ಹರದನಹಳ್ಳಿ: ಹರದನಹಳ್ಳಿಯ ದಿವ್ಯ ಲಿಂಗೇಶ್ವರ ದೇವಸ್ಥಾನ ಹಾಗೂವೇಣುಗೋಪಾಲಸ್ವಾಮಿ ದೇವಸ್ಥಾನ ಮತ್ತು ವೆಂಕಟಯ್ಯನ ಛತ್ರದ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಸರ್ಕಾರದ ಆದೇಶದಂತೆ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡೆಸಿ ಮಹಿಳೆಯರಿಗೆ ಅರಿಶಿನ, ಕುಂಕುಮ, ಮತ್ತು ಬಳೆಗಳ್ಳನ್ನು ವಿತರಿಸಿದರು.ವೆಂಕಯ್ಯನಛತ್ರ ಗ್ರಾಮದ ವೆಂಕಟರಮಣ ಸ್ವಾಮಿ ದೇವಸ್ಥಾನ ಮತ್ತು ಹರದನಹಳ್ಳಿ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿಯೂ ಸಹ ಅರಿಶಿನ, ಕುಂಕುಮ, ಮತ್ತು ಬಳೆಯನ್ನು ವಿತರಿಸಲಾಯಿತು.
ಹರದನಹಳ್ಳಿ ದಿವ್ಯ ಲಿಂಗೇಶ್ವರ ದೇವಸ್ಥಾನ,ಹಾಗೂ ವೇಣುಗೋಪಾಲಸ್ವಾಮಿ ದೇವಸ್ಥಾನ,ಮತ್ತು ವೆಂಕಟಯ್ಯನಛತ್ರ ಗ್ರಾಮದ ವೆಂಕಟರಮಣ ಸ್ವಾಮಿದೇವಸ್ಥಾನದಲ್ಲಿ ಸರ್ಕಾರದ ಆದೇಶ ದಂತೆ ಮುತ್ತೈದೆ ಮಹಿಳೆಯರಿಗೆ ಅರಿಶಿನ,ಕುಂಕುಮ,ಮತ್ತು ಬಳೆಗಳನ್ನುವಿತರಿಸಲಾಯಿತ್ತು.ಈ ಸಂದರ್ಭದಲ್ಲಿ ನಾಡಕಛೇರಿಯ ಉಪ ತಹಸೀಲ್ದಾರ್ ಮಹದೇವಪ್ಪ ಹಾಗೂ ಹೋನ್ನಳಿ ಗ್ರಾಮಲೇಕ್ಕೀರಾದ ವೆಂಕಟೇಶ್ ,ಗ್ರಾಮಸಹಾಯಕರಾದ ಮಹದೇವಸ್ವಾಮಿ,ನೀಲಯ್ಯ ಮತ್ತಿತರರು ಇದ್ದಾರೆ.