ಚಾಮರಾಜನಗರ: ಜಿಲ್ಲಾ ನೂತನಶಸ್ತ್ರ ಚಿಕಿತ್ಸಕರಾಗಿ ನೇಮಕಗೊಂಡಿರುವ ಡಾ.ಎಚ್.ಎಸ್.ಕೃಷ್ಣಪ್ರಸಾದ್ ಅವರನ್ನು ಚಾಮರಾಜನಗರ ಸರಕಾರಿವೈದ್ಯಕೀಯ ಬೋಧನಾ ಆಸ್ಪತ್ರೆಯ ಕಚೇರಿಯಲ್ಲಿ ನಿಜಧ್ವನಿಸೇನಾಸಮಿತಿ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.
ನೂತನ ಆಸ್ಪತ್ರೆ ಜಿಲ್ಲಾಕೇಂದ್ರದಿಂದ ೭ಕಿಮೀ ದೂರದಲ್ಲಿದ್ದು, ಜನರಿಗೆ ಎಲ್ಲ ಸಮಯದಲ್ಲೂ ಸೂಕ್ತಚಿಕಿತ್ಸೆ ದೊರೆಯಬೇಕು ಎನ್ನುವ ದೃಷ್ಟಿಯಿಂದ ಆಸ್ಪತ್ರೆಯಲ್ಲಿ ೨೪*೭ ಚಿಕಿತ್ಸಾಸೌಲಭ್ಯ ವ್ಯವಸ್ಥೆ ಮಾಡಬೇಕು, ಜಿಲ್ಲಾಸ್ಪತ್ರೆಯಲ್ಲೂ
ಹೊರರೋಗಿ ವಿಭಾಗ ಆರಂಭಿಸಬೇಕು, ಸಾರ್ವಜನಿಕರ ಜತೆ ವೈದ್ಯಸಿಬ್ಬಂದಿ ಉತ್ತಮವಾಗಿ ಸಹಕರಿಸುವಂತೆ ತಾವು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ನಿಜಧ್ವನಿಸೇನಾಸಮಿತಿಅಧ್ಯಕ್ಷ ಸಿ.ಎನ್.ಗೋವಿಂದರಾಜು, ಗೌರವಾಧ್ಯಕ್ಷ ಬಂಗಾರಸ್ವಾಮಿ, ತಾಲ್ಲೂಕು ಅಧ್ಯಕ್ಷ ಮರಿಯಾಲದ ಹುಂಡಿ ಕುಮಾರ್ ಅಖಿಲ ಕರ್ನಾಟಕ ಕನ್ನಡಮಹಾಸಭೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಖಜಾಂಚಿ ಸಣ್ಣಮಾದಯ್ಯ ಹಾಜರಿದ್ದರು.