ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೋವಿಡ್- 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಹಾಗೂ ಕೋವಿಡ್ ಸೋಂಕಿತ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾಕೇರ್ ಆಸ್ಪತ್ರೆ ಮತ್ತು ಪಿ.ಕೆ.ಟಿ.ಬಿ, ಹಾಗೂ ಸಿ.ಡಿ, ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ವೈದ್ಯರ ಅಗತ್ಯತೆ ಇರುವುದರಿಂದ ತಾತ್ಕಾಲಿಕವಾಗಿ 03 ರಿಂದ 6 ತಿಂಗಳ ಅವಧಿಗೆ ಅಥವಾ ಕೋಡ್ ಪರಿಸ್ಥಿತಿ ಸುಧಾರಿಸುವವರೆ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಆಯೋಜಿಸಲಾಗಿದೆ.
ಹುದ್ದೆಗಳ ವಿವರ :
ಸೀನಿಯರ್ ರೆಸಿಡೆಂಟ್ಸ್ ( ಮೆಡಿಶಿನ್) ನಲ್ಲಿ 18 ಹುದ್ದೆಗಳಿದ್ದು, ಜನರಲ್ ಮೆಡಿಸನ್ ನಲ್ಲಿ ಎಂ.ಡಿ ವಿದ್ಯಾರ್ಹತೆ, ಸೀನಿಯರ್ ರೆಸಿಡೆಂಟ್ಸ್ (ಪಲ್ಮೋ)ನಲ್ಲಿ 14 ಹುದ್ದೆಗಳಿದ್ದು, ಪಲ್ಮನರಿ ಮೆಡಿಶಿನ್ ನಲ್ಲಿ ಎಂ.ಡಿ ವಿದ್ಯಾರ್ಹತೆ,ಸೀನಿಯರ್ ರೆಸಿಡೆಂಟ್ಸ್ (ಅನೆಸ್ತೇಶಿಯಾ) ನಲ್ಲಿ 22 ಹುದ್ದೆಗಳಿದ್ದು, ಅನೆಸ್ತೇಶಿಯಾಲಜಿಯಲ್ಲಿ ಎಂ.ಡಿ ವಿದ್ಯಾರ್ಹತೆ, ಜೂನಿಯರ್ ರೆಸಿಡೆಂಟ್ಸ್ ನಲ್ಲಿ 29 ಹುದ್ದೆಗಳಿದ್ದು, ಎಂ.ಬಿ.ಬಿ.ಎಸ್ ಹಾಗೂ ನರ್ಸಿಂಗ್ ಆಫಿಸರ್ ನಲ್ಲಿ 159 ಹುದ್ದೆಗಳಿದ್ದು, ನರ್ಸಿಂಗ್ ನಲ್ಲಿ ಜಿ.ಎನ್.ಎ ಅಥವಾ ಬಿ.ಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ನೇರ ಸಂದರ್ಶನವನ್ನು ಮೇ 24 ರಂದು ಬೆಳಗ್ಗೆ 10.30 ಗಂಟೆಗೆ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಮತ್ತು ಡೀನ್,ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸಂದರ್ಶನದ ವೇಳೆ ಮೂಲ ದಾಖಲಾತಿಗಳು ಮತ್ತು ಛಾಯಾ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಮೈಸೂರು ವೈದ್ಯಕೀಯ ಕಾಲೇಜಿನ ಸಂಶೋಧನಾ ಸಂಸ್ಥೆಯ ನಿರ್ದೇಶಕರು ಮತ್ತು ಡೀನ್ ಅವರುತಿಳಿಸಿದ್ದಾರೆ.