
ಚಾಮರಾಜನಗರ: ಬಸವಜಯಂತಿ ಅಂಗವಾಗಿ ನಗರದ ದೊಡ್ಡ ಅಂಗಡಿ ಬೀದಿಯಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಡಿವೈಎಸ್ಪಿ ಪ್ರಿಯದರ್ಶಿನಿ ಈ.ಸಾಣೆಕೊಪ್ಪ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ಎಪಿಎಂಸಿ ನಿರ್ದೇಶಕ ವೆಂಕಟರಾವ್(ಎಸ್‌ಎನ್‌ಪಿ), ಜಿಲ್ಲಾ ವೀರಶೈವ ಮಹಾಸಭೆ ಖಜಾಂಚಿ ವಿಶ್ವನಾಥ್, ವೀರಶೈವ ಸಮಾಜದ ಮುಖಂಡರಾದ ಸಿ.ಪಿ.ಮಲ್ಲಿಕಾರ್ಜುನಸ್ವಾಮಿ, ಹೋಟೆಲ್ ಮಹೇಶ್, ಮುರುಘ,ಸ್ವಾಮಿ, ಬಿ.ಸ್ವಾಮಿ, ಸೇರಿದಂತೆ ಇತರರು ಹಾಜರಿದ್ದರು.
