ದಾರಿ ಕೂಡ ಎಂದರು
ನಂತರ ಮಾತನಾಡಿದ ವಿಕಾಸ್ ಶಾಸ್ತ್ರಿ ವೈದ್ಯರಿಗೆ ಒಂದು ದಿನ ಸನ್ಮಾನ ಮಾಡಿ ನಮ್ಮ ನಿಮ್ಮೆಲ್ಲರ ಪ್ರೀತಿ ತೋರಿಸುವ ಬದಲು ಅವರನ್ನು ಗೌರವಿಸಿ ವರ್ಷದ 365 ದಿನಗಳು ಪ್ರೀತಿಯಿಂದ ಕಾಣಬೇಕು ಅದು ನಮ್ಮೆಲ್ಲರ ಕರ್ತವ್ಯ ಜವಾಬ್ದಾರಿ ಕೂಡ ಎಂದರು.ಇದೇ ಸಂದರ್ಭ ವೈದ್ಯಕೀಯ ಕ್ಷೇತ್ರದಲ್ಲಿ ಕೋರೋನ ವಾರಿಯರ್ಸ್ ಗಳಾಗಿ ಸೇವೆಸಲ್ಲಿಸಿದ ಮಧುಮೇಹ ತಜ್ಞ ವೈದ್ಯರಾದ ಡಾ. ಎ.ಆರ್. ರೇಣುಕಾಪ್ರಸಾದ್ ಹಾಗೂ ಶ್ವಾಸಕೋಶ ತಜ್ಞವೈದ್ಯರು ಗಳಾದ ಡಾ. ಅವಿನಾಶ್ ಆರ್, ಡಾ. ಕೆ.ಮಧು, ಆಯುರ್ವೇದ ತಜ್ಞ ವೈದ್ಯರಾದ ಡಾ. ನವೀನ್ ಕುಮಾರ್ ಹೆಚ್. ಎನ್. ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಮಹೇಶ್ ನಾಯಕ್ ಆರೋಗ್ಯ ಕಿರಣ ಸಂಪಾದಕ ಎನ್. ಅನಂತ,ಕಿಶೋರ್ ಮಂಜುನಾಥ ಬಿ.ಆರ್, ಪ್ರದೀಪ್, ತೇಜಸ್, ಖ್ಯಾತ ಚೆಸ್ ಆಟಗಾರ ವಿಜಯೇಂದ್ರ, ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.
.