ಮೈಸೂರು :ಡಿ.(೩೦) ಕಬಡ್ಡಿ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಸಾಮಾಜಿಕ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವಂತೆ ಆಗಬೇಕು ಎಂದು ವಿಶ್ವೇಶ್ವರ ಆರಾದ್ಯ ಅವರು ಹೇಳಿದರು. ಮೈಸೂರಿನ ಮಾನಸ ಗಂಗೋತ್ರಿ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ ಕಬಡ್ಡಿ ಆಟಗಾರರಿಗೆ ಸುವರ್ಣ ಬೆಳಕು ಫೌಂಡೇಷನ್ ನಿಂದ ನೀ ಕ್ಯಾಪ್ ವಿತರಣೆ ಮಾಡಿದರು.

ಬಳಿಕ ಮಾತನಾಡಿದ ಸುವರ್ಣ ಬೆಳಕು ಫೌಂಡೇಷನ್’ನ . ಅಧ್ಯಕ್ಷರಾದ ಮಹೇಶ್ ನಾಯಕ್ ಅವರು ಕಾರ್ಯಕ್ರಮದ ಕುರಿತು ಕಬಡ್ಡಿ ಲೀಗ್ ಪ್ರಸ್ತುತ ಎಲ್ಲರ ಮನಸ್ಸು ಗೆದ್ದಿದ . ಇದು ಗ್ರಾಮೀಣ ಭಾಗಕ್ಕೆ ಸಿಕ್ಕ ದೊಡ್ಡ ಗೌರವ. ಈ ವರ್ಷ ಕಳೆದ ವರ್ಷಕ್ಕಿಂತ ಶೇಕಡ ೬೦ ರಷ್ಟು ವೀಕ್ಷಕರ ಜನ ಮನ ಗೆದಿದ್ದೆ ಹಾಗೂ ನಗರದಲ್ಲಿ ಅತೀ ಹೆಚ್ಚು ಯುವಕರು ತಮ್ಮ ಮನೆ ಮುಂದೆ ಹಾಗೂ ಆಟದ ಮೈದಾನದಲ್ಲಿ ಆಟ ಆಡಲು ಒಲುವು ತೋರುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಕಬಡ್ಡಿ ಲೀಗ್ ಮೇಲೆ ಯುವಕರು ಅಭಿಮಾನಿಗಳಾಗಿದ್ದಾರೆ.

ಆದ್ದರಿಂದ್ದ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಕಬಡ್ಡಿ ಆಟಗಾರರೇ ಹೆಚ್ಚು ಮೇಲುಗೈ ಸಾಧನೆ ಮಾಡುತ್ತಿದ್ದಾರೆ, ಆದರೆ ನಮ್ಮ ಜನ ಪ್ರತಿನಿಧಿಗಳು ದೊಡ್ಡ ಮಟ್ಟದ ಕ್ರೀಡಾ ಕ್ರಾರ್ಯಕ್ರಮಗಳಲ್ಲಿ, ಕ್ರೀಡಾಪಟುಗಳಿಗೆ ಉತ್ಸಾಹ ತುಂಬುತ್ತಾgಯೇ ಹೊರುತು ಯಾವುದೇ ಪ್ರಯೋಜನ ವಾಗುತ್ತಿಲ್ಲ ಆದರಿಂದ್ದ ಉತ್ಸಾಹಿ ಕ್ರೀಡಾಪಟುಗಳಿಗೆ ಬೆಳಕಿಗೆ ತರಬೇಕು ಇಲ್ಲವಾದಲಿ ಕತ್ತಲೆ ಕಡೆಗೆ ಹೋಗುವಂತಾಗಿದೆ. ಆದರಿಂದ್ದ ನಮ್ಮ ಕರ್ನಾಟಕದವರು ವಿಶ್ವ ಮಟ್ಟದಲ್ಲಿ ಹೆಸರು ಮಾಡಲು ಕಷ್ಟಪಡಬೇಕಾಗಿಲ. ಕರ್ನಾಟಕ ಸರ್ಕಾರ ಇವರನ್ನು ಗುರುತಿಸಿ ಕರ್ನಾಟಕದ ಕಬಡ್ಡಿ ಕಲಿಗಳಿಗೆ ಮುಂದಿನ ದಿನಗಳಲ್ಲಿ ಇವರಿಗೆ ಇನ್ನೂ ಹೆಚ್ಚು ಸರ್ಕಾರದಿಂದ ಇವರಿಗೆ ಸಹಕಾರ ಅಗತ್ಯವಿದೆ ಎಂದು ಕಾರ್ಯಕ್ರಮದಲ್ಲಿ ಹೇಳಿದರು.

ಬಳಿಕ ಮಾತಾನಾಡಿದ ರವಿ, ಟಿ.ಎಸ್. ಅವರು ಕ್ರೀಡಾ ಮಕ್ಕಳ ಆರೋಗ್ಯವಿಮೆಯ ಕುರಿತು ಜಾಗೃತಿ ಮೂಡಿಸಿದರು ಮತ್ತು ಕಬಡ್ಡಿ ಕ್ರೀಡಾಮಕ್ಕಳಿಗೆ ಮುಂದಿನ ದಿನಗಳಲ್ಲಿ ನೆರವಾಗುವಂತೆ ಭರವಸೆಯನ್ನಿತ್ತರು. ಅಧ್ಯಕ್ಷತೆ ವಹಿಸಿ ಮಾತಾನಾಡಿದ ಪ್ರೊ.ಎಸ್ ಶ್ರೀಕಂಠಸ್ವಾಮಿ, ಅವರು ಕ್ರೀಡಾಪಟುಗಳಿಗೆ “ಗ್ರಾಮೀಣ ಪ್ರದೇಶದ ಬಡ ಕ್ರೀಡಾಪಟುಗಳಿಗೆ ಸಂಘ ಸಂಸ್ಥೆಗಳು ಸ್ವತಃ ಮುಂದೆ ಬಂದು ಪ್ರೋತ್ಸಾಹಿಸುವುದು ಒಳ್ಳೆಯ ಬೆಳವಣಿಗೆ ಮತ್ತು ಅದನ್ನು ಸಮರ್ಪಕವಾಗಿ ಬಳಸಿಕೊಂಡು ನಿಮ್ಮ ಕ್ರೀಡಾ ಸಾಧನೆ ಉಜ್ವಲವಾಗಿರಲಿ ಎಂದು ಭವಿಷ್ಯದ ಒಳಿತನ್ನು ಕ್ರೀಡಾಪಟುಗಳಿಗೆ ತಿಳಿಸಿದರುಕಾರ್ಯಕ್ರಮದಲ್ಲಿ ಸಂಸ್ಥಾಪಕರು ಮೈಸೂರು ಮೆಡಿಕಲ್ ಸಿಸ್ಟಮ್‌ಪ್ರಭುಶಂಕರ್, ಅವಿನಾಶ್, ಸಮಾಜ ಸೇವಕರು ಶ್ರೀ, ವಚನ ಕುಮಾರಸ್ವಾಮಿ, ಹಾಗೂ ಬಸವರಾಜೇಂದ್ರ ಸ್ವಾಮಿ, ರವಿ ಭಗೀರಥ, ಮಂಜುನಾಥ, ಚಿ.ಮ.ಬಿ.ಆರ್. ಎಂ.ಆರ್ ಇಂದ್ರಾಣಿ,ಲಕ್ಷ್ಮಿಕಾಂತ್, ಅಯ್ಯು, ಅಕ್ಷಯ ಹಾಗೂ ಇನ್ನೀತರರು ಹಾಜರಿದ್ದರು.