11 ನವೆಂಬರ್ 2020: ವಿಶ್ವದ ಅತಿ ದೊಡ್ಡ ಅಗರಬತ್ತಿಗಳ ತಯಾರಿಕಾ ಸಂಸ್ಥೆಯಾಗಿರುವ ಎನ್.ರಂಗಾರಾವ್ & ಸನ್ಸ್‍ನ ಸೈಕಲ್ ಪ್ಯೂರ್ ಅಗರಬತ್ತೀಸ್ ಪವಿತ್ರವಾದ ದೀಪಾವಳಿ ಹಬ್ಬದ ಪೂಜೆಗೆಂದೇ ವಿಶೇಷವಾದ ವೇದಿಕ್ ಸಂಪೂರ್ಣ ಲಕ್ಷ್ಮಿ ಪೂಜಾ ಪ್ಯಾಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದೇಶೀಯವಾದ ಬ್ರ್ಯಾಂಡ್ ಆಗಿರುವ ಸೈಕಲ್ ಪ್ಯೂರ್ ಅಗರಬತ್ತೀಸ್, ಈ ಹಬ್ಬದ ಸಂಭ್ರಮವನ್ನು ಸುರಕ್ಷಿತವಾಗಿ ಆಚರಣೆ ಮಾಡಲು ಪೂಜೆಗೆ ಅಗತ್ಯವಾದ ಎಲ್ಲಾ ಪರಿಕರಗಳನ್ನು ಈ ಪ್ಯಾಕ್‍ನಲ್ಲಿ ಸೇರ್ಪಡೆ ಮಾಡಿದೆ.
ಈ ವೇದಿಕ್ ಸಂಪೂರ್ಣ ಲಕ್ಷ್ಮಿ ಪ್ಯಾಕ್ ಅನ್ನು ಭಕ್ತರ ಎಲ್ಲಾ ರೀತಿಯ ಪೂಜಾ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಪರಿಪೂರ್ಣವಾದ ಪೂಜೆಯ ಅನುಭವವನ್ನು ಅವರಿಗೆ ನೀಡಲಿದೆ. ಮನೆಯಿಂದಲೇ ಪ್ರಾರ್ಥಿಸಿ ಎಂಬುವ ಸಂದೇಶದೊಂದಿಗೆ ಬ್ರ್ಯಾಂಡ್, ಸಾಂಕ್ರಾಮಿಕದ ಈ ಸಮಯದಲ್ಲಿಯೂ ಮನೆಯಲ್ಲಿಯೇ ಸುರಕ್ಷಿತವಾಗಿ ಆಚರಣೆಯನ್ನು ಸಾಂಪ್ರದಾಯಿಕವಾಗಿ ಪೂರ್ಣಗೊಳಿಸುವ ಉಪಕ್ರಮವನ್ನು ಈ ಮೂಲಕ ಪರಿಚಯಿಸಿದೆ.
ಸಂಪೂರ್ಣ ಲಕ್ಷ್ಮಿ ಪೂಜಾ ಪ್ಯಾಕ್ ಬಗ್ಗೆ ಮಾತನಾಡಿದ ಸೈಕಲ್ ಪ್ಯೂರ್ ಅಗರಬತ್ತೀಸ್‍ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಅವರು, “ಈ ವರ್ಷ ಸಾಂಕ್ರಾಮಿಕದೊಂದಿಗೆ ನಮ್ಮೆಲ್ಲರಿಗೂ ಒಂದು ರೀತಿಯ ಕಠಿಣವಾದ ಸಮಯವನ್ನು ತಂದಿಟ್ಟಿದೆ. ಹೊಸ ಸ್ಟೈಲ್‍ನಲ್ಲಿ ಹಬ್ಬಗಳ ಅಚರಣೆಯನ್ನು ಮಾಡಲಾಗುತ್ತಿದೆ. ನಮ್ಮ ಗ್ರಾಹಕರಿಗೆ ಅವರು ಅವಲಂಬಿಸಬಹುದಾದ ಗುಣಮಟ್ಟದ ಉತ್ಪನ್ನಗಳನ್ನು ನಾವು ನೀಡುವ ಸಮಯ ಇದಾಗಿದೆ ಮತ್ತು ಈ ಮೂಲಕ ಅವರು ಪೂಜಾ ಸಂಪ್ರದಾಯಗಳನ್ನು ತಡೆರಹಿತವಾದ ರೀತಿಯಲ್ಲಿ ಮುಂದುವರಿಸಬಹುದಾಗಿದೆ. ನಮ್ಮ ಅತ್ಯುತ್ತಮವಾದ ವೇದಿಕ್ ಸಂಪೂರ್ಣ ಲಕ್ಷ್ಮಿ ಪೂಜಾ ಪ್ಯಾಕ್‍ನ ಮೂಲಕ ನಾವು ಗ್ರಾಹಕರಿಗೆ ಉತ್ತಮವಾದ ಅನುಭವವನ್ನು ನೀಡಲಿದ್ದೇವೆ ಮತ್ತು ಈ ಸಾಂಕ್ರಾಮಿಕದ ಸಮಯದಲ್ಲಿ ಸಾಂಪ್ರದಾಯಿಕ ಮಾರ್ಗಗಳಲ್ಲಿ ಪೂಜೆಯನ್ನು ನೆರವೇರಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ’’ ಎಂದರು.
“ಗುಣಮಟ್ಟದ ಅಗರಬತ್ತಿಗಳೊಂದಿಗೆ ರಾಷ್ಟ್ರಕ್ಕೆ ಸುದೀರ್ಘವಾದ ಸೇವೆ ಸಲ್ಲಿಸಿದ ನಂತರ ಇದೀಗ ನಾವು ನಮ್ಮ ಗ್ರಾಹಕರಿಗೆ ವ್ಯಾಪಕವಾದ ರೀತಿಯಲ್ಲಿ ಸಂಪೂರ್ಣ ಪೂಜಾ ಪರಿಹಾರಗಳನ್ನು ಒದಗಿಸಲು ನಮಗೆ ಸಂತೋಷವಾಗುತ್ತಿದೆ. ನಮ್ಮ ಗ್ರಾಹಕರ ಅಗತ್ಯತೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಉತ್ಪನ್ನಗಳ ಶುದ್ಧತೆಗೆ ಆದ್ಯತೆ ನೀಡುತ್ತಾ ಬಂದಿದ್ದೇವೆ. ಈ ಹಬ್ಬವನ್ನು ಆಚರಿಸುತ್ತಿರುವ ಪ್ರತಿಯೊಬ್ಬರೂ ಅತ್ಯಂತ ಶ್ರೀಮಂತವಾದ ದೀಪಾವಳಿಯನ್ನು ಆಚರಿಸುವಂತೆ ನಾವು ಬಯಸುತ್ತೇವೆ. ವೈದಿಕ ಸಂಪೂರ್ಣ ಲಕ್ಷ್ಮಿ ಪೂಜಾ ಕಿಟ್‍ನೊಂದಿಗೆ ತಮ್ಮ ಮನೆಗೆ ಅನುಗ್ರಹಿಸಬೇಕೆಂದು ಆಶಿಸುತ್ತೇವೆ. ನಿಮ್ಮ ಮನೆಗಳನ್ನು ಸಂಪತ್ತು ಮತ್ತು ಸಮೃದ್ಧಿಯಿಂದ ದಯಪಾಲಿಸಲು ದೇವರಲ್ಲಿ ಪ್ರಾರ್ಥಿಸುತ್ತೇವೆ’’ ಎಂದು ಅವರು ಹೇಳಿದರು.
ವಿದ್ವಾಂಸರು, ಪುರೋಹಿತರ ಮಾರ್ಗದರ್ಶನ ಮತ್ತು ಪವಿತ್ರ ಗ್ರಂಥಗಳ ಸಂಯೋಜನೆಯೊಂದಿಗೆ ಬಹಳ ಎಚ್ಚರಿಕೆ ವಹಿಸಿ ಈ ಪ್ಯಾಕ್ ಅನ್ನು ಸಿದ್ಧಪಡಿಸಲಾಗಿದೆ. ಇದು ಶ್ಲೋಕಗಳ ಜೊತೆಗೆ ಸರಿಯಾದ ವಿಧಾನದೊಂದಿಗೆ ಲಕ್ಷ್ಮಿ ಪೂಜೆಯನ್ನು ನಿರ್ವಹಿಸಲು ಹಂತ ಹಂತದ ಮಾರ್ಗದಶಿಯನ್ನೂ ಒಳಗೊಂಡಿದೆ.
ಈ ಪೂಜಾ ಕಿಟ್ ಭಕ್ರರಿಗೆ ಪೂಜೆಯನ್ನು ಶ್ರದ್ಧಾಪೂರ್ವಕವಾಗಿ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಮಾಡಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ವೇದಿಕ್ ಶೈಲಿಯ ಐಶ್ವರ್ಯ ಲಕ್ಷ್ಮಿ, ಲಕ್ಷ್ಮಿ ವಿಗ್ರಹ, ಗಣೇಶ ಮೂರ್ತಿ, ತೋರಣ, ಕಪ್ ಸಾಂಬ್ರಾಣಿ, ಅಗರಬತ್ತಿ ಹೋಲ್ಡರ್, ದೀಪ, ಬೆಂಕಿಕಡ್ಡಿ ಪೊಟ್ಟಣ, ಗಣೇಶ ಮೂರ್ತಿಗೆ ಪೀಠ, ಹರಿದ್ರಾ, ಕುಂಕುಮ, ಗಂಧದ ಟ್ಯಾಬ್ಲೆ, ಧೂಪ, ಪೂಜಾಫಲ, ಗೆಜ್ಜೆ ವಸ್ತ್ರ ಸಣ್ಣದು, ಕಂಚಿಕಿ, ಯಜ್ಞಪವೀಠ, ವಿಶೇಷ ಅಗರಬತ್ತಿ, ವಿಶೇಷ ಕ್ಯಾಂಡಲ್, ಗಂಗಾಜಲ(ರೀಪ್ಯಾಕ್ಡ್), ಕಂಕಣ, ಕಿರುಹೊತ್ತಿಗೆ, ಆಡಿಯೋ ಸಿಡಿ ಇರಲಿವೆ.
ಈ ಓಂ ಶಾಂತಿ ಸಂಪೂರ್ಣ ಲಕ್ಷ್ಮಿ ಪೂಜಾ ಪ್ಯಾಕ್‍ನ ಬೆಲೆ 1200 ರೂಪಾಯಿಗಳಾಗಿದ್ದು, ನಮ್ಮ ಮೈಸೂರು ಮತ್ತು ಬೆಂಗಳೂರಿನಲ್ಲಿರುವ ಸೈಕಲ್.ಇನ್ ಸ್ಟೋರ್‍ನಲ್ಲಿ ಖರೀದಿಸಬಹುದಾಗಿದೆ. ಇದಲ್ಲದೇ, ಸೈಕಲ್‍ನ ವೆಬ್‍ಸೈಟ್ ತಿತಿತಿ.ಛಿಥಿಛಿಟe.iಟಿ ನಲ್ಲಿಯೂ ಖರೀದಿಸಬಹುದಾಗಿದೆ.

By admin