ಸರಗೂರು ತಾಲ್ಲೂಕು ಹಂಚೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಬೆದ್ದಲಪುರ ಗ್ರಾಮದಲ್ಲಿ ಏಪ್ರಿಲ್ ೧೯ರಕದು ಬೆಳಗ್ಗೆ ೧೦.೩೦ಕ್ಕೆ ಜಿಲ್ಲಾಧಿಕಾರಗಳ ನಡೆ ಹಳ್ಳಿ ಯ ಕಡೆ ಕಾರ್ಯಕ್ರಮ , ಜನ ಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯರಾದ ಬೆದ್ದಲಪುರ ಕರೀಗೌಡ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯರಾಜು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ತಹಶೀಲ್ಧಾರ್ ಚಲುವರಾಜು, ತಾ.ಪಂ.ಇಓ ರಾಜೇಶ್ ಹೆರಾಲ್ಡ್ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ . ಪಂಚಾಯಿತಿ ಸದಸ್ಯರೆಲ್ಲರೂ ಆಗಮಿಸಲಿದ್ದಾರೆ. ಹೀಗಾಗಿ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಸ್ಥರು ತಮ್ಮ ಹತ್ತು ಹಲವು ಸಮಸ್ಯೆ ಅಹವಾಲುಗಳನ್ನು ತಂದು ಪರಿಹರಿಸಿಕೊಳ್ಳಬೇಕೆಂದು ಕರೀಗೌಡ ಅವರು ಮನವಿ ಮಾಡಿದ್ದಾರೆ.