ಗುಂಡ್ಲುಪೇಟೆ: ಉನ್ನತ ಶಿಕ್ಷಣ, ಅನಾರೋಗ್ಯ ಪೀಡಿತರು, ಅಂಗವಿಕಲರು ಸೇರಿದಂತೆ ಅಂತ್ಯ ಸಂಸ್ಕಾರಕ್ಕೆ ತಾಲೂಕಿನ ಹಂಗಳ ಗ್ರಾಮ ಪಂಚಾಯಿತಿ ವತಿಯಿಂದ ಸಹಾಯ ಧನದ ಚೆಕ್ ಅನ್ನು ಗ್ರಾಪಂ ಅಧ್ಯಕ್ಷ ಹೆಚ್.ಎನ್.ಮಲ್ಲಪ್ಪ ವಿತರಣೆ ಮಾಡಿದರು.

ಗ್ರಾಪಂ ಕಚೇರಿಯಲ್ಲಿ ನಡೆದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 5 ಸಾವಿರ ರೂ., ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ಸಾವಿರ, ಅನಾರೋಗ್ಯ ಪೀಡಿತರಿಗೆ 5 ಸಾವಿರ, ಅಂಗವಿಕಲರಿಗೆ 5 ಸಾವಿರ, ಅಂತ್ಯ ಸಂಸ್ಕಾರಕ್ಕೆ 2 ಸಾವಿರ ರೂ. ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಹೆಚ್.ಎನ್.ಮಲ್ಲಪ್ಪ, ಸರ್ಕಾರವು ಬಡವರು, ನಿರಾಶ್ರಿತರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ಗೀತಾ, ಸದಸ್ಯ ಮಹೇಶ್, ಸದಸ್ಯರಾದ ವೃಷಬೇಂದ್ರ, ಹೆಚ್.ಎಂ.ನಂದೀಶ್, ದೊರೆಸ್ವಾಮಿ, ಗೌರಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಂತಮಲ್ಲಪ್ಪ, ಕಾಡಾ ಮಾಜಿ ಅಧ್ಯಕ್ಷ ಹೆಚ್.ಎಸ್.ನಂಜಪ್ಪ, ಮುಖಂಡರಾದ ಗಂಗಪ್ಪ, ಡಿ.ಬಿ.ಶಿವಕುಮಾರ್, ಗೋವಿಂದನಾಯಕ ಸೇರಿದಂತೆ ಇತರರು ಇದ್ದರು.

ವರದಿ: ಬಸವರಾಜು ಎಸ್.ಹಂಗಳ