ಮೈಸೂರು; ಸಂಕ್ರಾಂತಿ ಹಬ್ಬವನ್ನು ನಗರದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೆಲವರು ಮನೆಯಲ್ಲಿ ಪೂಜೆ ಪುನಸ್ಕಾರದೊಂದಿಗೆ ಹೊಸಬಟ್ಟೆ ತೊಟ್ಟು, ಹೆಣ್ಣು ಮಕ್ಕಳು ಎಳ್ಳು ಬೆಲ್ಲ ವನ್ನು ಮನೆಮನೆಗೆ ಬೀರುತ್ತಿದ್ದಾರೆ.ಈ ನಡುವೆ ತ್ರಿವೇಣಿ ಗೆಳೆಯರ ಬಳಗದಿಂದ ನಗರದ ತ್ರಿವೇಣಿ ವೃತ್ತದಲ್ಲಿ ವಾರ್ಡ್ ನಂ 35 ರ ಮಹನಗರ ಪಾಲಿಕೆಯ ಮಹಿಳಾ ಪೌರಕಾರ್ಮಿಕರರಿಗೆ ಸೀರೆ ವಿತರಣೆ ಮಾಡಿ ಎಳ್ಳು ಬೆಲ್ಲ ಕೊಟ್ಟು ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್ ಜಿ ಗಿರಿದರ್ ಜೀ.ಬಾನುಪ್ರಕಾಶ್. ಸ್ವಾಮಿ ಗೌಡ. ವೇಲು.ಬಿ ಆನಂದ ನಾಗೇಶ್.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ನಿರ್ದೇಶಕರಾದ ರೇಣುಕಾ ರಾಜ್, ಉಮೇಶ್ ಶಂಕ.ಶಿವು ಮಸಳ್ಳಿ.ಕಿರಣ್.ಮಹೇಶ್ ಮುನಿಯಪ್ಪ.ಮಲ್ಲಿಕಾರ್ಜುನ .ವಾಣಿ.ಹಾಗೂ ತ್ರಿವೇಣಿ ಗೆಳೆಯರ ಬಳಗದ ಸದಸ್ಯರು ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು…