ಮೈಸೂರು: – ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಡಶಾಲೆ ಹಿರಿಯ ವಿದ್ಯಾರ್ಥಿಗಳ ವೇದಿಕೆಯಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಸಮವಸ್ತ್ರ ವಿತರಿಸಲಾಯಿತು.ಇದೇ ಸಂದರ್ಬದಲ್ಲಿ ಮಾತನಾಡಿದ  ಶಾಲೆಯ ಹಿರಿಯ ವಿದ್ಯಾರ್ಥಿ ಅಮೃತ್ ರಾಜ್ ಅರಸು,ಅವರು ಜ್ಞಾನದ ಅಮೃತವನ್ನು ಪಡೆಯಲು ಶಿಕ್ಷಣ ಒಂದು ಸಾಧನವಷ್ಟೇ. ಒಂದು ಮಗುವಿಗೆ ಪರಿಪೂರ್ಣ ಅರಿವು ಪಡೆಯಲು ಉತ್ತಮ ಗುರು ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿ ಯನ್ನು ಪೋಷಕರು ಮನೆಯಲ್ಲಿ ಕಲಿಸುವ ಮೂಲಕ ಮಕ್ಕಳನ್ನು ಸಂಸ್ಕಾರವಂತ ರನ್ನಾಗಿ ಬೆಳೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ಹಾಗು  ಮುನಿಗೋಪಾಲ್ ರಾಜ್,ಬಸವರಾಜು,ಕೆ.ಎಂ.ಪಿ.ಕೆ ಟ್ರಸ್ಟ್ ಅಧ್ಯಕ್ಷರು ವಿಕ್ರಂ ಅಯ್ಯಂಗರ್, ಮತ್ತು ಸುವರ್ಣ ಬೆಳಕು ಫೌಂಢೇಷನ್ ಅಧ್ಯಕ್ಷರು ಮಹೇಶ್ ನಾಯಕ್,ಶರತ್ ಕುಮಾರ್, ಸ್ನೇಹ ಬಳಗದ ಗೌರವ ಅಧ್ಯಕ್ಷರು, ರವಿ ಅಧ್ಯಕ್ಷರು ಚಾಮುಂಡೇಶ್ವರಿ ಮಾಲೀಕರು ಹಾಗೂ  ಚಾಲಕ ಸಂಘ ಮೈಸೂರು ಹಾಗೂ ಶಾಲಾ ಶಿಕ್ಷಕರು ಸಿಬ್ಬಂದಿಗಳು ಭಾಗವಹಿಸಿದ್ದರು.